ಯೋಗ ದಿನಾಚರಣೆಯ ಮಾಹಿತಿ ವಿಚಾರದಲ್ಲೂ ರಾಜಕಾರಣ: ಸಂಸದ ಪ್ರತಾಪ್​ ಸಿಂಹ-ಶಾಸಕ ರಾಮದಾಸ್ ನಡುವೆ ಜಟಾಪಟಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 12, 2022 | 9:12 AM

ಜೂನ್​​ 21ರಂದು ಮೈಸೂರಿನಲ್ಲಿ ಯೋಗ ದಿನಾಚರಣೆ ಹಿನ್ನೆಲೆ ಯೋಗ ದಿನಾಚರಣೆಯ ಮಾಹಿತಿ ವಿಚಾರದಲ್ಲೂ ರಾಜಕಾರಣ ಉಂಟಾಗಿದ್ದು, ಸಂಸದ ಪ್ರತಾಪ್​ ಸಿಂಹ-ಶಾಸಕ ರಾಮದಾಸ್ ನಡುವೆ ಜಟಾಪಟಿ ನಡೆದಿದೆ.

ಯೋಗ ದಿನಾಚರಣೆಯ ಮಾಹಿತಿ ವಿಚಾರದಲ್ಲೂ ರಾಜಕಾರಣ: ಸಂಸದ ಪ್ರತಾಪ್​ ಸಿಂಹ-ಶಾಸಕ ರಾಮದಾಸ್ ನಡುವೆ ಜಟಾಪಟಿ
ಶಾಸಕ ರಾಮದಾಸ್, ಸಂಸದ ಪ್ರತಾಪ್​ ಸಿಂಹ
Follow us on

ಮೈಸೂರು: ಜೂನ್​​ 21ರಂದು ಮೈಸೂರಿನಲ್ಲಿ ಯೋಗ (World Yoga Day)  ದಿನಾಚರಣೆ ಹಿನ್ನೆಲೆ ಯೋಗ ದಿನಾಚರಣೆಯ ಮಾಹಿತಿ ವಿಚಾರದಲ್ಲೂ ರಾಜಕಾರಣ ನಡೆಯುತ್ತಿದ್ದು, ಮೈಲೇಜ್‌ಗಾಗಿ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಮತ್ತು ಬಿಜೆಪಿ ಶಾಸಕ ರಾಮದಾಸ್​​ ನಡುವೆ ಜಟಾಪಟಿ ಉಂಟಾಗಿದೆ. ಮೈಸೂರಿನ ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಬಗ್ಗೆ ಮಾಹಿತಿ ನೀಡುವ ವೇಳೆ ಮಾಧ್ಯಮಗಳ ಮುಂದೆಯೇ ಬಿಜೆಪಿ ನಾಯಕರ ಪೈಪೋಟಿ ಉಂಟಾಗಿದೆ. ಯೋಗಪಟುಗಳು ಭಾಗಿಯಾಗುವ ಸಂಖ್ಯೆ ವಿಚಾರದಲ್ಲಿ ಗೊಂದಲವಾಗಿದ್ದು, ಕಾರ್ಯಕ್ರಮದಲ್ಲಿ 7ರಿಂದ 8 ಸಾವಿರ ಜನ ಭಾಗಿ ಆಗುತ್ತಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದು, ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಎಸ್​.ಎ. ರಾಮದಾಸ್​ ಈಗಾಗಲೇ 13 ಸಾವಿರ ಜನ ನೋಂದಣಿ ಆಗಿದೆ ಎಂದರು.​​​ ನಾನು ಮಾತಾಡ್ತಿದ್ದೀನಿ ರಾಮದಾಸ್​ಜೀ ಸುಮ್ಮನಿರಬೇಕು ಎಂದು ಶಾಸಕ ರಾಮದಾಸ್​ ವಿರುದ್ಧ ಸಂಸದ ಪ್ರತಾಪ್ ಸಿಂಹ ಸಿಡಿಮಿಡಿಗೊಂಡರು.

ಇದನ್ನೂ ಓದಿ: Positive Mindset: ಎಂಥದ್ದೇ ಸವಾಲುಗಳು ಮುಂದರಲಿ, ಸಕಾರಾತ್ಮಕ ಮನಸ್ಥಿತಿ ನಿಮ್ಮದಾಗಿರಲಿ

ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮದಾಸ್​ ಪ್ರತಾಪ್​ ಸಿಂಹ ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಹೀಗಾಗಿ ವಿವರಣೆ ನೀಡಲು ಯತ್ನಿಸಿದೆ. ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ಶಾಸಕ ರಾಮದಾಸ್​​​​​ ಹೇಳಿದರು.

ಮೋದಿ ಸ್ಚಾಗತಕ್ಕೆ ಭರ್ಜರಿ ಸಿದ್ಧತೆ

ಜೂನ್​ 21ರಂದು ಮೈಸೂರಿನಲ್ಲಿವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿರುವ ಹಿನ್ನಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಮೋದಿ ಸ್ಚಾಗತಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಜೂ 21 ರಂದು ಮೈಸೂರಿಗೆ ಮೋದಿ ಆಗಮಿಸುತ್ತಿದ್ದು, ಮೈಸೂರು ಅರಮನೆ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಇಂದು ಅರಮನೆ ಆವರಣದಲ್ಲಿ‌ ಯೋಗ ಫೆಡರೇಶನ್‌ನಿಂದ ತಾಲೀಮು ನಡೆಯುತ್ತಿದ್ದು, ಸಂಸದ ಪ್ರತಾಪಸಿಂಹ, ಶಾಸಕ ಎಸ್​.ಎ ರಾಮದಾಸ್ ಸೇರಿ ಹಲವರು ಭಾಗಿಯಾಗಲಿದ್ದಾರೆ. ಯೋಗ ತಾಲೀಮಿಗೆ  ಸಾವಿರಾರು ವಿದ್ಯಾರ್ಥಿಗಳು ಸಾಥ್ ನೀಡಿದರು.

ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಸಿಎಂ ಬೊಮ್ಮಾಯಿ

ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ 15,000 ಜನ ಭಾಗಿಯಾಗುವ ನಿರೀಕ್ಷೆ ಇದೆ. ಈ ಸಂಬಂಧ ಸಿದ್ದತಾ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತಕ್ಕೆ ಕೆಲ ಸೂಚನೆ ನೀಡಿದ್ದಾರೆ. ಜೂ.13ರೊಳಗೆ ಯೋಗಪಟುಗಳ ಆಯ್ಕೆ ಪೂರ್ಣಗೊಳಿಸಿ, ಎಲ್ಲ ವರ್ಗಗಳ ಜನರನ್ನೂ ಸೇರ್ಪಡೆಗೊಳಿಸುವಂತೆ ಮಾಡಿ. ಯೋಗಪಟುಗಳಿಗೆ ಸಾರಿಗೆ ಸೌಲಭ್ಯ, ಲಘು ಉಪಾಹಾರ ವ್ಯವಸ್ಥೆ ಮಾಡಿ. ಕುಡಿಯುವ ನೀರು ಸೇರಿ ಎಲ್ಲ ವ್ಯವಸ್ಥೆ ಮಾಡಿ. ಕಾರ್ಯಕ್ರಮದ ಯಶಸ್ಸಿಗೆ ಒಟ್ಟು 14 ಸಮಿತಿಗಳ ರಚನೆ ಮಾಡಿ ಎಂದು ಸೂಚನೆ ನೀಡಿದ್ದಾರೆ. ಹಾಗೇ ಪ್ರಧಾನಿಯವರ ಭೇಟಿ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.