ರಂಜಾನ್​ ಹಿನ್ನೆಲೆ ಮೈಸೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ: ಪರ್ಯಾಯ ಮಾರ್ಗಗಳು ಹೀಗಿವೆ

|

Updated on: Apr 21, 2023 | 9:14 PM

ರಂಜಾನ್ ಪ್ರಯುಕ್ತ ಮುಸ್ಲಿಂ ಸಮಾಜದವರಿಂದ ಸಾಮೂಹಿಕ ಪ್ರಾರ್ಥನೆ ಹಿನ್ನೆಲೆ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ನಾಳೆ ಬೆಳಗ್ಗೆ 8.30ರಿಂದ ಬೆಳಗ್ಗೆ 11 ಗಂಟೆವರೆಗೆ ಸಂಚಾರ ನಿರ್ಬಂಧಿಸಿದೆ.

ರಂಜಾನ್​ ಹಿನ್ನೆಲೆ ಮೈಸೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ: ಪರ್ಯಾಯ ಮಾರ್ಗಗಳು ಹೀಗಿವೆ
ಪ್ರಾತಿನಿಧಿಕ ಚಿತ್ರ
Follow us on

ಮೈಸೂರು: ರಂಜಾನ್ (Ramzan) ಪ್ರಯುಕ್ತ ಮುಸ್ಲಿಂ ಸಮಾಜದವರಿಂದ ಸಾಮೂಹಿಕ ಪ್ರಾರ್ಥನೆ ಹಿನ್ನೆಲೆ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ನಾಳೆ ಬೆಳಗ್ಗೆ 8.30ರಿಂದ ಬೆಳಗ್ಗೆ 11 ಗಂಟೆವರೆಗೆ ಸಂಚಾರ ನಿರ್ಬಂಧಿಸಿದ್ದು, ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಮೈಸೂರು ಬ್ಯಾಂಕ್ ನಿಂದ ಟೌನ್ ಹಾಲ್ ಕಡೆಗೆ ಬರುವ ವಾಹನಗಳು ಕಿಮ್ಕೊ ಜಂಕ್ಷನ್​ನಲ್ಲಿ ಎಡ ತಿರುವು ಪಡೆದು ಅಲ್ಲಿಂದ ವಿಜಯನಗರ ಮೂಲಕ ಸಂಚಾರಿಸಬಹುದು. ಟೌನ್ ಹಾಲ್ ಕಡೆಯಿಂದ ಮೈಸೂರು ಕಡೆಗೆ ಬರುವ ವಾಹನಗಳು ಬಿಜಿಎಸ್ ಪ್ಲೈಓವರ್ ಕೆಳಗಡೆ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ಶಿರಸಿ ಜಂಕ್ಷನ್​ನಲ್ಲಿ ಬಲತಿರುವು ಪಡೆದುಕೊಂಡು, ಜೆಜೆ ನಗರ, ಟ್ಯಾಂಕ್ ಬಂಡೆ ರಸ್ತೆ, ಬಿನ್ನಿಮಿಲ್ ಜಂಕ್ಷನ್​, ಹುಣಸೇಮ ಜಂಕ್ಷನ್ ಮೂಲಕ ಸಂಚಾರಿಸುವಂತೆ ಸಾರ್ವಜನಿಕರಲ್ಲಿ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಗುರುವಾರ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಶನಿವಾರ ಪವಿತ್ರ ಈದ್ ಉಲ್ ಫಿತರ್ (ರಂಜಾನ್ ಹಬ್ಬ) ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತಕ್ವಾ ಅಹ್ಮದ್ ಮುಸ್ಲಿಯಾರ್ ನಿನ್ನೆ ತಿಳಿಸಿದ್ದರು. ಹೀಗಾಗಿ ಶುಕ್ರವಾರ ಕರಾವಳಿ ಭಾಗದ ಮುಸ್ಲಿಮರು ಉಪವಾಸ ವೃತ ಕೈಗೊಳ್ಳಬಹುದಾಗಿದೆ. ಅಲ್ಲದೆ ಶುಕ್ರವಾರದೊಂದಿಗೆ 1 ತಿಂಗಳ ಮುಸ್ಲಿಮರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಬ್ಬ ರಂಜಾನ್ (Ramadan Festival 2023) ಉಪವಾಸ ಅಂತ್ಯವಾಗಲಿದ್ದು, ದಕ್ಷಿಣ ಕನ್ನಡ-ಉಡುಪಿ ಸೇರಿದಂತೆ ಕರಾವಳಿ ಭಾಗದ ಮುಸ್ಲಿಮರು ಶನಿವಾರ ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಿದ್ದಾರೆ.

ಇದನ್ನೂ ಓದಿ: Ramadan Eid 2023: ಇಂದು ಚಂದ್ರ ದರ್ಶನವಾಗದ ಹಿನ್ನೆಲೆ, ಕರಾವಳಿ ಭಾಗದಲ್ಲಿ ಶನಿವಾರ ರಂಜಾನ್ ಹಬ್ಬ ಆಚರಣೆ

ಕರಾವಳಿ ಭಾಗದಲ್ಲಿ ಶನಿವಾರ ರಂಜಾನ್ ಹಬ್ಬ ಆಚರಣೆ​

ರಂಜಾನ್ ತಿಂಗಳ ಉಪವಾಸ ಕೊನೆಗೊಂಡ ನಂತರ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಮಿಕ್ ಧರ್ಮದಲ್ಲಿ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಇದು ಕೂಡಾ ಒಂದು. ಈ ದಿನದಂದು ಮುಸ್ಲಿಮರು ತಮ್ಮ ಉಪವಾಸ(ರೋಜಾ)ವನ್ನು ಕೊನೆಗೊಳಿಸುತ್ತಾರೆ. ರಂಜಾನ್ ಸಮಯದಲ್ಲಿ ಅವರಿಗೆ ಆರೋಗ್ಯ ಮತ್ತು ಪ್ರತಿರೋಧಕವನ್ನು ನೀಡಿದ್ದಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಹೇಳಿ ಹೊಸ ಬಟ್ಟೆಯನ್ನು ಧರಿಸುತ್ತಾರೆ. ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತಾರೆ, ದಾನ ಮಾಡುತ್ತಾರೆ, ಕುಟುಂಬ ಮತ್ತು ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯುತ್ತಾರೆ.

ಈದ್-ಉಲ್-ಫಿತಾರ್ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್​​ನ ಹತ್ತನೇ ತಿಂಗಳಾದ ಶವ್ವಾಲ್​​ನ ಮೊದಲ ದಿನದಂದು ಅಮಾವಾಸ್ಯೆಯ ದರ್ಶನದ ನಂತರ ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್​​ನ ಅನುಗುಣವಾಗಿ ಚಂದ್ರನ ಹಿಜ್ರಿ ತಿಂಗಳ ಆರಂಭವು ಧಾರ್ಮಿಕ ವ್ಯವಸ್ಥೆಗಳು ಅಂದರೆ ಕಾಲಾನುಕ್ರಮದಲ್ಲಿ ಬದಲಾವಣೆಯು ಅಮವಾಸ್ಯೆಯ ವೀಕ್ಷಣೆಗೆ ಅನುಗುಣವಾಗಿ ಬದಲಾಗುವುದರಿಂದ ಈದ್-ಉಲ್-ಫಿತರ್ ವಿವಿಧ ಪ್ರದೇಶಗಳಲ್ಲಿ ವಿವಿಧ ದಿನಗಳಲ್ಲಿ ಬರುತ್ತದೆ.

ಈ ವರ್ಷ ಈದ್-ಉಲ್-ಫಿತಾರ್​ನ್ನು ಏಪ್ರಿಲ್ 21 ಶುಕ್ರವಾರದಿಂದ ಏಪ್ರಿಲ್ 23 ಭಾನುವಾರದವರೆಗೆ ಆಚರಿಸಲಾಗುತ್ತದೆ ಎಂದು ಹೇಳಲಾದ್ದು, ಚಂದ್ರನ ವೀಕ್ಷಣೆಗೆ ಅನುಗುಣವಾಗಿ ನಿಜವಾದ ದಿನಾಂಕ ಬದಲಾವಣೆಯಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:12 pm, Fri, 21 April 23