ಮೈಸೂರಿನ ದಟ್ಟಗಳ್ಳಿಯಲ್ಲಿ ಎಲೆಕ್ಟ್ರಿಕಲ್ ಅಂಗಡಿಯ ಶೆಲ್ಟರ್ ಮುರಿದು ಕಳ್ಳತನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 02, 2023 | 10:09 AM

ನಗರದ ದಟ್ಟಗಳ್ಳಿ ಕ್ರೈಸ್ತ ಪಬ್ಲಿಕ್ ಸ್ಕೂಲ್ ಬಳಿಯ ಕೆ.ಎನ್‌‌‌.ಎಸ್ ಕಾಂಪ್ಲೆಕ್ಸ್​ನಲ್ಲಿದ್ದ ಶಿವನಂದ ಎಂಬುವವರಿಗೆ ಸೇರಿದ ಪುಷ್ಪಗಿರಿ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಖದೀಮರು 5 ಲಕ್ಷಕ್ಕೂ ಅಧಿಕ ಬೆಲೆಬಾಳುವ ವಸ್ತು ಕದ್ದು ಪರಾರಿಯಾಗಿದ್ದಾರೆ.

ಮೈಸೂರಿನ ದಟ್ಟಗಳ್ಳಿಯಲ್ಲಿ ಎಲೆಕ್ಟ್ರಿಕಲ್ ಅಂಗಡಿಯ ಶೆಲ್ಟರ್ ಮುರಿದು ಕಳ್ಳತನ
ಎಲೆಕ್ಟ್ರಿಕಲ್​ ಅಂಗಡಿ ಕಳ್ಳತನ ಮಾಡಿದ ಖದೀಮರು
Follow us on

ಮೈಸೂರು: ಎಲೆಕ್ಟ್ರಿಕಲ್​​​ ಅಂಗಡಿಯ ಶೆಲ್ಟರ್ ಮುರಿದು 30 ಸಾವಿರ ಹಣ ನಗದು ಹಾಗೂ ಅಂಗಡಿಯಲ್ಲಿದ್ದ ವೈಯರ್, ಮೋಟಾರ್, ವ್ಯಾಕ್ಯೂಮ್ ಕ್ಲೀನರ್, ಲ್ಯಾಪ್ ಟಾಪ್ ಸೇರಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಲೆಬಾಳುವ ಎಲೆಕ್ಟ್ರಿಕಲ್​​​​ ವಸ್ತುಗಳು ಕದ್ದು ಪರಾರಿಯಾದ ಘಟನೆ ನಗರದ ದಟ್ಟಗಳ್ಳಿಯಲ್ಲಿ ನಡೆದಿದೆ. ಶಿವಾನಂದ ಎಂಬುವರಿಗೆ ಸೇರಿದ ಎಲೆಕ್ಟ್ರಿಕಲ್​​​ ಅಂಗಡಿ ಇದಾಗಿದ್ದು, ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಳಿಯಾಳ ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಕಾಣಿಸಕೊಂಡ ಒಂಟಿ ಸಲಗ

ಉತ್ತರ ಕನ್ನಡ: ಜಿಲ್ಲೆಯ ಹಳಿಯಾಳ ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ವಾಹನ ಸವಾರರು ಆತಂಕಗೊಂಡಿದ್ದರು. ಹಳಿಯಾಳದ ಭಾಗವತಿ ಬಳಿ ಈ ಘಟನೆ ನೆಡೆದಿದ್ದು, ರಸ್ತೆಯಲ್ಲಿ ಆನೆ ಕಂಡರು ಕಾರು ಚಾಲಕನೊಬ್ಬ ವೇಗವಾಗಿ ನುಗ್ಗಿಸಿ ಹುಚ್ಚಾಟ ಮೆರೆದಿದ್ದಾನೆ. ಇ ವೇಳೆ ಕಾರಿನ ಮೇಲೆ ಆನೆ ಅಟ್ಯಾಕ್ ಮಾಡಲು ಮುಂದಾಗಿದೆ. ಸ್ವಲ್ಪದರಲ್ಲಿ ಕಾರು ಅನಾಹುತದಿಂದ ತಪ್ಪಿಸಿಕೊಂಡಿದೆ. ಕಾರು ಚಾಲಕನ ಹುಚ್ಚಾಟಕ್ಕೆ ಜನ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಸಮಯದ ಬಳಿಕ ಮರಳಿ ಕಾಡಿಗೆ ಹೋಗಿದೆ. ಈ ವೇಳೆ ವಾಹನ ಸವಾರರು ಆನೆ ಕಂಡು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆಗಳ ಹಾವಳಿ

ರಾಮನಗರ: ತಾಲೂಕಿನ ಪೂಜಾರಿದೊಡ್ಡಿ ಗ್ರಾಮದ ಗಂಗಾಧರ್ ಎಂಬುವವರು ಬೆಳೆದ ಬೆಳೆಯನ್ನ ಕಾಡಾನೆಗಳು ಹಾಳು ಮಾಡಿದ್ದು, ಕಾಡಾನೆ ಹಾವಳಿ ತಡೆಗಟ್ಟದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಿಂಡು ದಾಳಿಗೆ ಅಪಾರ ಪ್ರಮಾಣದ ಅಡಿಕೆ, ತೆಂಗು, ಮಾವು ಬೆಳೆಗಳು ನಾಶವಾಗಿದೆ.

ಇದನ್ನೂ ಓದಿ:Elephant Attack: ಮೈಸೂರಿನಲ್ಲಿ ಆನೆ ದಾಳಿ: ಮಹಿಳೆ ಸಾವು, ಓರ್ವನಿಗೆ ಗಂಭೀರ ಗಾಯ

ಯುವಕನೋರ್ವನ ಸುತ್ತುವರೆದು ಹಲ್ಲೆ ಮಾಡುತ್ತಿರೊ ವಿಡಿಯೋ ಇದೀಗ ವೈರಲ್ ಆಗಿದೆ.

ಬೆಂಗಳೂರು: ನಗರದ ಚರ್ಚ್ ಸ್ಟ್ರೀಟ್​ನಲ್ಲಿ ನಡೆದಿದೆ ಎನ್ನಲಾದ ವಿಡಿಯೋದಲ್ಲಿ ಅವಾಚ್ಯ ಶಬ್ಧಗಳಿಂದ ಯುವಕನನ್ನ ನಿಂದಿಸಿ, ನೆಲಕ್ಕೆ ತಳ್ಳಿ ಕಾಲುಗಳಿಂದ ಒದ್ದು ಹಲ್ಲೆ ಮಾಡಲಾಗುತ್ತಿದೆ. ಬಳಿಕ ಯುವಕನನ್ನ ಚೇಡಿಸುತ್ತಿರುವ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:10 am, Thu, 2 February 23