ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ಅಧಿಕಾರಿಗಳ ದಾಳಿ: ನೂರಾರು ಟನ್ ನಕಲಿ ರಸಗೊಬ್ಬರ ಜಪ್ತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 23, 2022 | 8:33 AM

ಕಾರು ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ಸಾವಿನ ಹೆದ್ದಾರಿಯಲ್ಲಿ ಅಪಘಾತಕ್ಕೆ ಮತ್ತೆರಡು ಬಲಿರುವಂತಹ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಗುಡ್ಡೆಹೊಸೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ಅಧಿಕಾರಿಗಳ ದಾಳಿ: ನೂರಾರು ಟನ್ ನಕಲಿ ರಸಗೊಬ್ಬರ ಜಪ್ತಿ
ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ಅಧಿಕಾರಿಗಳು ದಾಳಿ ಮಾಡಿರುವುದು.
Follow us on

ಮೈಸೂರು: ನಕಲಿ ರಸಗೊಬ್ಬರ (Fake Fertilizer) ತಯಾರಿಕಾ ಘಟಕದ ಮೇಲೆ ಅಧಿಕಾರಿಗಳ ದಾಳಿ ಮಾಡಿದ್ದು, ಅಪಾರ ಪ್ರಮಾಣದ ನಕಲಿ ರಸಗೊಬ್ಬರ ವಶಕ್ಕೆ ಪಡೆಯಲಾಗಿದೆ. ನಂಜನಗೂಡು ತಾಲ್ಲೂಕು ಹಿರೀಕಾಟಿ ಗ್ರಾಮದಲ್ಲಿ ನಕಲಿ ಗೊಬ್ಬರ ತಯಾರಿಕಾ ಘಟಕ ನಡೆಸಲಾಗುತ್ತಿತ್ತು. ನಂಜನಗೂಡು ಹಾಗೂ ಮೈಸೂರು ಕೃಷಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ನೂರಾರು ಟನ್ ನಕಲಿ ರಸಗೊಬ್ಬರ ವಶಕ್ಕೆ ಪಡೆಯಲಾಗಿದೆ. ಜಮೀನು‌ ಮಾಲೀಕ‌ ಹಾಗೂ ಆರೋಪಿಗಳು ಪರಾರಿಯಾಗಿದ್ದು, ಮಣ್ಣಿಗೆ ಗೊಬ್ಬರದ ಬಣ್ಣ ಮಿಶ್ರಣ ಮಾಡಲಾಗಿದೆ. ಪ್ರತಿಷ್ಠಿತ ಕಂಪನಿಯ ಬ್ಯಾಗ್‌ಗಳಲ್ಲಿ ತುಂಬಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕಾರು ಬೈಕ್​ ನಡುವೆ ಡಿಕ್ಕಿ: ಬೈಕ್​ ಸವಾರ ಸಾವು

ಕೊಡಗು: ಕಾರು ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ಸಾವಿನ ಹೆದ್ದಾರಿಯಲ್ಲಿ ಅಪಘಾತಕ್ಕೆ ಮತ್ತೆರಡು ಬಲಿರುವಂತಹ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಗುಡ್ಡೆಹೊಸೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬೈಕ್ ಸವಾರ ಸಚಿನ್(23), ಪೊನ್ನಪ್ಪ(28) ದುರ್ಮರಣ ಹೊಂದಿರುವವರು. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನಾಪತ್ತೆಯಾಗಿದ್ದ ಗೃಹಿಣಿ ಕಾಡಂಚಿನಲ್ಲಿ ಪತ್ತೆ

ಮೈಸೂರು: ನಂಜನಗೂಡು ತಾಲೂಕಿನ ಕೊಲ್ಲೂಪುರ ಗ್ರಾಮದಲ್ಲಿ ಅರ್ಚಕನ ಜೊತೆ ಪರಾರಿಯಾಗಿದ್ದ ಗೃಹಿಣಿ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ. 10 ದಿನಗಳ ಬಳಿಕ 35 ವರ್ಷದ ಗೃಹಿಣಿ ಪತ್ತೆಯಾಗಿದ್ದು, ಜೂನ್ 12ರಂದು ಮಹದೇಶ್ವರ ದೇವಸ್ಥಾನದ ಅರ್ಚಕ ಸಂತೋಷ್ ಜೊತೆ ಪರಾರಿಯಾಗಿದ್ದಳು. ಅರ್ಚಕನೇ ಬೇಕು ಎಂದು ಗೃಹಿಣಿ ಪಟ್ಟು ಹಿಡಿದಿದ್ದಳು. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಗಾಣಗಾಪುರದ ದತ್ತಾತ್ರೇಯ ದೇಗುಲದಲ್ಲಿ ಅರ್ಚಕರಿಂದ ವಂಚನೆ?

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇಗುಲದಲ್ಲಿ ಅರ್ಚಕರಿಂದಲೇ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ. ವಲ್ಲಭ ಪೂಜಾರಿ, ಅಂಕುರ್ ಪೂಜಾರಿ, ಪ್ರತೀಕ್ ಪೂಜಾರಿ
ಗಂಗಾಧರ್ ಪೂಜಾರಿ, ಶರತ್ ಭಟ್ ಪೂಜಾರಿ ವಿರುದ್ಧ ದೇಗುಲದ ಆಡಳಿತಾಧಿಕಾರಿ ನಾಮದೇವ್ ಅವರಿಂದ ದೂರು ನೀಡಲಾಗಿದೆ. ದೇಗುಲದ ಸರ್ಕಾರಿ ವೆಬ್‌ಸೈಟ್‌ ಇದ್ದರೂ ನಕಲಿ ವೆಬ್​ಸೈಟ್ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ ಎನ್ನಲಾಗುತ್ತಿದೆ. ಆನ್​ಲೈನ್ ಮೂಲಕ ದಕ್ಷಿಣೆ ಪಡೆದು ಅರ್ಚಕರು  ವಂಚಿಸುತ್ತಿದ್ದು, 5-6 ವರ್ಷಗಳಿಂದ ಸಾಕಷ್ಟು ಹಣ ಸಂಪಾದಿಸಿದ್ದಾರೆ. ಅರ್ಚಕರ‌ ವಿರುದ್ಧ ಗಾಣಗಾಪುರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:06 am, Thu, 23 June 22