India’s first underwater stretch: ಹೂಗ್ಲೀ ನದಿ ಜಲಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿದ ಕೊಲ್ಕತ್ತಾ ಮೆಟ್ರೋ, ಮಾಧ್ಯಮದವರಿಗೊಂದು ಜಾಯ್ ರೈಡ್!
ಹೂಗ್ಲೀ ನದಿಯ ಮೂಲಕ ನಿರ್ಮಿಸಲಾಗಿರುವ ಕೊಲ್ಲತ್ತಾ ಮೆಟ್ರೋದ ಜಲಾಂತರ ಸೆಕ್ಷನ್ ನಲ್ಲಿ ಪ್ರಾಯೋಗಿಕ ರೈಲು ಸಂಚಾರ ಏಪ್ರಿಲ್ 12 ರಂದು ಪ್ರಾರಂಭವಾಗಿದ್ದು ಇದು ಮುಂದಿನ ಐದರಿಂದ ಏಳು ತಿಂಗಳವರೆಗೆ ಮುಂದುವರಿಯಲಿದೆ.
ಕೊಲ್ಕತ್ತಾ: ಕೊಲ್ಕತ್ತಾ ಮೆಟ್ರೋ (Kolkata Metro ) ಭಾರತದಲ್ಲಿ ಮೊದಲ ಬಾರಿಗೆ ನೀರಿನ ಮೂಲಕ ಹಾದುಹೋಗುವ ರೈಲುಮಾರ್ಗವನ್ನು ನಿರ್ಮಿಸಿದ್ದ್ದು ತನ್ನ ಸಾಧನೆಯನ್ನು ಹಂಚಿಕೊಳ್ಳಲು ಗುರುವಾರದಂದು ಮಾಧ್ಯಮ ಪ್ರತಿನಿಧಿಗಳಿಗೆ ಒಂದು ಜಾಲಿ ರೈಡ್ ಏರ್ಪಡಿಸಿತ್ತು. ಕೊಲ್ಕತ್ತಾ ಮೆಟ್ರೋ ಅಧಿಕಾರಿಗಳು ಈ ಸವಾರಿಗೆ ಜಾಯ್-ರೈಡ್ ಅಂತ ಹೆಸರಿಟ್ಟಿದ್ದರು.
‘ಇದು ಕೇವಲ ಮಾಧ್ಯಮದವರಿಗೆ ಮೀಸಲಾಗಿದ್ದ ಜಾಯ್ ರೈಡ್ ಆಗಿತ್ತು. ಟ್ರೈನು ಹೌರಾ ಮೈದಾನ ಸ್ಟೇಶನ್ ನಿಂದ ಹೊರಟು ಎಸ್ಪಾಂಡೆ ತಲುಪಿ ಅಲ್ಲಿಂದ ವಾಪಸ್ಸು ಹೌರಾ ಮೈದಾನಕ್ಕೆ ಬರುವ ಟ್ರಿಪ್ ವ್ಯವಸ್ಥೆ ಮಾಡಲಾಗಿತ್ತು. ಈ ಮಾರ್ಗದ ಮೂಲಕ ಅಧಿಕೃತವಾಗಿ ಮೆಟ್ರೋ ರೈಲು ಸಂಚಾರ ನಿರ್ದಿಷ್ಟವಾಗಿ ಯಾವಾಗ ಆರಂಭಿಸುತ್ತೇವೆ ಈಗಲೇ ಹೇಳಲಾಗದು. ವರ್ಷಾಂತ್ಯದವರೆಗೆ ಯೋಜನೆ ಪೂರ್ತಿಗೊಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ,’ ಎಂದು ಕೊಲ್ಕತ್ತಾ ಮೆಟ್ರೋ ರೇಲ್ ಕಾರ್ಪೋರೇಶನ್ ಪ್ರಧಾನ ವ್ಯವಸ್ಥಾಪಕ ಎಕೆ ನಂದಿ ಹೇಳುತ್ತಾರೆ.
ಇದನ್ನೂ ಓದಿ: Mangalore Airport: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರು ಪಾರ್ಕಿಂಗ್ಗೆ ವಿನೂತನ ಯೋಜನೆ ಜಾರಿ
ಹೂಗ್ಲೀ ನದಿಯ ಮೂಲಕ ನಿರ್ಮಿಸಲಾಗಿರುವ ಕೊಲ್ಲತ್ತಾ ಮೆಟ್ರೋದ ಜಲಾಂತರ ಸೆಕ್ಷನ್ ನಲ್ಲಿ ಪ್ರಾಯೋಗಿಕ ರೈಲು ಸಂಚಾರ ಏಪ್ರಿಲ್ 12 ರಂದು ಪ್ರಾರಂಭವಾಗಿದ್ದು ಇದು ಮುಂದಿನ ಐದರಿಂದ ಏಳು ತಿಂಗಳವರೆಗೆ ಮುಂದುವರಿಯಲಿದೆ. ಅದು ಮುಗಿದ ನಂತರವೇ ನಿಯಮಿತ ರೈಲು ಸಂಚಾರ ಆರಂಭಿಸಲಾಗುವುದು.
ಜಲಾಂತರ ಮಾರ್ಗದಲ್ಲಿ ರೈಲುಗಳ ಓಡಾಟ ಒಮ್ಮೆ ಆರಂಭವಾಯಿತು ಅಂತಾದ್ರೆ, ಹೌರಾ ಮೈದಾನ ನಿಲ್ದಾಣವು ಭಾರತದಲ್ಲೇ ಅತ್ಯಂತ ಆಳದ ರೈಲು ನಿಲ್ದಾಣ ಅನಿಸಿಕೊಳ್ಳಲಿದೆ. ಇದನ್ನು ನೀರಿನ ಮೇಲ್ಮೈಯಿಂದ 33 ಮೀಟರ್ ಆಳದಲ್ಲಿ ನಿರ್ಮಿಸಲಾಗಿದೆ.
ಇದನ್ನೂ ಓದಿ: ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ, ಆದರೆ ನನಗೆ ಟಿಕೆಟ್ ಮುಖ್ಯ ಅಲ್ಲ, ದೊಡ್ಡಗೌಡರ ಆರೋಗ್ಯ ಮುಖ್ಯ – ಭವಾನಿ ರೇವಣ್ಣ
ಕೊಲ್ಕತ್ತಾ ಮೆಟ್ರೋ ರೈಲು ಹೂಗ್ಲೀ ನದಿಯಲ್ಲಿ 520-ಮೀಟರ್ ಉದ್ದವಿರುವ ಜಲಮಾರ್ಗವನ್ನು 45 ಸೆಕೆಂಡುಗಳಲ್ಲಿ ಕ್ರಮಿಸುವ ನಿರೀಕ್ಷೆ ಇದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ