ಮೈಸೂರಿನಲ್ಲಿ ಸಾಮೂಹಿತ ಅತ್ಯಾಚಾರ, ಶೂಟೌಟ್ ಪ್ರಕರಣ; ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ ಪೊಲೀಸರು

8 ಜನರ ವಿರುದ್ಧ 1,410 ಪುಟಗಳ ಚಾರ್ಜ್​ಶೀಟ್ 2ನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಶೂಟೌಟ್ ಮತ್ತು ದರೋಡೆ ಪ್ರಕರಣ ಸಂಬಂಧ 7 ಜನರನ್ನು ಬಂಧಿಸಲಾಗಿದೆ, ಒಬ್ಬ ತಲೆ ಮರೆಸಿಕೊಂಡಿದ್ದಾನೆ.

ಮೈಸೂರಿನಲ್ಲಿ ಸಾಮೂಹಿತ ಅತ್ಯಾಚಾರ, ಶೂಟೌಟ್ ಪ್ರಕರಣ; ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ
Updated By: sandhya thejappa

Updated on: Nov 28, 2021 | 8:57 AM

ಮೈಸೂರು: ಜಿಲ್ಲೆಯಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತು ಶೂಟೌಟ್, ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್​ಶೀಟ್​ನ ಪೊಲೀಸರು ಸಲ್ಲಿಸಿದ್ದಾರೆ. ಎರಡು ಪ್ರಕರಣದ ಚಾರ್ಜ್​ಶೀಟ್​ನ ಪೊಲೀಸರು ಸಲ್ಲಿಸಿದ್ದಾರೆ. ಇದೇ ವರ್ಷ ಆಗಸ್ಟ್ 23 ರಂದು ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಶೂಟೌಟ್ ಮತ್ತು ದರೋಡೆ ನಡೆದಿತ್ತು. ಈ ವೇಳೆ ದಡದಹಳ್ಳಿ ಚಂದ್ರು ಮೃತಪಟ್ಟಿದ್ದರು. 8 ಜನರ ವಿರುದ್ಧ 1,410 ಪುಟಗಳ ಚಾರ್ಜ್​ಶೀಟ್ 2ನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಶೂಟೌಟ್ ಮತ್ತು ದರೋಡೆ ಪ್ರಕರಣ ಸಂಬಂಧ 7 ಜನರನ್ನು ಬಂಧಿಸಲಾಗಿದೆ, ಒಬ್ಬ ತಲೆ ಮರೆಸಿಕೊಂಡಿದ್ದಾನೆ.

ಇನ್ನು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್​ಶೀಟ್ ಕೂಡ ಸಲ್ಲಿಕೆ ಮಾಡಲಾಗಿದೆ. ಪೊಲೀಸರು 6 ಮಂದಿ ವಿರುದ್ಧ ಮೂರನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ 1,499 ಪುಟಗಳ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಬಂಧಿತ 7 ಜನರಲ್ಲಿ ಒಬ್ಬನ ಪಾತ್ರ ಇಲ್ಲ. ಹೀಗಾಗಿ ಆತನನ್ನು ಕೈ ಬಿಟ್ಟು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

ಗುರುತು ಪತ್ತೆ ಹಚ್ಚುವ ಕಾರ್ಯ
ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯಿಂದ ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ಸೆ.23ಕ್ಕೆ ನಡೆದಿದೆ. ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಗುರುತು ಪತ್ತೆ ಕಾರ್ಯ ನಡೆಸಲಾಗಿತ್ತು. ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ. ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತ ಯುವತಿ ಹೇಳಿಕೆ ದಾಖಲು ಮಾಡಲಾಗಿದೆ. ಬಳಿಕ, ಸೆ.23ಕ್ಕೆ ಜೈಲಿನಲ್ಲಿ ಆರೋಪಿಗಳ ಗುರುತು ಪತ್ತೆಹಚ್ಚುವ ಕಾರ್ಯ ಮಾಡಲಾಗಿದೆ.

ಇದನ್ನೂ ಓದಿ

ಸುಳ್ಳು ಹೇಳುತ್ತೀರಾ? ಜೋಕೆ! ಅತ್ಯಂತ ಪರಿಣಾಮಕಾರಿ ಸುಳ್ಳು-ಪತ್ತೆ ತಂತ್ರಜ್ಞಾನ ಅಭಿವೃದ್ಧಿ; ಇದು ಕಾರ್ಯ ನಿರ್ವಹಿಸೋದು ಹೇಗೆ?

ಸ್ವಾತಂತ್ರ್ಯ ಬಂದಿದ್ದು ಕೇವಲ ಮಹಾತ್ಮ ಗಾಂಧಿಯಿಂದ ಎಂಬುದು ತಪ್ಪು; ಕಾಂಗ್ರೆಸ್​ ವಿರುದ್ಧ ಮಧ್ಯಪ್ರದೇಶ ಸಿಎಂ ಅಸಮಾಧಾನ