ಐತಿಹಾಸಿಕ ಬೇಲೂರಿನ ಜಾತ್ರೆಯಲ್ಲಿ ಮತ್ತೆ ಶುರುವಾದ ಧರ್ಮ ಸಂಘರ್ಷ; ದೇವಾಲಯದಲ್ಲಿ ಕುರಾನ್​ ಪಠಣ ವಿರೋಧ

ಕಳೆದ ವರ್ಷ ಹಿಂದೂ ದೇವತೆಗಳ ಜಾತ್ರೆ, ಉತ್ಸವಗಳ ವೇಳೆ ಅನ್ಯ ಧರ್ಮಿಯರ ವ್ಯಾಪಾರಕ್ಕೆ ಅವಕಾಶ ಇಲ್ಲ ಎನ್ನುವ ವಿವಾದ ದೊಡ್ಡ ಸದ್ದು ಮಾಡಿತ್ತು. ಇದೀಗ ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವ ದೇವರ ಜಾತ್ರೆ ವೇಳೆ ಕೂಡ ಈ ಸದ್ದು ಕೇಳಿ ಬಂದಿದೆ. ರಥೋತ್ಸವಕ್ಕೂ ಮುನ್ನ ನಡೆಯುವ ಖುರಾನ್ ಪಠಣ ನಿಲ್ಲಬೇಕು ಎಂದು ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದಿವೆ.

Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 27, 2023 | 12:41 PM

ಹಾಸನ: ಐತಿಹಾಸಿಕ ಬೇಲೂರು ಚನ್ನಕೇಶವ ರಥೋತ್ಸವದ ಮೇಲೆ ಇದೀಗ ಧರ್ಮದಂಗಲ್ ಕರಿನೆರಳು ಬಿದ್ದಿದೆ. ರಥೋತ್ಸವಕ್ಕೂ ಮುನ್ನ ನಡೆಯುವ ಕುರಾನ್ ಪಠಣ ತಡೆಗೆ ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದಿವೆ. ಈ ವಿಚಾರವಾಗಿ ಮಾರ್ಚ್ 28ಕ್ಕೆ ಹೋರಾಟಕ್ಕೆ ಕರೆ ನೀಡಿದ್ದು, ಏಪ್ರಿಲ್ 4ರಂದು ನಡೆಯುವ ಜಾತ್ರೆ ಮೇಲೆ ಕರಿಚಾಯೆ ಮೂಡಿದೆ. ಹೌದು ಹೊಯ್ಸಳರ ಕಾಲದ ವಿಶ್ವ ವಿಖ್ಯಾತ ಐತಿಹಾಸಿಕ ಬೇಲೂರಿನ ಚನ್ನಕೇಶವಸ್ವಾಮಿ ದೇವಾಲಯ ತನ್ನ ಕಲೆ ವಾಸ್ತು ಶಿಲ್ಪಗಳ ಮೂಲಕ ಕೆಲವೇ ದಿನಗಳಲ್ಲಿ ವಿಶ್ವ ಪಾರಂಪರಿಕ ತಾಣವಾಗುವ ಹೊತ್ತಿನಲ್ಲಿ, ಇದೀಗ ವರ್ಷಕ್ಕೊಮ್ಮೆ ನಡೆಯುವ ರಥೊತ್ಸವದ ವೇಳೆ ಪರಂಪರಾಗತವಾಗಿ ನಡೆಯುತ್ತಿದ್ದ ಕುರಾನ್ ಪಠಣಕ್ಕೆ ಹಿಂದೂ ಧರ್ಮ ವಿರೋಧ ವ್ಯಕ್ತಪಡಿಸಿದೆ. ಕುರಾನ್ ಪಠಣ ಹಿಂದೂ ಬಾಂಧವರ ಭಾವನೆಗೆ ಧಕ್ಕೆ ತರುವ ಕೆಲಸ ಎನ್ನುವ ಕೂಗು ಕೇಳಿ ಬಂದಿದೆ.

ಕಳೆದ ವರ್ಷ ಹಿಂದೂ ದೇವಾಲಯಗಳ ವ್ಯಾಪ್ತಿಯಲ್ಲಿ ಅನ್ಯ ಧರ್ಮಿಯರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಇಲ್ಲ ಎನ್ನುವ ವಿವಾದ ನಡೆದು ಕಡೆಗೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿದಿತ್ತು. ಕುರಾನ್ ಪಠಣದ ಮೂಲಕವೇ ಸಂಪ್ರದಾಯದಂತೆ ಜಾತ್ರೆ ನಡೆದಿತ್ತು. ಆದರೆ ಈ ವರ್ಷ ಎರಡು ದಿನಗಳ ಹಿಂದೆ ಹಾಸನದ ವೈದ್ಯ ಹಾಗೂ ಇತಿಹಾಸದ ಬಗ್ಗೆ ಅದ್ಯಯನ ಮಾಡುತ್ತಿರುವ ಡಾ.ರಮೇಶ್ ಬೇಲೂರಿನ ಶ್ರೀಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ ಎನ್ನುವ ಪುಸ್ತಕ ಬರೆಯುವ ಮೂಲಕ ಐತಿಹಾಸಿಕ ದಾಖಲೆಗಳು, 1932ರಲ್ಲಿ ಇಂತಹ ಒಂದು ಸಂಪ್ರದಾಯವನ್ನು ದೇವಾಲಯದ ಮ್ಯಾನ್ಯುಯಲ್​ನಲ್ಲಿ ಸೇರಿಸುವ ಮೂಲಕ ಪರಂಪರೆಗೆ ಅಪಚಾರ ಎಸಗಲಾಗಿದೆ ಎನ್ನುವುದನ್ನ ದಾಖಲೆಗಳೊಂದಿಗೆ ವಿವರಿಸಿ ಪುಸ್ತಕ ರಚನೆ ಮಾಡಿದ್ದಾರೆ.

ಇದನ್ನೂ ಓದಿ:ಚುನಾವಣಾ ಹೊತ್ತಲ್ಲಿ ಕಾಫಿನಾಡಲ್ಲಿ ಮತ್ತೆ ಮುನ್ನೆಲೆಗೆ ಬಂದ ಧರ್ಮ ದಂಗಲ್

ಇದೇ ಪುಸ್ತಕ ಹಾಗೂ ಕೆಲ ದಾಖಲೆಗಳನ್ನ ಮುಂದಿಟ್ಟು ರಥೋತ್ಸವದ ವೇಳೆ ಖುರಾನ್ ಪಠನ ನಿಲ್ಲಬೇಕು ಎಂದು ಜನರು ಹೋರಾಟಕ್ಕಿಳಿದಿದ್ದಾರೆ. ಸೌಹಾರ್ದತೆ ಓಕೆ, ಎಲ್ಲರೂ ಒಂದಾಗಿ ಇರಬೇಕು ಎನ್ನೋದು ಸರಿ ಆದರೆ ಚನ್ನಕೇಶವನ ಜಾತ್ರೆ ವೇಳೆ ಗೋವಿಂದ ನಾಮಸ್ಮರಣೆ ಮೊಳಗಬೇಕೇ ವಿನಃ, ಕುರಾನ್ ಪಠಣ ಸರಿಯಲ್ಲ. ದರ್ಗಾಗೆ ಹೋಗಿ ನಾವು ಹನುಮಾನ್ ಚಾಲಿಸ ಹೇಳೋಕೆ ಆಗುತ್ತಾ ಹಾಗೆಯೇ ಕೆಲವೇ ವರ್ಷಗಳ ಹಿಂದೆ ಸೇರಿಸಲಾಗಿರುವ ಇಂತಹ ಆಚರಣೆಯನ್ನು ಕೈಬಿಡಬೇಕು ಎಂದು ಪುಸ್ತಕದ ರಚನಕಾರ ಡಾ. ರಮೇಶ್ ಒತ್ತಾಯಿಸಿದ್ದಾರೆ.

ಮಾರ್ಚ್ 24ರಂದು ಹಾಸನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪುಸ್ತಕ ಬಿಡುಗಡೆ ಮಾಡುವ ಮೂಲಕ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ನಡಯುವ ಕುರಾನ್ ಪಠಣವನ್ನು ರದ್ದು ಮಾಡಲು ಆಗ್ರಹಿಸಲಾಗಿದೆ. ಸ್ವತಂತ್ರ ಪೂರ್ವದಲ್ಲಿ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್​ರವರು ಇದ್ದ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆದ ಕೋಮು ಗಲಭೆಯಿಂದ ಅವರ ಹೆಸರಿಗೆ ಅಂಟಿದ್ದ ಕಳಂಕವನ್ನು ತೊಳೆದುಕೊಳ್ಳಲು ಇಂತಹ ಒಂದು ಅಸಂಬದ್ದ ಅಂಶಗಳನ್ನ ಸೌಹಾರ್ದತೆ, ಸಹಿಷ್ಣುತೆ ಹೆಸರಿನಲ್ಲಿ ದೇಗುಲದ ಮ್ಯಾನ್ಯುಯಲ್​ಗೆ 1932ರಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ:Ghar Wapsi: ಅಸ್ಸಾಂನಲ್ಲಿ ಹಿಂದೂ ಧರ್ಮಕ್ಕೆ ಮರಳಿದ 100ಕ್ಕೂ ಅಧಿಕ ಕ್ರಿಶ್ಚಿಯನ್ ಕುಟುಂಬಗಳು

ಇದಕ್ಕೂ ಪೂರ್ವದಲ್ಲಿ ಇಂತಹ ಯಾವುದೇ ಆಚರಣೆ ಇರಲಿಲ್ಲ ಹಾಗೆಯೇ ಇಂತಹ ಆಚರಣೆಗಳು ಇದ್ದ ಬಗ್ಗೆ ಶಾಸನಗಳಾಗಲಿ, ಶಿಲೆಗಳಾಗಲಿ, ಯಾವುದೇ ಪತ್ರ ವ್ಯವಹಾರವಾಗಲಿ ಇಲ್ಲ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ವಿಖ್ಯಾತ ದೇಗುಲದ ಜಾತ್ರೆವೇಳೆ ಇಂತಹ ಯಾವುದೇ ಆಚರಣೆ ಇರಲಿಲ್ಲ. ಇದರ ಬಗ್ಗೆ ಯಾವುದೇ ಐತಿಹಾಸಿಕ ದಾಖಲೆಗಳು ಇಲ್ಲ. ಹಾಗಾಗಿಯೇ ಹಿಂದೂ ಧರ್ಮಾಚರಣೆ ಮಾಡುವ ಜನರ ಭಾವನೆಗೆ ಧಕ್ಕೆ ತರುವ ಇಂತಹ ಆಚರಣೆ ನಿಲ್ಲಬೇಕು ಎನ್ನುವ ಕೂಗು ಕೇಳಿ ಬಂದಿದೆ. ಐತಿಹಾಸಿಕ ಅಂಶಗಳನ್ನು ಒಳಗೊಂಡ ಪುಸ್ತಕ ಬಿಡುಗಡೆಯಾಗುತ್ತಲೆ ಇಂದು(ಮಾ.26) ಬೇಲೂರಿನಲ್ಲಿ ಹಿಂದೂ ಪರ ಸಂಘಟನೆಗಳು ತಹಶೀಲ್ದಾರ್​ಗೆ ಮನವಿ ಸಲ್ಲಿಸಿ ಹಿಂದೂಭಾವನೆಗೆ ಧಕ್ಕೆ ತರುವ ಇಂತಹ ಆಚರಣೆ ಬೇಡ ಎಂದು ಮನವಿ ಮಾಡಿದ್ದು ಮಾರ್ಚ್ 28ರಂದು ಬೃಹತ್ ಹೋರಾಟಕ್ಕೆ ಕರೆ ನೀಡಿರುವ ವಿಚಾರ ವಿವಾದದ ರೂಪ ಪಡೆದುಕೊಂಡಿದೆ.

ಒಟ್ಟಿನಲ್ಲಿ ಕಳೆದ ವರ್ಷ ವ್ಯಾಪಾರ ನಿರ್ಬಂಧದ ಹೆಸರಿನಲ್ಲಿ ನಡೆದಿದ್ದ ಧರ್ಮ ದಂಗಲ್ ಮುಗಿದು ಈ ವರ್ಷ ಹೊಸ ವಿವಾದ ಹುಟ್ಟಿಕೊಂಡಿದೆ. ಹಿಂದೂ ದೇವರ ರಥೊತ್ಸವದ ವೇಳೆ ಕುರಾನ್​ ಪಠಣ ಸೌಹಾರ್ದತೆಯ ಸಂಕೇತ ಎಂದು ಹೇಳಲಾಗುತ್ತಿದ್ದ ವಿಚಾರವೇ ಈಗ ವಿವಾದದ ರೂಪ ಪಡೆದಿದ್ದು, ಈ ಆಚರಣೆಯನ್ನ ನಿಲ್ಲಿಸಲು ಆಗ್ರಹ ಕೇಳಿ ಬಂದಿದೆ. ಕಳೆದ ವರ್ಷ ವ್ಯಾಪಾರ ನಿರ್ಬಂಧವನ್ನ ಕಾನೂನುಬದ್ದವಾಗಿಯೇ ಮಾಡಿದ್ದ ಅಧಿಕಾರಿಗಳು ಈ ಬಾರಿ ಯಾವ ಕ್ರಮ ಕೈಗೊಳ್ಳುತ್ತಾರೆ. ಎರಡನೇ ಸುತ್ತಿನ ಧರ್ಮ ದಂಗಲ್​ಗೆ ಕಾರಣವಾಗಿರುವ ವಿವಾದವನ್ನ ಹೇಗೆ ಬಗೆಹರಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

ವರದಿ: ಮಂಜುನಾಥ್ ಕೆ.ಬಿ ಟಿವಿ9 ಹಾಸನ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Mon, 27 March 23

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ