ಮೈಸೂರು: ನಾಳೆ ದಕ್ಷಿಣಕಾಶಿ ನಂಜನಗೂಡಿನಲ್ಲಿ ಪಂಚ ಮಹಾರಥೋತ್ಸವ; ಕಾರ್ಯಕ್ರಮಗಳ ವಿವರ ಹೀಗಿದೆ’

ನಾಳೆ ದಕ್ಷಿಣಕಾಶಿ ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರಾ ಮಹೋತ್ಸವದ ಅಂಗವಾಗಿ ಪುರಾಣ ಪ್ರಸಿದ್ಧ ಗೌತಮ ಪಂಚ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಬೆಳಗ್ಗೆ 6.00ರಿಂದ 6.40ರವರೆಗಿನ ಶುಭ ಲಗ್ನದಲ್ಲಿ ಶ್ರೀ ಮನ್ಮಹಾಗೌತಮ ರಥಾರೋಹಣದೊಂದಿಗೆ ಪಂಚ ಮಹಾರಥೋತ್ಸವ ಕಾರ್ಯಕ್ರಮ ಜರುಗಲಿದೆ.

ಮೈಸೂರು: ನಾಳೆ ದಕ್ಷಿಣಕಾಶಿ ನಂಜನಗೂಡಿನಲ್ಲಿ ಪಂಚ ಮಹಾರಥೋತ್ಸವ; ಕಾರ್ಯಕ್ರಮಗಳ ವಿವರ ಹೀಗಿದೆ
ನಾಳೆ ದಕ್ಷಿಣಕಾಶಿ ನಂಜನಗೂಡಿನಲ್ಲಿ ಪಂಚ ಮಹಾರಥೋತ್ಸವ

Updated on: Apr 01, 2023 | 1:55 PM

ಮೈಸೂರು: ನಾಳೆ(ಏ.2) ದಕ್ಷಿಣಕಾಶಿ ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ(Nanjanagudu Srikanteshwara Swami) ದೊಡ್ಡಜಾತ್ರಾ ಮಹೋತ್ಸವದ ಅಂಗವಾಗಿ ಪುರಾಣ ಪ್ರಸಿದ್ಧ ಗೌತಮ ಪಂಚ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಬೆಳಗ್ಗೆ 6.00ರಿಂದ 6.40ರವರೆಗಿನ ಶುಭ ಲಗ್ನದಲ್ಲಿ ಶ್ರೀ ಮನ್ಮಹಾಗೌತಮ ರಥಾರೋಹಣದೊಂದಿಗೆ ಪಂಚ ಮಹಾರಥೋತ್ಸವ ಕಾರ್ಯಕ್ರಮ ಜರುಗಲಿದೆ. ಇನ್ನು ಈ ರಥೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ‌.

ಕಾರ್ಯಕ್ರಮಗಳ ವಿವರ ಹೀಗಿದೆ

ನಂಜುಂಡೇಶ್ವರ ಎಂದೇ ಹೆಸರಾದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಜರುಗುವ ದೊಡ್ಡ ಜಾತ್ರಾ ಮಹೋತ್ಸವದ ಪಂಚ ಮಹಾರಥೋತ್ಸವದಲ್ಲಿ ಗಣಪತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ, ಪಾರ್ವತಿ ಹಾಗೂ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಗಳನ್ನು 5 ಅಲಂಕೃತ ರಥಗಳಲ್ಲಿ ಪ್ರತಿಷ್ಠಾಪಿಸಲಾಗುವುದು. ಅರ್ಚಕರು ಪೂಜಾ, ವಿಧಿ ವಿಧಾನಗಳನ್ನು ಪೂರೈಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ದೇವಾಲಯದ ಆವರಣದಿಂದ ಸಂಪ್ರದಾಯದಂತೆ ಗಣಪತಿ ರಥವನ್ನು ರಥ ಬೀದಿಯಲ್ಲಿ ಹೊರಡಿಸಲಾಗುತ್ತದೆ. ತದನಂತರ ಅದರ ಹಿಂದೆ ಶ್ರೀಕಂಠೇಶ್ವರ ಸ್ವಾಮಿಯ ಬೃಹತ್ ರಥ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ರಥಗಳು ಹಿಂಬಾಲಿಸಲಿದೆ.

ಇದನ್ನೂ ಓದಿ:ಐತಿಹಾಸಿಕ ಬೇಲೂರಿನ ಜಾತ್ರೆಯಲ್ಲಿ ಮತ್ತೆ ಶುರುವಾದ ಧರ್ಮ ಸಂಘರ್ಷ; ದೇವಾಲಯದಲ್ಲಿ ಕುರಾನ್​ ಪಠಣ ವಿರೋಧ

ಇದರೊಂದಿಗೆ ಶ್ರೀಕಂಠೇಶ್ವರಸ್ವಾಮಿಯನ್ನು ಹೊತ್ತ 10 ಅಡಿ ವ್ಯಾಸದ 6 ಬೃಹತ್‌ ಚಕ್ರಗಳನ್ನೊಳಗೊಂಡಿರುವ ವಿಶಿಷ್ಟ ಕಲಾ ಕೆತ್ತನೆ, ನಾನಾ ಬಣ್ಣಗಳ ವಸ್ತ್ರಗಳು, ವಿವಿಧ ಬಗೆಯ ಪುಷ್ಪಗಳು, ಬಣ್ಣದ ಧ್ವಜಗಳಿಂದ ಅಲಂಕೃತಗೊಂಡಿದ್ದ ಸುಮಾರು 95 ಅಡಿ ಎತ್ತರದ ಬೃಹತ್‌ ರಥವನ್ನು ಜಾತಿ ಧರ್ಮಗಳ ಬೇಧವಿಲ್ಲದೆ ಎಲ್ಲಾ ವರ್ಗದ ಜನರು ಸೇರಿ ಭಕ್ತಿ ಭಾವದಿಂದ ಎಳೆಯುವರು. ಈ ಭವ್ಯ ಸಂದರ್ಭವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಹಾಗೆಯೇ ಏಪ್ರಿಲ್ 4ರಂದು ರಾತ್ರಿ 7ಗಂಟೆಗೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ಜರುಗಲಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:54 pm, Sat, 1 April 23