Ghar Wapsi: ಅಸ್ಸಾಂನಲ್ಲಿ ಹಿಂದೂ ಧರ್ಮಕ್ಕೆ ಮರಳಿದ 100ಕ್ಕೂ ಅಧಿಕ ಕ್ರಿಶ್ಚಿಯನ್ ಕುಟುಂಬಗಳು
ಅಸ್ಸಾಂನಲ್ಲಿ 100ಕ್ಕೂ ಅಧಿಕ ಕ್ರಿಶ್ಚಿಯನ್ ಕುಟುಂಬಕ್ಕೆ ಹಿಂದೂ ಧರ್ಮಕ್ಕೆ ಮರಳಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಕ್ರಮಕ್ಕೆ ಮುಂದಾಗಿದ್ದಾರೆ.
ಅಸ್ಸಾಂನಲ್ಲಿ 100ಕ್ಕೂ ಅಧಿಕ ಕ್ರಿಶ್ಚಿಯನ್ ಕುಟುಂಬಕ್ಕೆ ಹಿಂದೂ ಧರ್ಮಕ್ಕೆ ಮರಳಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಕ್ರಮಕ್ಕೆ ಮುಂದಾಗಿದ್ದಾರೆ. ಹಿಮಂತ ಬಿಸ್ವಾ ಸರ್ಕಾರದ ನೀತಿಗಳಿಂದ ಪ್ರೇರಿತರಾಗಿ 100 ಕ್ಕೂ ಹೆಚ್ಚು ಕ್ರಿಶ್ಚಿಯನ್ ಕುಟುಂಬಗಳು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿವೆ ಎಂದು ಬಿಜೆಪಿ ಶಾಸಕ ಪಿಯೂಷ್ ಹಜಾರಿಕಾ ಹೇಳಿದ್ದಾರೆ. ಜಾಗಿರೋಡ್ (ಮರಿಗಾಂವ್) ಕ್ಷೇತ್ರದಲ್ಲಿ ಮತಾಂತರ ನಡೆದಿದೆ.
ಅಸ್ಸಾಂನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳು ಮತ್ತೆ ತಮ್ಮ ಧರ್ಮಕ್ಕೆ ಮರಳಿರುವುದು ಖುಷಿಯ ಸಂಗತಿ ಎಂದಿದ್ದಾರೆ. ಹಿಮಂತ್ ಬಿಸ್ವಾ ಶರ್ಮಾ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತಾಂತರಗಳ ಬಗ್ಗೆ ಆಗಾಗ ಧ್ವನಿ ಎತ್ತುತ್ತಾರೆ. ಹಿಂದೂಗಳು ತಮ್ಮ ಮನೆಗಳಿಗೆ ಮರಳುವ ಬಗ್ಗೆ ಸಿಎಂ ಹಿಮಂತ ಬಿಸ್ವಾ ಶರ್ಮಾ ಸರ್ಕಾರವು ಹಲವಾರು ಬಾರಿ ಸ್ಪಷ್ಟ ಸೂಚನೆಗಳನ್ನು ನೀಡಿತ್ತು.
ತಿವಾ ಶಾಂಗ್ ಗ್ರಾಮದಲ್ಲಿ ಫೆಬ್ರವರಿ 27 ರಂದು ಆಯೋಜಿಸಲಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿದ್ದಾರೆ.
ಮತ್ತಷ್ಟು ಓದಿ:conversion: ಉತ್ತರ ಕನ್ನಡ; ಅನಾರೋಗ್ಯ ಗುಣಪಡಿಸುವ ಹೆಸರಿನಲ್ಲಿ ಪಾದ್ರಿಯಿಂದ ಮತಾಂತರ
ಇದರಿಂದಾಗಿ ಜಾಗಿರೋದ್ (ಮರಿಗಾಂವ್) ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂಗಳ ಘರ್ ವಾಪ್ಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿಂದೆ ಹಿಂದೂಗಳಾಗಿದ್ದ ಸುಮಾರು 100 ಕ್ರಿಶ್ಚಿಯನ್ ಕುಟುಂಬಗಳು ಇಲ್ಲಿಗೆ ಬಂದಿದ್ದವು. ಅವರು ಹಲವು ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದರು.
ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ಈ ಕಾರ್ಯಕ್ರಮದಲ್ಲಿ ಅವರು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಇದು ಬಹಳ ಕಡೆ ಚರ್ಚೆಯಾಗುತ್ತಿದೆ. ತಿವಾ ಬುಡಕಟ್ಟು ಜನಾಂಗದ ಸುಮಾರು 1100 ಕುಟುಂಬಗಳು ಕ್ರಮೇಣ ತಮ್ಮ ಹಿಂದಿನ ಧರ್ಮಕ್ಕೆ ಮರಳಲು ನಿರ್ಧರಿಸಿವೆ. ಹಿಂದೂ ಧರ್ಮವನ್ನು ಸ್ವೀಕರಿಸಿ ಹಿಂದೂ ಧರ್ಮದೊಂದಿಗೆ ಬಾಳುವುದಾಗಿ ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ