Karnataka Assembly Polls: ಮೈಸೂರು ಜಿಲ್ಲೆಯಲ್ಲಿ ಪ್ರಚಾರ ಆರಂಭಿಸಿ ಟಿ ನರಸೀಪುರದಲ್ಲಿ ರೋಡ್ ಶೋ ನಡೆಸಿದ ಬಿವೈ ವಿಜಯೇಂದ್ರ

Karnataka Assembly Polls: ಮೈಸೂರು ಜಿಲ್ಲೆಯಲ್ಲಿ ಪ್ರಚಾರ ಆರಂಭಿಸಿ ಟಿ ನರಸೀಪುರದಲ್ಲಿ ರೋಡ್ ಶೋ ನಡೆಸಿದ ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 21, 2023 | 7:06 PM

ವಿಜಯೇಂದ್ರ ರೋಡ್ ಶೋನಲ್ಲಿ ನೆರೆದಿರುವ ಜನಸಮೂಹವನ್ನು ಟಿವಿಗಳಲ್ಲಿ ಬಿಎಸ್ ಯಡಿಯೂರಪ್ಪ ನೋಡಿದರೆ ಆಶ್ಚರ್ಯಚಕಿತರಾಗುವುದರಲ್ಲಿ ಅನುಮಾನವಿಲ್ಲ

ಮೈಸೂರು: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಯಾವುದೇ ಸ್ಟಾರ್ ಪ್ರಚಾರಕನಿಗಿಂತ ಕಮ್ಮಿಯಿಲ್ಲ ಮಾರಾಯ್ರೇ. ಇಲ್ನೋಡಿ, ಇದು ಅವರ ಕ್ಷೇತ್ರ ಶಿಕಾರಿಪುರ ಅಲ್ಲ, ಬಿಜೆಪಿ ಅಭ್ಯರ್ಥಿ ಡಾ ರೇವಣ್ಣ (Dr Revanna) ಸ್ಪರ್ಧಿಸುತ್ತಿರುವ ಮೈಸೂರು ಜಿಲ್ಲೆಯ ಟಿ ನರಸೀಪುರ ಕ್ಷೇತ್ರ. ವಿಜಯೇಂದ್ರ ರೋಡ್ ಶೋನಲ್ಲಿ ನೆರೆದಿರುವ ಜನಸಮೂಹವನ್ನು ಟಿವಿಗಳಲ್ಲಿ ಬಿಎಸ್ ಯಡಿಯೂರಪ್ಪ (BS Yediyurappa) ನೋಡಿದರೆ ಆಶ್ಚರ್ಯಚಕಿತರಾಗುವುದರಲ್ಲಿ ಅನುಮಾನವಿಲ್ಲ. ತನ್ನ ಯೋಗ್ಯ ಉತ್ತರಾಧಿಕಾರಿ ಅಂತ ಅವರು ಅಂದುಕೊಳ್ಳಲಿಕ್ಕೂ ಸಾಕು. ಹಿಂದೆ ರಾಜ್ಯದಲ್ಲಿ ಉಪಚುನಾವಣೆ ನಡೆದಾಗ ವಿಜಯೇಂದ್ರ ಕೆಆರ್ ಪೇಟೆಯಲ್ಲಿ ಕೆಸಿ ನಾರಾಯಣಗೌಡರ ಪರ ಪ್ರಚಾರ ನಡೆಸಿ ಅವರ ಗೆಲುವಿಗೆ ಕಾರಣೀಭೂತರಾಗಿದ್ದರು. ವಿಜಯೇಂದ್ರ ಒಬ್ಬ ಸಂಘಟನಾ ಚತುರ ಎಂದು ಬಿಜೆಪಿ ನಾಯಕರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ