ಜೀವಾವಧಿ ಶಿಕ್ಷೆಗೆ ಗುರಿಯಾಗಿ ಮೈಸೂರು ಜೈಲಿನ ಮೂವರು ಕೈದಿಗಳು ನಿಗೂಢ ಸಾವು

| Updated By: ರಮೇಶ್ ಬಿ. ಜವಳಗೇರಾ

Updated on: Jan 08, 2025 | 6:01 PM

ಜೀವಾವಧಿ ಶಿಕ್ಷೆಗೆ ಗುರಿಯಾಗಿ ಮೈಸೂರು ಜಿಲ್ಲಾ ಕಾರಾಗೃಹದಲ್ಲಿದ್ದ ಮೂವರು ಕೈದಿಗಳು ಏಕಾಏಕಿ ಮೃತಪಟ್ಟಿದ್ದಾರೆ. ಜೈಲಿನಲ್ಲಿ ಕೇಕ್ ತಯಾರಿಕೆಗೆ ಬಳಸುವ ಎಸ್ಸೆನ್ಸ್‌ (Cake Essence) ದ್ರವ ಸೇವಿಸಿ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಕೇಕ್ ತಯಾರಿಕೆಗೆ ಬಳಸುವ ಎಸ್ಸೆನ್ಸ್‌ (Cake Essence) ದ್ರವ ಕುಡಿದ ಪರಿಣಾಮ ಮೂವರು ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ವೈದ್ಯ ಕೈದಿಗಳ ಸಾವಿನ ಬಗ್ಗೆ ಆಸ್ಪತ್ರೆಯ ವೈದ್ಯ ಡಾ.ದಿನೇಶ್ ಪ್ರತಿಕ್ರಿಯಿಸಿದ್ದು, ಅದರ ವಿವರ ಇಲ್ಲಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿ ಮೈಸೂರು ಜೈಲಿನ ಮೂವರು ಕೈದಿಗಳು ನಿಗೂಢ ಸಾವು
Mysuru Jail
Follow us on

ಮೈಸೂರು, (ಜನವರಿ 08): ಇಲ್ಲಿನ ಕಾರಾಗೃಹದಲ್ಲಿ (Mysuru Jail) ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮೂವರು ಕೈದಿಗಳು ಮೃತಪಟ್ಟಿದ್ದಾರೆ. ಕೇಕ್ ತಯಾರಿಕೆಗೆ ಬಳಸುವ ಎಸ್ಸೆನ್ಸ್‌ (Cake Essence) ದ್ರವ ಕುಡಿದ ಪರಿಣಾಮ ಮೂವರು ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಆದ್ರೆ, ನಿಖರವಾಗಿ ಕಾರಣ ತಿಳಿದುಬಂದಿಲ್ಲ. ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾದೇಶ್, ನಾಗರಾಜ್ ಮತ್ತು ರಮೇಶ್ ಮೃತ ಕೈದಿಗಳು.

ಮೂವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಗುಂಡ್ಲುಪೇಟೆಯ ಮಾದೇಶ್ ಮೃತಪಟ್ಟಿದ್ದ. ನಿನ್ನೆ (ಜ.07) ಚಾಮರಾಜನಗರ ಮೂಲದ ನಾಗರಾಜ್ ಮೃತಪಟ್ಟಿದ್ದ. ಇಂದು (ಜನವರಿ 08) ಮಂಡ್ಯ ಮೂಲದ ರಮೇಶ್ ಮೃತಪಟ್ಟಿದ್ದಾನೆ.

ಮೃತ ದೇಹಗಳ ಮರಣೋತ್ತರ ಪರೀಕ್ಷೆ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆಸಿ ನಂತರ ಮೃತ ದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಪ್ರಕರಣ ಬಗ್ಗೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಇಲಾಖಾ ಮಟ್ಟದ ತನಿಖೆ ಕೂಡ ಶುರು ಮಾಡಿದ್ದಾರೆ.

ಕೆ.ಆರ್ ಆಸ್ಪತ್ರೆಯ ವೈದ್ಯ ಹೇಳಿದ್ದೇನು?

ಮೂವರು ಕೈದಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್ ಆಸ್ಪತ್ರೆಯ ವೈದ್ಯ ದಿನೇಶ್ ಪ್ರತಿಕ್ರಿಯಿಸಿದ್ದು, ಮೂವರು ಕೈದಿಗಳು ಎಸೆನ್ಸ್ ಸೇವನೆಯಿಂದಲೇ ಮೃತ ಪಟ್ಟಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲು ಸಾಧ್ಯವಿಲ್ಲ. ಮೂವರು ಖೈದಿಗಳು ಜೈಲಿನಲ್ಲಿ ಬೇಕರಿ ಪದಾರ್ಥಗಳನ್ನು ತಯಾರು ಮಾಡುತ್ತಿದ್ದರು. ವಾಂತಿ ಭೇದಿ ಎಂದು ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆರಂಭದಲ್ಲಿ ಎಸೆನ್ಸ್ ಸೇವನೆಯ ಬಗ್ಗೆ ಕೈದಿಗಳು ಮಾಹಿತಿ ನೀಡಲಿಲ್ಲ. ಫುಡ್ ಪಾಯಿಸನ್ ವಿಚಾರಕ್ಕೆ ಚಿಕಿತ್ಸೆ ಕೊಡುತ್ತಿದ್ದೇವು. ಒಂದೇ ದಿನದಲ್ಲಿ ಅಂಗಾಂಗ ವೈಫಲ್ಯ ಆಗಲು ಶುರು ಆಯಿತು. ನಂತರ ವಿಚಾರಣೆ ಮಾಡಿದಾಗ ರಮೇಶ್ ಎಸೆನ್ಸ್ ಸೇವನೆಯ ಬಗ್ಗೆ ಮಾಹಿತಿ ನೀಡಿದರು. ಆದರೆ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಸಾಧ್ಯವಾಗಲಿಲ್ಲ. ಯಾಕಂದ್ರೆ ಮೂವರು ಕೂಡ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದರು.

ಕಿವಿ ಕೇಳಿಸುತ್ತಿರಲಿಲ್ಲ. ನಂತರ ಪ್ರತಿನಿತ್ಯ ಕಿಮೋ ಡಯಾಲಿಸಿಸ್ ಮಾಡಲು ಶುರು ಮಾಡಿದೆವು. ಮಾದಕ ವಸ್ತುಗಳ ಸೇವೆನೆ ಮಾಡಿದ್ದಾರ ಎಂಬ ಬಗ್ಗೆ ಪರೀಕ್ಷೆ ಮಾಡಲಾಗಿದೆ. ಮಾದಕ ವಸ್ತು ಸೇವನೆ ಮಾಡಿಲ್ಲ ಎಂಬುದು ವರದಿಯಿಂದ ಧೃಡಪಟ್ಟಿದೆ. ಸ್ಯಾಂಪಲ್ ಗಳನ್ನಯ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಮೂವರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಈ ಬಗ್ಗೆ ವೆಲ್ಲೂರು ಆಸ್ಪತ್ರೆ ಹಾಗೂ ಬೆಂಗಳೂರು ವೈದ್ಯರ ಜೊತೆ ಚರ್ಚೆ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.