ಬೆಂಗಳೂರು ಆಯ್ತು ಡಯಾಬಿಟಿಸ್ ರಾಜಧಾನಿ: ಮನೆ ಮನೆ ಸಮೀಕ್ಷೆಗೆ ಮುಂದಾದ ಆರೋಗ್ಯ ಇಲಾಖೆ
ಬೆಂಗಳೂರು ಇದೀಗ ಕೇವಲ ಐಟಿಬಿಟಿ ಸಿಟಿ, ಸಿಲಿಕಾನ್ ಸಿಟಿ ಅಷ್ಟಾಗಿಯೇ ಉಳಿದಿಲ್ಲ. ಕೋವಿಡ್ ನಂತರ ಬೆಂಗಳೂರಿಗೆ ಹೊಸ ನಗರದ ಪಟ್ಟ ಸಿಕ್ಕಿದೆ! ಇದೀಗ ಬೆಂಗಳೂರಿನ ಬಹುತೇಕ ಜನರನ್ನು ಸಕ್ಕರೆ ಖಾಯಿಲೆ ಬಾಧಿಸುತ್ತಿದೆ. ಬೆಂಗಳೂರಿಗೆ ಸದ್ಯ ಡಯಾಬಿಟಿಸ್ ಕ್ಯಾಪಿಟಲ್ ಎಂಬ ಹೊಸ ಪಟ್ಟ ದೊರೆತಿದ್ದು, ಸಕ್ಕರೆ ಖಾಯಿಲೆ ಕಟ್ಟಿಹಾಕಲು ಆರೋಗ್ಯ ಇಲಾಖೆ ಮನೆ ಮನೆ ಸಮೀಕ್ಷೆಗೆ ಮುಂದಾಗಿದೆ.
ಬೆಂಗಳೂರು, ಸೆಪ್ಟೆಂಬರ್ 28: ಹಿಂದೆಲ್ಲಾ ವಯಸ್ಸು 60 ದಾಟಿದರೆ ಸಕ್ಕರೆ ಖಾಯಿಲೆ ಫಿಕ್ಸ್ ಎಂದು ಹೇಳಲಾಗುತ್ತಿತ್ತು. ಸಕ್ಕರೆ ಖಾಯಿಲೆಗೆ ಶ್ರೀಮಂತರ ಖಾಯಿಲೆ ಎಂಬ ಹೆಸರು ಪಡೆದಿತ್ತು. ಆದರೆ ಇದೀಗ ಚಿತ್ರಣ ಬದಲಾಗಿದೆ. 10 ವಯಸ್ಸಿನ ಮಕ್ಕಳನ್ನೂ ಡಯಾಬಿಟಿಸ್ ಬಾಧಿಸುತ್ತಿದೆ. ಯುವಕರು ಡಯಾಬಿಟಿಸ್ ರೋಗಿಗಳಾಗುತ್ತಿದ್ದಾರೆ. ಬೆಂಗಳೂರು ಡಯಾಬಿಟಿಕ್ ನಗರ ಎಂಬ ಹೆಸರು ಪಡೆದುಕೊಳ್ಳುತ್ತಿದೆ.
ಅರ್ಧಕ್ಕರ್ಧ ಬೆಂಗಳೂರಿಗರು ಈಗ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಇಲಾಖೆ ಮನೆ ಮನೆ ಅಭಿಯಾನ ನಡೆಸಿ, ಚಿಕಿತ್ಸೆ ಕೊಡಲು ನಿರ್ಧರಿಸಿದೆ ಎಂದು ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.
ಬಿಬಿಎಂಪಿ ಈ ಹಿಂದೆ ಕೂಡ ಸಮೀಕ್ಷೆ ನಡೆಸಿತ್ತು. ಆ ಪ್ರಕಾರ ಬೆಂಗಳೂರಿನ ಶೇ 50.86 ರಷ್ಟು ಜನರು ಸಕ್ಕರೆ ಖಾಯಿಲೆಗೆ ತುತ್ತಾಗಿರುವುದು ಪತ್ತೆಯಾಗಿತ್ತು. ಇದೀಗ ಬಿಬಿಎಂಪಿಯ ನಂತರ ಆರೋಗ್ಯ ಇಲಾಖೆ ಮನೆ ಮನೆ ಸಮೀಕ್ಷೆಗೆ ಮುಂದಾಗಿದೆ. ಮನೆಯಲ್ಲಿ ಎಷ್ಟು ಜನರಿಗೆ ಸಕ್ಕರೆ ಖಾಯಿಲೆ ಇದೆ ಎಂದು ಪತ್ತೆ ಹಚ್ಚಲು ಮುಂದಾಗಿದೆ. ಜನರ ಗ್ಲೂಕೋಸ್ ಲೆವೆಲ್ ಚೆಕ್ ಅಪ್ ಜತೆ, ಡಯಾಬಿಟಿಸ್ ಟೆಸ್ಟಿಂಗ್ ಕಿಟ್ ಖರೀದಿಗೂ ಮುಂದಾಗಿದೆ. ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸಲಿದೆ.
ಇದನ್ನೂ ಓದಿ: ಮೂಳೆಗಳ ಆರೋಗ್ಯಕ್ಕೆ ಈ ದಹಿ ಚುರಾ ರೆಸಿಪಿ ಮಾಡಿ ಸವಿಯಿರಿ
ಕೋವಿಡ್ ನಂತರದಲ್ಲಿ ಡಯಾಬಿಟಿಸ್ ಪ್ರಕರಣಗಳು ಹೆಚ್ಚಳಗೊಂಡಿವೆ. ಕೋವಿಡ್ 1 ಮತ್ತು 2 ನೇ ಅಲೆ ನಂತರ ಸಕ್ಕರೆ ಖಾಯಿಲೆ ಸಾಕಷ್ಟು ಜನರನ್ನು ಬಾಧಿಸಿದೆ. ಚಿಕ್ಕ ಮಕ್ಕಳಿಗೂ ಟೈಪ್ 1 ಮಧುಮೇಹ ಕಾಡುತ್ತಿದೆ. ಈ ಎಲ್ಲಾ ಕಾರಣಗಳಿಂದ ಸಕ್ಕರೆ ಖಾಯಿಲೆ ಕೇಸ್ಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಈ ಪ್ಲಾನ್ ಮಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Sat, 28 September 24