ಮೈಸೂರು: ಜಿಲ್ಲೆಯ ಟಿ.ನರಸೀಪುರ (T Narasipura) ತಾಲೂಕಿನ ಹೆಳವರ ಹುಂಡಿ ಗ್ರಾಮದ ಬಳಿ ಆಯೋಜಿಸಲಾಗಿದ್ದ ಸಚಿವ ಡಾ. ಹೆಚ್.ಸಿ ಮಹದೇವಪ್ಪ (H. C. Mahadevappa) ಕೃತಜ್ಞತಾ ಸಭೆಯಲ್ಲಿ ಬಾಡೂಟದ ವೇಳೆ ನೂಕುನುಗ್ಗಲು ಸಂಭವಿಸಿ ನೆಲಕ್ಕೆ ಬಿದ್ದಿದ್ದ ಅಜ್ಜಿಯೊಬ್ಬರ ಕಾಲು ಮುರಿದಿದೆ. ಚಿಕ್ಕಮುತ್ತಮ್ಮ (66) ಅಜ್ಜಿಯ ಮೂಳೆ ಮುರಿದಿದ್ದು, ಕೆ.ಆರ್ ಆಸ್ಪತ್ರೆಗೆ (KR Hospital) ದಾಖಲಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಗೆ ಬಾಡೂಟ ಆಯೋಜಿಸಲಾಗಿತ್ತು. ಭರ್ಜರಿ ಬಾಡೂಟದ ವೇಳೆ ಭಾರಿ ನೂಕುನುಗ್ಗಲು ಸಂಭವಿಸಿದೆ. ನೂಕುನುಗ್ಗಲಲ್ಲಿ ಸಿಲುಕಿ ಕೆಳಗೆ ಬಿದ್ದ ಪರಿಣಾಮ ಚಿಕ್ಕಮುತ್ತಮ್ಮ ಅವರ ಮೂಳೆ ಮುರಿದಿದೆ.
ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಗರದ ಮೆಜೆಸ್ಟಿಕ್ನ ಸಂಗೊಳ್ಳಿ ರಾಯಣ್ಣ ಸೇತುವೆ ಬಳಿ ನಡೆದಿದೆ. ಲತಾ ಮೃತ ಮಹಿಳೆ. ಕೆಎಸ್ಆರ್ಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಮಹಿಳೆ ಮತ್ತು ಪತಿ ಬೈಕ್ನಲ್ಲಿ ಬಟ್ಟೆ ಅಂಗಡಿಗೆ ಶಾಪಿಂಗ್ಗಾಗಿ ತೆರಳುತ್ತಿದ್ದರು. ಮತ್ತೊಂದು ಬೈಕ್ನಲ್ಲಿ ಪುತ್ರಿ ಕೂಡ ತೆರಳುತ್ತಿದ್ದರು. ಈ ವೇಳೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಇಳಿಯುವ ವೇಳೆ ವೇಗವಾಗಿ ಬಲಕ್ಕೆ ಬಸ್ ಬಂದಿದ್ದು, ಬಸ್ ಹಿಂಬದಿ ದ್ವಿಚಕ್ರ ವಾಹನಕ್ಕೆ ಟಚ್ ಆಗಿ ಇಬ್ಬರು ರಸ್ತೆಗೆ ಬಿದ್ದಿದ್ದಾರೆ.
ಇದನ್ನೂ ಓದಿ: Mysuru zoo: ಮೈಸೂರು ಮೃಗಾಲಯದಲ್ಲಿ ಹೊಸ ಆಕರ್ಷಣೆ, ರಿಂಗ್-ಟೈಲ್ಡ್ ಲೆಮರ್ಗಳಿಗೆ ಸಿದ್ದವಾಯ್ತು ಮನೆ
ಈ ವೇಳೆ ಮಹಿಳೆ ಮೇಲೆ ಬಸ್ ಹರಿದಿದೆ. ಸದ್ಯ ಲತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು: ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಕೇರಾ ತಾಲ್ಲೂಕಿನ ಆಲದಮರದ ತಾಂಡದಲ್ಲಿ ನಡೆದಿದೆ. ವಿರೂಪಾಕ್ಷ(28) ಮೃತ ರ್ದುದೈವಿ. ವಿರೂಪಾಕ್ಷ ಅರಕೇರಾ ಜುಟಮರಡಿ ಕೆಇಬಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಇಂದು(ಜೂ.4) ವಿದ್ಯುತ್ ಪೂರೈಕೆಯ ಸಮಸ್ಯೆಯನ್ನು ಪರಿಹರಿಸಲು ಕಂಬ ಹತ್ತಿದ್ದನು. ಈ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದು, ವಿದ್ಯುತ್ ಕಂಬದ ಮೇಲೆಯೇ ಕೊನೆಯುಸಿರೆಳದಿದ್ದಾನೆ. ಈ ಕುರಿತು ದೇವದುರ್ಗ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:04 pm, Sun, 4 June 23