Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysuru zoo: ಮೈಸೂರು ಮೃಗಾಲಯದಲ್ಲಿ ಹೊಸ ಆಕರ್ಷಣೆ, ರಿಂಗ್-ಟೈಲ್ಡ್ ಲೆಮರ್​ಗಳಿಗೆ ಸಿದ್ದವಾಯ್ತು ಮನೆ

ರಿಂಗ್-ಟೇಲ್ಡ್ ಲೆಮರ್‌ಗಳು ನೈಋತ್ಯ ಮಡಗಾಸ್ಕರ್‌ನಲ್ಲಿ ವಾಸಿಸುತ್ತವೆ, ಉಂಗುರ ಬಾಲದ ಲೆಮೂರ್ (ಲೆಮುರ್ ಕ್ಯಾಟ್ಟಾ) IUCN ರೆಡ್ ಲಿಸ್ಟ್‌ನಲ್ಲಿ ಅಳಿವಿನಂಚಿನಲ್ಲಿರುವಂತೆ ಪಟ್ಟಿಮಾಡಲಾಗಿದೆ.

Mysuru zoo: ಮೈಸೂರು ಮೃಗಾಲಯದಲ್ಲಿ ಹೊಸ ಆಕರ್ಷಣೆ, ರಿಂಗ್-ಟೈಲ್ಡ್ ಲೆಮರ್​ಗಳಿಗೆ ಸಿದ್ದವಾಯ್ತು ಮನೆ
ರಿಂಗ್-ಟೈಲ್ಡ್ ಲೆಮರ್‌
Follow us
ಆಯೇಷಾ ಬಾನು
|

Updated on: May 31, 2023 | 8:54 AM

ಮೈಸೂರು: ಅಳಿವಿನಂಚಿನಲ್ಲಿರುವ ರಿಂಗ್-ಟೈಲ್ಡ್ ಲೆಮರ್‌(Ring-Tailed Lemurs) ಎಂಬ ಪ್ರಾಣಿಗಳಿಗಾಗಿ ಮೈಸೂರು ಮೃಗಾಲಯದಲ್ಲಿ(Mysore Zoological Park) ಹೊಸದಾಗಿ ನಿರ್ಮಿಸಲಾದ ಆವರಣವನ್ನು ಮೇ 30ರ ಮಂಗಳವಾರ ಲೋಕಾರ್ಪಣೆ ಮಾಡಲಾಗಿದೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ (BRBNMPL) ವತಿಯಿಂದ ಸಿಎಸ್‌ಆರ್ ನಿಧಿಯಡಿ ನಿರ್ಮಿಸಲಾಗಿದೆ. ₹ 75 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ಹಿಂದೆ ಲೆಮರ್‌ಗಳ ವಾಸಕ್ಕೆ ಇದ್ದ ಆವರಣವು ಚಿಕ್ಕದಾಗಿದ್ದು, ಇತ್ತೀಚೆಗೆ ತಂದಿದ್ದ ಲೆಮರ್‌ಗಳಿಗೆ ಜಾಗ ಇರಲಿಲ್ಲ. ಹೀಗಾಗಿ 75 ಲಕ್ಷ ವೆಚ್ಚದಲ್ಲಿ ಹೊಸದಾಗಿ ವಾಸಕ್ಕೆ ಯೋಗ್ಯವಾದ ಮನೆ ನಿರ್ಮಾಣ ಮಾಡಲಾಗಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರ ಮತ್ತು ಮೃಗಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಅಧಿಕಾರಿಗಳು ಔಪಚಾರಿಕವಾಗಿ ಉದ್ಘಾಟಿಸಿದ ಆವರಣವನ್ನು ನಿರ್ಮಿಸಲು BRBNMPL ಒಪ್ಪಿಗೆ ನೀಡಿತು. ಬಿಆರ್‌ಬಿಎನ್‌ಪಿಎಲ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕ ಹರ್ಷಕುಮಾರ್ ಮನ್ರಾಲ್ ಅವರು ಈ ಸೌಲಭ್ಯವೊಳ್ಳ ಮನೆಯನ್ನು ಉದ್ಘಾಟಿಸಿದರು. ಈ ವೇಳೆ ZAK ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ಮತ್ತು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಉಪಸ್ಥಿತರಿದ್ದರು.

ಇನ್ನು ಈ ವೇಳೆ ಮಾತನಾಡಿದ ಕುಲಕರ್ಣಿ ಅವರು, ಈ ಹಿಂದೆ ತಂದಿದ್ದ ಲೆಮರ್‌ಗಳನ್ನು ಕಳೆದ ವರ್ಷದಿಂದ ಕ್ವಾರಂಟೈನ್‌ನಲ್ಲಿಟಲಾಗಿದೆ ಎಂದು ತಿಳಿಸಿದರು. ಒಂದು ತಿಂಗಳ ಹಿಂದೆ ಆವರಣವು ಸಿದ್ಧವಾಗಿದ್ದರೂ, ಅದನ್ನು ಔಪಚಾರಿಕವಾಗಿ ಮಂಗಳವಾರ ಉದ್ಘಾಟಿಸಲಾಯಿತು. ಕೆಲವು ದಿನಗಳ ಹಿಂದೆ ಕಂಡೀಷನಿಂಗ್‌ಗಾಗಿ ಲೆಮರ್‌ಗಳನ್ನು ಹೊಸ ಸೌಲಭ್ಯಕ್ಕೆ ಬಿಡುಗಡೆ ಮಾಡಲಾಯಿತು. ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ವಿದೇಶಿ ಮೃಗಾಲಯದಿಂದ ಸ್ವಾಧೀನಪಡಿಸಿಕೊಂಡ ಐದು ಲೆಮರ್‌ ಸೇರಿದಂತೆ ಮೈಸೂರು ಮೃಗಾಲಯದಲ್ಲೀಗ ಏಳು ಲೆಮರ್‌ಗಳಿವೆ.

ಇದನ್ನೂ ಓದಿ: Interesting Facts: ಅತೀ ಕಡಿಮೆ ಸಮಯ ನಿದ್ರಿಸುವ ಪ್ರಾಣಿಗಳು ಯಾವುದು ಗೊತ್ತಾ?

ಮೃಗಾಲಯದಲ್ಲಿ ಪ್ರವಾಸಿಗರಿಗೆ ಲೆಮರ್‌ಗಳು ಹೊಸ ಆಕರ್ಷಣೆಯಾಗಲಿವೆ. ಎಲ್ಲಾ ಏಳನ್ನು ಸರದಿಯಲ್ಲಿ ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು. ಎರಡು ಗಂಡು ಮತ್ತು ಮೂರು ಹೆಣ್ಣು ಉಂಗುರ-ಬಾಲದ ಲೆಮರ್‌ಗಳು ಮತ್ತು ಎರಡು ಹೆಣ್ಣು ಮತ್ತು ಒಂದು ಗಂಡು ವಾಲಾಬಿಗಳನ್ನು ಮೃಗಾಲಯದ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದಕ್ಕೆ ಪ್ರತಿಯಾಗಿ, ಜೆಕ್(ZAK) ಮೃಗಾಲಯವು ಒಂದು ಜೋಡಿ ಕಾಡು ನಾಯಿಗಳು ಮತ್ತು ಒಂದು ಜೋಡಿ ತೋಳಗಳನ್ನು ಕೇಳಿದೆ. ಕಳೆದ ವರ್ಷ ಮೈಸೂರು ಮೃಗಾಲಯದ ಮೊದಲ ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಇದಾಗಿದೆ ಎಂದು ಮಾಹಿತಿ ನೀಡಿದರು.

ಅಳಿವಿನಂಚಿನಲ್ಲಿರುವ ಈ ಪ್ರಾಣಿಗಳ ಉಳಿವಿಗಾಗಿ ಕಾಳಜಿ ತೋರಿದ BRBNMPL ನ ಎಲ್ಲರಿಗೂ ಮೃಗಾಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜೀತ ಕುಲಕರ್ಣಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ರಿಂಗ್–ಟೇಲ್ಡ್ ಲೆಮರ್‌

ರಿಂಗ್-ಟೇಲ್ಡ್ ಲೆಮರ್‌ಗಳು ನೈಋತ್ಯ ಮಡಗಾಸ್ಕರ್‌ನಲ್ಲಿ ವಾಸಿಸುತ್ತವೆ, ಉಂಗುರ ಬಾಲದ ಲೆಮೂರ್ (ಲೆಮುರ್ ಕ್ಯಾಟ್ಟಾ) IUCN ರೆಡ್ ಲಿಸ್ಟ್‌ನಲ್ಲಿ ಅಳಿವಿನಂಚಿನಲ್ಲಿರುವಂತೆ ಪಟ್ಟಿಮಾಡಲಾಗಿದೆ. ಈ ಲೆಮರ್ ಒಣ ಕಾಡುಗಳು, ಸ್ಪೈನಿ ಪೊದೆಗಳು, ಮಲೆನಾಡಿನ ಕಾಡುಗಳು, ಮ್ಯಾಂಗ್ರೋವ್‌ಗಳಲ್ಲಿ ಕಂಡುಬರುತ್ತದೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ