ಮನೆಯಲ್ಲಿ ಪಾರ್ಟಿ ಮಾಡ್ತಿದ್ದವರ ಮೇಲೆ ಅಟ್ಯಾಕ್: ಚಾಕು, ಲಾಂಗ್​ನಿಂದ ಹಲ್ಲೆ ಮಾಡಿ ಪರಾರಿ

ಹಳೆ ದ್ವೇಷ ಹಿನ್ನೆಲೆ ಮಾರಾಕಾಸ್ತ್ರಗಳ ಸಮೇತ ಮನೆಗೆ ನುಗ್ಗಿ ಒಂದು ಗ್ಯಾಂಗ್​ನಿಂದ ಇನ್ನೊಂದು ಗ್ಯಾಂಗ್​ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವಂತಹ ಘಟನೆ ಬೆಂಗಳೂರಿನ ರಾಜಗೋಪಾಲದ ಕಪಿಲಾನಗರದ 4ನೇ ಕ್ರಾಸ್​ ಮನೆಯಲ್ಲಿ ನಡೆದಿದೆ. ಮನೆಯಲ್ಲಿದ್ದ ಮೂವರ ಮೇಲೆ 6-7 ಜನರ ಗ್ಯಾಂಗ್​ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಮನೆಯಲ್ಲಿ ಪಾರ್ಟಿ ಮಾಡ್ತಿದ್ದವರ ಮೇಲೆ ಅಟ್ಯಾಕ್: ಚಾಕು, ಲಾಂಗ್​ನಿಂದ ಹಲ್ಲೆ ಮಾಡಿ ಪರಾರಿ
ಮನೆಯಲ್ಲಿ ಪಾರ್ಟಿ ಮಾಡ್ತಿದ್ದವರ ಮೇಲೆ ಅಟ್ಯಾಕ್: ಚಾಕು, ಲಾಂಗ್​ನಿಂದ ಹಲ್ಲೆ ಮಾಡಿ ಪರಾರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 28, 2024 | 6:36 PM

ಬೆಂಗಳೂರು, ಸೆಪ್ಟೆಂಬರ್ 28: ಇಬ್ಬರು ರೌಡಿಶೀಟರ್​ಗಳ (Rowdy Sheeter) ಗ್ಯಾಂಗ್ ಮಧ್ಯೆ ಅನೇಕ ವರ್ಷಗಳಿಂದ ದ್ವೇಷ ಇತ್ತು. ಇದೇ ವೈರತ್ವ ಈಗ ಕೊಲೆ ಯತ್ನಕ್ಕೂ ಕಾರಣವಾಗಿದೆ. ಪಾರ್ಟಿ ಮಾಡುತ್ತಿದ್ದ ಒಂದು ಗ್ಯಾಂಗ್ ಮೇಲೆ ಮತ್ತೊಂದು ಗ್ಯಾಂಗ್ ದಾಳಿ ನಡೆಸಿತ್ತು. ಮಚ್ಚು, ಲಾಂಗ್​ಗಳಿಂದ 4-5 ಜನರ ಮೇಲೆ ಹಲ್ಲೆ ಮಾಡಿತ್ತು. ಅದೃಷ್ಟವಶಾತ್ ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ. ಆದರೆ ಇಂತ ಕೃತ್ಯ ಎಸಗಿದ್ದ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸದಾ ಶಾಂತವಾಗಿರುವ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿರುವ ಕಪಿಲಾ ನಗರ, ಕಳೆದ ಗುರುವಾರ ರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. 4ನೇ ಕ್ರಾಸ್​ನ ಬಿಲ್ಡಿಂಗ್​ನ 4ನೇ ಫ್ಲೋರ್ ಮನೆಯಲ್ಲಿ ಚಾಕು, ಲಾಂಗ್ ಝಳಪಿಸಿತ್ತು. ಇಬ್ಬರು ರೌಡಿಶೀಟರ್​ಗಳ ಮಧ್ಯೆ ಇದ್ದಂತ ಹಳೇ ದ್ವೇಷ ತಾರಕ್ಕಕ್ಕೇರಿ ಒಬ್ಬನನ್ನ ಕೊಲೆ ಮಾಡಲು ಇನ್ನೊಬ್ಬ ವಿಫಲ ಯತ್ನ ನಡೆಸಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬ್ಯೂಟಿಷಿಯನ್ ಯುವತಿಗೆ ಖಾಸಗಿ ಅಂಗ ತೋರಿಸಿದ ಆಟೋ ಚಾಲಕ!

ಯೆಸ್. ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್​​ಗಳಾದ ನರೇಂದ್ರ ಅಲಿಯಾಸ್​​ ದಾಸ ಮತ್ತು ರಮೇಶ್ ಅಲಿಯಾಸ್​​ ಬಳಿಲು ಮಧ್ಯೆ ಕೆಲ ವರ್ಷಗಳಿಂದ ದ್ವೇಷ ಇತ್ತು. ಆಗಾಗ ಜಗಳ ಆಗುತ್ತಿತ್ತು. ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ಆಗಿತ್ತು. ಹೀಗಿರೋವಾಗ ನರೇಂದ್ರ ತನ್ನ ಸ್ನೇಹಿತರ ಜೊತೆ ಪಾರ್ಟಿ ಮಾಡುವಾಗ ರಮೇಶ್ ತನ್ನ ಸಹಚರರೊಂದಿಗೆ ದಾಳಿ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾನೆ. ಸದ್ಯ ಗಾಯಳು ನರೇಂದ್ರ ರಾಜಗೋಪಾಲ ನಗರ ಠಾಣೆಯಲ್ಲಿ ರಮೇಶ್ ಮತ್ತು ಟೀಂ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಿದ್ದಾನೆ.

ನಡುರಾತ್ರಿಯಲ್ಲಿ ಬೈಕ್​ನಲ್ಲಿ ಹೋಗ್ತಿದ್ದ ಯುವಕರ ಸುಲಿಗೆ

ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ನಡುರಾತ್ರಿ ಯಾರೂ ಓಡಾಡದ ಸ್ಥಿತಿ ಎದುರಾಗಿದೆ. ಎರಡು ದಿನದ ಹಿಂದೆ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ನಡೆದಿರುವ ಸುಲಿಗೆಯೇ ಇದಕ್ಕೆ ಕಾರಣ. ಹೌದು. ಸೋಮವಾರ ಮುಂಜಾನೆ 3.30ರ ಸುಮಾರಿಗೆ ಇಬ್ಬರು ಯುವಕರು ಸೆಂಟ್ ಮಾರ್ಕ್ಸ್ ರಸ್ತೆಯ ಎಸ್​ಬಿಐ  ಸರ್ಕಲ್ ಬಳಿ ತಮ್ಮ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ನಂಬರ್ ಪ್ಲೇಟ್ ಇಲ್ಲದ ಬೈಕ್​ನಲ್ಲಿ ಬಂದ ಇಬ್ಬರು ಪುಂಡರು ಇಬ್ಬ ಯುವಕನ ಬಳಿ ಚಿನ್ನದ ಸರ ಕಿತ್ತು ಎಸ್ಕೇಪ್ ಆಗುತ್ತಿದ್ದರು. ಆದರೆ ಅವರನ್ನ ಚೇಸ್ ಮಾಡಿದ ಯುವಕರನ್ನ ಮತ್ತೆ ಮಾಡಿ ಅಡ್ಡಗಟ್ಟಿದ ಅದೇ ಪುಂಡರು ಮತ್ತೊಬ್ಬನ ಬಳಿಯೂ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ.

ವರದಿ: ಪ್ರದೀಪ್​ ಕ್ರೈಂ 

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ