ಬೆಂಗಳೂರು ಮಹಾಲಕ್ಷ್ಮೀ ಕೊಲೆಯಾಗಿದ್ದು ಮದುವೆ ವಿಚಾರಕ್ಕೆ?: ಕಮಿಷನರ್​ ದಯಾನಂದ್​ ಹೇಳಿದ್ದಿಷ್ಟು

Bengaluru Mahalaxmi Murder Case: ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, 50ಕ್ಕೂ ಹೆಚ್ಚು ತುಂಡು ಮಾಡಿ ಪ್ರೀಜರ್​ನಲ್ಲಿ ತುಂಬಲಾಗಿತ್ತು. ಮಹಾಲಕ್ಷ್ಮೀಯನ್ನು ಕೊಲೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೊಲೆ ಮದುವೆ ವಿಚಾರಕ್ಕೆ ನಡೆಯಿತಾ? ಎಂಬ ಅನುಮಾನ ವ್ಯಕ್ತವಾಗಿದೆ.

ಬೆಂಗಳೂರು ಮಹಾಲಕ್ಷ್ಮೀ ಕೊಲೆಯಾಗಿದ್ದು ಮದುವೆ ವಿಚಾರಕ್ಕೆ?: ಕಮಿಷನರ್​ ದಯಾನಂದ್​ ಹೇಳಿದ್ದಿಷ್ಟು
ಮಹಾಲಕ್ಷ್ಮೀ, ಬಿ ದಯಾನಂದ್​
Follow us
Shivaprasad
| Updated By: ವಿವೇಕ ಬಿರಾದಾರ

Updated on: Sep 27, 2024 | 2:54 PM

ಬೆಂಗಳೂರು, ಸೆಪ್ಟೆಂಬರ್​ 27: ಬೆಂಗಳೂರಿನ ವೈಯಾಲಿಕಾವಲ್​ ನಗರ ನಿವಾಸಿ ಮಹಾಲಕ್ಷ್ಮೀ ಕೊಲೆ (Bengaluru Mahalaxmi Murder Case)​ ದೇಶಾದ್ಯಂತ ಸುದ್ದಿಯಾಗಿದೆ. ಮಹಾಲಕ್ಷ್ಮೀ ಕೊಲೆಗೆ ಸಂಬಂಧಿಸಿಂತೆ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ ದಯಾನಂದ್ (B Dayananda)​ ಮಾತನಾಡಿ, ಪ್ರಕರಣ ತನಿಖೆ ಇನ್ನೂ ನಡೆಯುತ್ತಿದೆ. ಮಹಾಲಕ್ಷ್ಮೀ ಕೊಲೆ ಮದುವೆ ವಿಚಾರವಾಗಿ ನಡೆದಿದೆ ಎಂಬ ಅಂಶ ತಿಳಿದು ಬಂದಿದೆ. ಆದರೆ, ಇದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ತನಿಖೆ ಮುಂದುವರೆದಿದೆ ಎಂದು ಹೇಳಿದರು.

ಕಮಿಷನರ್​ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡಸಿ ಮಾತನಾಡಿದ ಅವರು, ಕೊಲೆ ಮಾಡಿದ ಆರೋಪಿ ಮುಕ್ತಿ ರಂಜನ್​ ರಾಯ್​​ ಒರಿಸ್ಸಾದ ಭದ್ರಪ್ ಜಿಲ್ಲೆ‌ಯ ದುಸ್ತ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಡೆತ್ ನೋಡ್ ದೊರೆತಿದೆ. ಆರೋಪಿಯ ತಮ್ಮ ಬೆಂಗಳೂರುನಲ್ಲೇ ಇದ್ದಾರೆ. ಅವರ ಹೇಳಿಕೆಯನ್ನು ಕೂಡ 164 ಅಡಿಯಲ್ಲಿ ದಾಖಲು‌ ಮಾಡಲಾಗುತ್ತದೆ. ಆರೋಪಿಯ ಆತ್ಮಹತ್ಯೆ ಬಗ್ಗೆ ಮಾಹಿತಿ ಸಿಗಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: ಸಾವಿನ ಮನೆಯಲ್ಲಿ ಹಲವರ ಬೆರಳಚ್ಚು ಗುರುತು ಪತ್ತೆ, ಹೊರ ರಾಜ್ಯಗಳಲ್ಲೂ ಪೊಲೀಸರ ತಲಾಶ್​

ಬೈಕ್​​ನಲ್ಲಿ 1,550 ಕಿಮೀ ಹೋಗಿದ್ದ ಆರೋಪಿ

ಮಹಾಲಕ್ಷ್ಮೀಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಮುಕ್ತಿ ರಂಜನ್​ ರಾಯ್​​ ಬಜಾಜ್ ಪ್ಲಾಟಿನಂ ಬೈಕ್​ನಲ್ಲಿ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮಾರ್ಗವಾಗಿ 1,550 ಕಿಮೀ ಸಾಗಿ ತನ್ನ ಊರಾದ ಒಡಿಶಾದ ಭದ್ರಕ್ ಬಳಿಯ ಬೋನಿಪುರಗೆ ತೆರಳಿದ್ದಾನೆ. ಕೊಲೆ ಮಾಡಿದ ಬಳಿಕ ಆರೋಪಿ ಮುಕ್ತಿ ರಂಜನ್​ ಮೊದಲು ಹೆಬ್ಬಗೋಡಿಯ ಸಹೋರನ ಮನೆಗೆ ತೆರಳಿದ್ದನು.

ತಮ್ಮನಿಗೆ ಮಹಾಲಕ್ಷ್ಮೀಯನ್ನು ಕೊಲೆ ಮಾಡಿರುವ ಬಗ್ಗೆ ತಿಳಿಸಿ, ಯಾರಿಗೂ ಈ ವಿಚಾರ ಹೇಳಬೇಡ ಬೇಗ ರೂಮ್​ ಖಾಲಿ ಮಾಡು ಎಂದು ಹೇಳಿ ಬೈಕ್​ನಲ್ಲೇ ಒಡಿಶಾಗೆ ತೆರಳಿದ್ದಾನೆ. ಊರಿಗೆ ತಲುಪಿದ ಬಳಿಕ ಆರೋಪಿ ರಂಜನ್ ಕೊಲೆ ಮಾಡಿದ ವಿಚಾರವನ್ನು​ ತಾಯಿಗೆ ತಿಳಿಸಿದ್ದಾನೆ. ಕೊನೆಯದಾಗಿ ತಂದೆ-ತಾಯಿಯನ್ನು ಭೇಟಿಯಾಗಿ, ಆರೋಪಿ ಮುಕ್ತಿ ರಂಜನ್ ನೇಣಿಗೆ ಶರಣಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ