Ramadan Eid 2023: ಇಂದು ಚಂದ್ರ ದರ್ಶನವಾಗದ ಹಿನ್ನೆಲೆ, ಕರಾವಳಿ ಭಾಗದಲ್ಲಿ ಶನಿವಾರ ರಂಜಾನ್ ಹಬ್ಬ ಆಚರಣೆ

ಮುಸ್ಲಿಮರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಬ್ಬ ರಂಜಾನ್. ಇಂದು ಚಂದ್ರದರ್ಶನವಾಗದ ಹಿನ್ನೆಲೆ ಶುಕ್ರವಾರ ರಂಜಾನ್ ಉಪವಾಸ ಅಂತ್ಯವಾಗಲಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಶನಿವಾರ ಪವಿತ್ರ ಈದ್ ಉಲ್ ಫಿತರ್ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ.

Ramadan Eid 2023: ಇಂದು ಚಂದ್ರ ದರ್ಶನವಾಗದ ಹಿನ್ನೆಲೆ, ಕರಾವಳಿ ಭಾಗದಲ್ಲಿ ಶನಿವಾರ ರಂಜಾನ್ ಹಬ್ಬ ಆಚರಣೆ
ಪ್ರಾತಿನಿಧಿಕ ಚಿತ್ರ
Follow us
| Updated By: ಝಾಹಿರ್ ಯೂಸುಫ್

Updated on:Apr 20, 2023 | 10:17 PM

ಮಂಗಳೂರು: ಗುರುವಾರ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಶನಿವಾರ ಪವಿತ್ರ ಈದ್ ಉಲ್ ಫಿತರ್ (ರಂಜಾನ್ ಹಬ್ಬ) ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತಕ್ವಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ. ಹೀಗಾಗಿ ಶುಕ್ರವಾರ ಕರಾವಳಿ ಭಾಗದ ಮುಸ್ಲಿಮರು ಉಪವಾಸ ವೃತ ಕೈಗೊಳ್ಳಬಹುದಾಗಿದೆ. ಅಲ್ಲದೆ ಶುಕ್ರವಾರದೊಂದಿಗೆ 1 ತಿಂಗಳ ಮುಸ್ಲಿಮರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಬ್ಬ ರಂಜಾನ್ (Ramadan Festival 2023) ಉಪವಾಸ ಅಂತ್ಯವಾಗಲಿದ್ದು, ದಕ್ಷಿಣ ಕನ್ನಡ-ಉಡುಪಿ ಸೇರಿದಂತೆ ಕರಾವಳಿ ಭಾಗದ ಮುಸ್ಲಿಮರು ಶನಿವಾರ ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಿದ್ದಾರೆ.

​ರಂಜಾನ್ ತಿಂಗಳ ಉಪವಾಸ ಕೊನೆಗೊಂಡ ನಂತರ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಮಿಕ್ ಧರ್ಮದಲ್ಲಿ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಇದು ಕೂಡಾ ಒಂದು. ಈ ದಿನದಂದು ಮುಸ್ಲಿಮರು ತಮ್ಮ ಉಪವಾಸ(ರೋಜಾ)ವನ್ನು ಕೊನೆಗೊಳಿಸುತ್ತಾರೆ. ರಂಜಾನ್ ಸಮಯದಲ್ಲಿ ಅವರಿಗೆ ಆರೋಗ್ಯ ಮತ್ತು ಪ್ರತಿರೋಧಕವನ್ನು ನೀಡಿದ್ದಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಹೇಳಿ ಹೊಸ ಬಟ್ಟೆಯನ್ನು ಧರಿಸುತ್ತಾರೆ. ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತಾರೆ, ದಾನ ಮಾಡುತ್ತಾರೆ, ಕುಟುಂಬ ಮತ್ತು ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯುತ್ತಾರೆ.

ಇದನ್ನೂ ಓದಿ: Eid-Ul-Fitr 2023: ನೀವು ಭೇಟಿ ನೀಡಲೇಬೇಕಾದ ಪ್ರಮುಖ ಮಸೀದಿಗಳ ಮಾಹಿತಿ ಇಲ್ಲಿವೆ

ಈದ್-ಉಲ್-ಫಿತಾರ್ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್​​ನ ಹತ್ತನೇ ತಿಂಗಳಾದ ಶವ್ವಾಲ್​​ನ ಮೊದಲ ದಿನದಂದು ಅಮಾವಾಸ್ಯೆಯ ದರ್ಶನದ ನಂತರ ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್​​ನ ಅನುಗುಣವಾಗಿ ಚಂದ್ರನ ಹಿಜ್ರಿ ತಿಂಗಳ ಆರಂಭವು ಧಾರ್ಮಿಕ ವ್ಯವಸ್ಥೆಗಳು ಅಂದರೆ ಕಾಲನುಕ್ರಮದಲ್ಲಿ ಬದಲಾವಣೆಯು ಅಮವಾಸ್ಯೆಯ ವೀಕ್ಷಣೆಗೆ ಅನುಗುಣವಾಗಿ ಬದಲಾಗುವುದರಿಂದ ಈದ್-ಉಲ್-ಫಿತರ್ ವಿವಿಧ ಪ್ರದೇಶಗಳಲ್ಲಿ ವಿವಿಧ ದಿನಗಳಲ್ಲಿ ಬರುತ್ತದೆ.

ಈ ವರ್ಷ ಈದ್-ಉಲ್-ಫಿತಾರ್ ನ್ನು ಏಪ್ರಿಲ್ 21 ಶುಕ್ರವಾರದಿಂದ ಏಪ್ರಿಲ್ 23 ಭಾನುವಾರದವರೆಗೆ ಆಚರಿಸಲಾಗುತ್ತದೆ ಎಂದು ಹೇಳಲಾದ್ದು, ಚಂದ್ರನ ವೀಕ್ಷಣೆಗೆ ಅನುಗುಣವಾಗಿ ನಿಜವಾದ ದಿನಾಂಕ ಬದಲಾವಣೆಯಾಗಿದೆ.

ಈದ್-ಉಲ್-ಫಿತಾರ್ ಹಬ್ಬದ ಇತಿಹಾಸ ಮತ್ತು ಮಹತ್ವ:

ಪವಿತ್ರ ಕುರಾರ್​​​ನ್ನು ಪ್ರವಾದಿ ಮುಹಮ್ಮದ್ ಅವರಿಗೆ ರಂಜಾನ್ ತಿಂಗಳಲ್ಲಿ ಬಹಿರಂಗಪಡಿಸಲಾಯಿತು ಎಂದು ನಂಬಲಾಗಿದೆ. ಆ ಕಾರಣದಿಂದ ಮುಸ್ಲಿಮರು ಈ ತಿಂಗಳನ್ನು ಮಂಗಳಕರವೆಂದು ಪರಿಗಣಿಸುತ್ತಾರೆ. ಮತ್ತು ಈ ತಿಂಗಳಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸವನ್ನು ಹಿಡಿಯುತ್ತಾರೆ. ಅಲ್ಲಾಹನಿಗೆ ಪ್ರಾರ್ಥಿಸಲು ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರುತ್ತಾರೆ.

ಈದ್-ಉಲ್-ಫಿತಾರ್ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಮತ್ತು ಅವರು ರುಚಿಕರವಾದ ಊಟದೊಂದಿಗೆ ಉಪವಾಸವನ್ನು ಮುಗಿಸುತ್ತಾರೆ. ಈದ್-ಉಲ್-ಫಿತಾರ್ ದಿನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿ ಹಬ್ಬವನ್ನು ಆಚರಿಸುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:33 pm, Thu, 20 April 23

ತಾಜಾ ಸುದ್ದಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!