ವೈಯ್ಯಾಲಿಕಾವಲ್ ಮಹಾಲಕ್ಷ್ಮಿ ಭೀಕರ ಹತ್ಯೆ: ಕೊಲೆ ನಂತರ ಹಂತಕನಿಗೆ ಕಾಡಿತ್ತಾ ಪಾಪ ಪ್ರಜ್ಞೆ?
Bengaluru Mahalaxmi Murder Case: ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, 50ಕ್ಕೂ ಹೆಚ್ಚು ತುಂಡು ಮಾಡಿ ಪ್ರೀಜರ್ನಲ್ಲಿ ತುಂಬಲಾಗಿತ್ತು. ಮಹಾಲಕ್ಷ್ಮೀಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಮುಕ್ತಿ ರಂಜನ್ ರಾಯ್ಗೆ ಪಾಪ ಪ್ರಜ್ಞೆ ಕಾಡಿತ್ತಾ ಎಂಬ ಅನುಮಾನ ಮೂಡಿದೆ.
ಬೆಂಗಳೂರು, ಸೆಪ್ಟೆಂಬರ್ 29: ಬೆಂಗಳೂರಿನ ವೈಯ್ಯಾಲಿಕಾವಲ್ ನಿವಾಸಿ ಮಹಾಲಕ್ಷ್ಮಿಯನ್ನು ಕೊಲೆ (Bengaluru Mahalaxmi Murder Case) ಮಾಡಿದ್ದ ಆರೋಪಿ ಮುಕ್ತಿ ರಂಜನ್ ರಾಯ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾಲಕ್ಷ್ಮಿ ಹತ್ಯೆ ನಂತರ ಮುಕ್ತಿ ರಂಜನ್ ರಾಯ್ ಅವಳ ನೆನಪಿನಲ್ಲೇ ಆತ್ಮಹತ್ಯೆ ಮಾಡಿಕೊಂಡನು ಎಂಬ ಅನುಮಾನ ವ್ಯಕ್ತವಾಗಿದೆ. ಕೊಲೆಯಾದ ಮಹಾಲಕ್ಷ್ಮೀ ಮತ್ತು ಆರೋಪಿ ಮುಕ್ತಿ ರಂಜನ್ ರಾಯ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ದೆಹಲಿಗೆ ಬಂದರೂ ನನಗೆ ಅವಳ ನೆನಪೇ ಕಾಡುತ್ತಿದ್ದೆ
ಮಹಾಲಕ್ಷ್ಮೀ ಮತ್ತು ಮುಕ್ತಿ ರಂಜನ್ ರಾಯ್ ಜೊತೆಗೆ ನಾಲ್ಕ ದಿನಗಳ ದೆಹಲಿ ಪ್ರವಾಸ ಮಾಡಿದ್ದನು. ಮುಕ್ತಿ ರಂಜನ್ ಕೊಲೆ ಮಾಡಿದ ನಂತರ ಪಶ್ಚಿಮ ಬಂಗಾಳ ಮಾತ್ರವಲ್ಲದೇ ದೆಹಲಿಯಲ್ಲೂ ನಾಲ್ಕು ದಿನ ತಲೆಮರೆಸಿಕೊಂಡಿದ್ದನು. ಮುಕ್ತಿ ರಂಜನ್ ರಾಯ್ ದೆಹಲಿಯಲ್ಲಿದ್ದಾಗ, ತಾಯಿ ಮತ್ತು ತಮ್ಮನಿಗೆ ಕರೆ ಮಾಡಿ, ಮಹಾಲಕ್ಷ್ಮಿಯನ್ನು ಕೋಪದಲ್ಲಿ ಹತ್ಯೆ ಮಾಡ್ಬಿಟ್ಟಿದ್ದೀನಿ. ದೆಹಲಿಗೆ ಬಂದರೂ ನನಗೆ ಅವಳ ನೆನಪೇ ಕಾಡುತ್ತಿದ್ದೆ ಎಂದು ಅಳಲು ತೋಡಿಕೊಂಡಿದ್ದನು.
ಸಿಮ್ ಬದಲಾಯಿಸಿದ್ದ ಆರೋಪಿ
ಆರೋಪಿ ಮುಕ್ತಿ ರಂಜನ್ ರಾಯ್ ಮೊದಲು ಏರ್ಟೆಲ್ ಸಿಮ್ ಬಳಕೆ ಮಾಡುತ್ತಿದ್ದನು. ಮಹಾಲಕ್ಷ್ಮೀಯನ್ನು ಕೊಲೆ ಮಾಡಿ ಪಶ್ವಿಮ ಬಂಗಾಳಕ್ಕೆ ಹೋಗುತ್ತಿದ್ದಂತೆ ಹಳೆ ನಂಬರ್ ಅನ್ನು ಸ್ವಿಚ್ ಆಫ್ ಮಾಡಿದ್ದನು. ಬಳಿಕ ಆರೋಪಿ ಮುಕ್ತಿ ರಂಜನ್ ರಾಯ್ ಸಹೋದರನ ದಾಖಲಾತಿ ನೀಡಿ ಬಿಎಸ್ ಎನ್ಎಲ್ ಸಿಮ್ ಖರೀದಿಸಿದ್ದನು. ಬಿಎಸ್ಎನ್ಎಲ್ ಸಿಮ್ ಖರೀದಿ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತಾದರೂ, ಆರೋಪಿಯ ನಿಖರವಾದ ಲೊಕೇಶನ್ ಪತ್ತೆಯಾಗ್ತಿರಲಿಲ್ಲ. ಐದಾರು ಕಿಮೀ ಆಸುಪಾಸು ಬಿಎಸ್ಎನ್ಎಲ್ ಟವರ್ ಪತ್ತೆಯಾಗುತ್ತಿತ್ತು. ಇದು ಆರೋಪಿ ಪಾಲಿಗೆ ವರದಾನವಾಗಿತ್ತು.
ಇದನ್ನೂ ಓದಿ: ಬೆಂಗಳೂರು ಮಹಾಲಕ್ಷ್ಮೀ ಕೊಲೆಯಾಗಿದ್ದು ಮದುವೆ ವಿಚಾರಕ್ಕೆ?: ಕಮಿಷನರ್ ದಯಾನಂದ್ ಹೇಳಿದ್ದಿಷ್ಟು
ಹೊಸ ಸಿಮ್ ಖರಿದಿಸಿದ ಬಳಿಕ, ತಾನು ಕೊಲೆ ಮಾಡಿದ ವಿಚಾರವನ್ನು ತಾಯಿ ಮತ್ತು ಸಹೋದರನ ಬಳಿ ಹೇಳಿದ್ದನು. ನಂತರ ಆರೋಪಿ ಮುಕ್ತಿ ರಂಜನ್ ರಾಯ್ ದೆಹಲಿಗೆ ತೆರಳಿದ್ದನು. ಒಡಿಶಾದ ಫಂಡಿ ಗ್ರಾಮದಲ್ಲೇ ಇದ್ದರೆ ಪೊಲೀಸರು ಬರುತ್ತಾರೆಂದು ಊರುಬಿಟ್ಟಿದ್ದನು. ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿದ ವಿಚಾರ ಹೊರ ಜಗತ್ತಿಗೆ ತಿಳಿಯುವವರೆಗೂ ಆರೋಪಿ ಮುಕ್ತಿ ರಂಜನ್ ರಾಯ್ ಒಳ ಒಳಗೆ ಮರಗುತ್ತಿದ್ದನು.
ಸೆಪ್ಟೆಂಬರ್ 22ರ ವೇಳೆಗೆ ಆರೋಪಿ ಮುಕ್ತಿ ರಂಜನ್ ರಾಯ್ ತಮ್ಮನನ್ನು ಪೊಲೀಸರು ವಶಕ್ಕೆ ಪಡೆದು ಕುಟುಂಬಸ್ಥರನ್ನು ಸಂಪರ್ಕಿಸಿದ್ದರು. ಈ ವಿಚಾರವನ್ನು ಆರೋಪಿ ಮುಕ್ತಿ ರಂಜನ್ ರಾಯ್ ತಾಯಿಯಿಂದ ತಿಳಿದುಕೊಂಡಿದ್ದನು. ಅಲ್ಲದೇ ಆರೋಪಿಯನ್ನು ಹುಡುಕಿಕೊಂಡು ಬೆಂಗಳೂರು ಪೊಲೀಸರು ತನ್ನೂರಿಗೆ ಬಂದಿರುವ ವಿಚಾರವನ್ನೂ ತಾಯಿಯಿಂದ ತಿಳಿದುಕೊಂಡಿದ್ದನು. ಕೊನೆಗೆ ತಾಯಿಗೆ ಮನೆಗೆ ಬರುತ್ತೇನೆ ಎಂದು ಹೇಳಿದವನು, ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ