ಮೈಸೂರು: ಅನುಮಾನಾಸ್ಪದ ರೀತಿಯಲ್ಲಿ ಖ್ಯಾತ ಪ್ರಸೂತಿ ತಜ್ಞೆ ಡಾ. ವಿದ್ಯಾಧರೆ ಸಾವು

| Updated By: ವಿವೇಕ ಬಿರಾದಾರ

Updated on: Sep 30, 2024 | 8:38 AM

ಮೈಸೂರಿನ ಡೆನ್ಮಾರ್​ ಅಪಾರ್ಟ್​ಮೆಂಟ್​​ನಲ್ಲಿ ಖ್ಯಾತ ಪ್ರಸೂತಿ ತಜ್ಞೆ ಡಾ.ಜಿ.ಎಸ್.ವಿದ್ಯಾಧರೆ ವಾಸವಾಗಿದ್ದರು. ಆದರೆ, ಸೋಮವಾರ ಬೆಳ್ಳಂ ಬೆಳಿಗ್ಗೆ ಅಪಾರ್ಟ್​ಮೆಂಟ್​ನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಡಾ.ಜಿ.ಎಸ್.ವಿದ್ಯಾಧರೆ ಮೃತದೇಹ ಪತ್ತೆಯಾಗಿದೆ.

ಮೈಸೂರು: ಅನುಮಾನಾಸ್ಪದ ರೀತಿಯಲ್ಲಿ ಖ್ಯಾತ ಪ್ರಸೂತಿ ತಜ್ಞೆ ಡಾ. ವಿದ್ಯಾಧರೆ ಸಾವು
ವೈದ್ಯ ವಿದ್ಯಾಧರೆ
Follow us on

ಮೈಸೂರು, ಸೆಪ್ಟೆಂಬರ್​ 30: ಖ್ಯಾತ ಪ್ರಸೂತಿ ತಜ್ಞೆ ಡಾ.ಜಿ.ಎಸ್.ವಿದ್ಯಾಧರೆ (D. GS Vidhyadhare) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ (Mysore) ಆರ್‌ಟಿಒ ವೃತ್ತದ ಬಳಿಯ ಡೆನ್ಮಾರ್​ ಅಪಾರ್ಟ್​ಮೆಂಟ್​​ನ ಮನೆಯಲ್ಲಿ ಇಂದು (ಸೆ.30) ಬೆಳಿಗ್ಗೆ ವೈದ್ಯೆಯ ಶವ ಪತ್ತೆಯಾಗಿದೆ. ವಿದ್ಯಾಧರೆ ಅವರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ವೈದ್ಯೆ ಆಗಿದ್ದರು. ಡಾ. ವಿದ್ಯಾಧರೆ ಅವರ ಪತಿ ಡಾ.ಷಣ್ಮುಖ ಕೆ.ಆರ್.ಆಸ್ಪತ್ರೆಯಲ್ಲಿ ಪ್ರಖ್ಯಾತ ಮೂಳೆ ತಜ್ಞರಾಗಿದ್ದಾರೆ.

ಮಂಡ್ಯದ ಗೌಡಗೆರೆಯ ಡಾ.ವಿದ್ಯಾಧರೆ ಅವರನ್ನು ಡಾ.ಷಣ್ಮುಖ ಅವರು 14 ವರ್ಷದ ಹಿಂದೆ ವಿವಾಹವಾಗಿದ್ದರು. ವೈದ್ಯೆ ವಿದ್ಯಾಧರೆ ಅವರು ರವಿವಾರ ತವರು ಮನೆಯಿಂದ ಮೈಸೂರಿನಲ್ಲಿನ ಗಂಡನ ಮನೆಗೆ ಬಂದಿದ್ದರು. ಆದರೆ, ಡಾ.ವಿದ್ಯಾಧರೆ ಬೆಳಿಗ್ಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಲವು ವರ್ಷಗಳಿಂದ‌ ಡಾ.ಷಣ್ಮುಖ ಮತ್ತು ಡಾ.ಜಿ.ಎಸ್.ವಿದ್ಯಾಧರೆ ನಡುವೆ ವಿರಸ ಇತ್ತು ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮಹಾಲಕ್ಷ್ಮಿ ಭೀಕರ ಹತ್ಯೆ: ಕೊಲೆ ನಂತರ ಹಂತಕನಿಗೆ ಕಾಡಿತ್ತಾ ಪಾಪ ಪ್ರಜ್ಞೆ?

ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಡಾ.ಷಣ್ಮುಖ ಕುಟುಂಬದ ವಿರುದ್ಧ ಡಾ. ವಿದ್ಯಾಧರೆ ತಾಯಿ ಆರೋಪ ಮಾಡಿದ್ದಾರೆ. ಡಾ. ವಿದ್ಯಾಧರೆ ಪೋಷಕರು ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದಾರೆ. ಲಕ್ಷ್ಮೀಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಡಿಸಿಪಿ ಜಾನ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:32 am, Mon, 30 September 24