ಸಿಎಂ ಭೇಟಿಯಾಗಲು ವರುಣಾ ಕ್ಷೇತ್ರದ ಜನರಿಗೆ ಮುಕ್ತ ಅವಕಾಶ
ಮುಖ್ಯಮಂತ್ರಿಯನ್ನು ಭೇಟಿಯಾಗಲು ವರುಣ ಕ್ಷೇತ್ರದ ಜನರಿಗೆ ಮುಕ್ತ ಅವಕಾಶ ನೀಡಲಾಗಿದೆ. ವರುಣಾ ಕ್ಷೇತ್ರದ ಜನರು ತಮ್ಮ ವಿಳಾಸ ತೋರಿಸಿ ಬರಬಹುದಾಗಿದೆ.
ಬೆಂಗಳೂರು: ಯಾವುದೇ ಜನಪ್ರತಿನಿಧಿಗಳನ್ನು ಭೇಟಿಯಾಗುವುದು ಅಷ್ಟು ಸುಲಭವಲ್ಲ. ಹೀಗಿದ್ದಾಗ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಸಾಧ್ಯವೇ? ನಿವಾಸ ಅಥವಾ ಕಚೇರಿ ಮುಂದೆ ಬಿಗಿ ಪೊಲೀಸ್ ಭದ್ರತೆ ಇರುತ್ತದೆ. ಗಣ್ಯ ವ್ಯಕ್ತಿಗಳಿಗೂ ಅಷ್ಟು ಸಲುಭದಲ್ಲಿ ಒಳಪ್ರವೇಶ ಇರುವುದಿಲ್ಲ. ಹೀಗಿದ್ದಾಗ ವರುಣಾ ಕ್ಷೇತ್ರದ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾಗುವ ಅವಕಾಶ ಸುಲಭವಾಗಿ ಸಿಗಲಿದೆ. ಇದಕ್ಕಾಗಿ ನೀವು ವಿಳಾಸ ತೋರಿಸಬೇಕಷ್ಟೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ವರುಣ ಕ್ಷೇತ್ರದ ಜನರಿಗೆ ಮುಕ್ತ ಅವಕಾಶ ನೀಡಲಾಗಿದೆ. ಕ್ಷೇತ್ರದ ಜನರು ತಮ್ಮ ವಿಳಾಸ ತೋರಿಸಿ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ಬರಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್ ಅಥವಾ ಐಡಿ ಕಾರ್ಡ್ ಪರಿಶೀಲಿಸಿ ಪೊಲೀಸರು ಒಳಪ್ರವೇಶ ನೀಡುತ್ತಿದ್ದಾರೆ.
ಇದನ್ನೂ ಓದಿ: CM Siddaramaiah: ಗ್ಯಾರಂಟಿಗಳನ್ನು ಈಡೇರಿಸಲು ಹಣ ಹೇಗೆ ಹೊಂದಿಸುತ್ತೀರಿ ಅಂತ ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೋಪ!
ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಶಾಸಕರಾಗಿದ್ದಾರೆ. ಹೀಗಾಗಿ ಅಧಿಕಾರದ ಸಂದರ್ಭದಲ್ಲಿ ಸ್ವಕ್ಷೇತ್ರದ ಮತದಾರರಿಗೆ ತಮ್ಮ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸಲು ವಿಪಕ್ಷಗಳು ಟೊಂಕ ಕಟ್ಟಿ ನಿಂತಿದ್ದಾಗ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ತಮ್ಮ ಕ್ಷೇತ್ರವನ್ನು ತಂದೆಗೆ ಬಿಟ್ಟುಕೊಟ್ಟರು. ಅದರಂತೆ, ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ 2ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Wed, 31 May 23