ಮೈಸೂರು ದಸರಾದಲ್ಲಿ ಗಿನ್ನೆಸ್ ದಾಖಲೆ ಬರೆದ ಹುಲಿ ಕಲಾಕೃತಿ ಡ್ರೋನ್‌ ಪ್ರದರ್ಶನ

ಮೈಸೂರು ದಸರಾದಲ್ಲಿ ಭಾರೀ ಆಕರ್ಷಣೆಯನ್ನು ನೀಡಿದ ಡ್ರೋನ್ ಪ್ರದರ್ಶನ ಇದೀಗ ವಿಶ್ವ ದಾಖಲೆಯನ್ನು ಮಾಡಿದೆ. ಈ ಬಾರೀ 2,983 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಬಳಸಿಕೊಂಡು ಪ್ರದರ್ಶನವನ್ನು ನೀಡಲಾಗಿತ್ತು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಈ ಪ್ರದರ್ಶನವನ್ನು ಮಾಡಿತ್ತು. ಇದರಲ್ಲಿ ವಿಶೇಷವಾಗಿ ಹುಲಿಯ ಕಲಾಕೃತಿ ಗಿನ್ನೆಸ್ ದಾಖಲೆ ಮಾಡಿದೆ.

ಮೈಸೂರು ದಸರಾದಲ್ಲಿ ಗಿನ್ನೆಸ್ ದಾಖಲೆ ಬರೆದ ಹುಲಿ ಕಲಾಕೃತಿ ಡ್ರೋನ್‌ ಪ್ರದರ್ಶನ
ಹುಲಿ ಪ್ರದರ್ಶನ

Updated on: Sep 30, 2025 | 10:02 AM

ಮೈಸೂರು, ಸೆ.30:  ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ (Mysore Dasara) ಹಲವು ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಪೈಕಿ ಸೆ.28ರಂದು ಬೇರೆ ಬೇರೆ ಕಲಾಕೃತಿಗಳನ್ನು ಸಾವಿರಾರು ಡ್ರೋನ್ ಬಳಸಿಕೊಂಡು ಪ್ರದರ್ಶನ ನೀಡಲಾಗಿತ್ತು. ದುರ್ಗದೇವಿ, ಹುಲಿ, ಅಂಬಾರಿ, ಅರ್ಜುನ, ಹೀಗೆ ಅನೇಕ ಪ್ರದರ್ಶನ ನೀಡಿ, ಅಲ್ಲಿ ನೆರೆದಿದ್ದ ಜನರನ್ನು ಖುಷಿ ಪಡಿಸಿತ್ತು. ಈ ಪ್ರದರ್ಶನ ಸೆ.28ರಂದು ಸಂಜೆ ಮೈಸೂರಿನ ಬನ್ನಿಮಂಟಪದ ಟಾರ್ಚ್‌ಲೈಟ್ ಪೆರೇಡ್ ಮೈದಾನದಲ್ಲಿ ನಡೆದಿದೆ. 2,983 ಡ್ರೋನ್‌ಗಳನ್ನು ಬಳಸಿಕೊಂಡು ಈ ಪ್ರದರ್ಶನವನ್ನು ನೀಡಲಾಗಿತ್ತು. ಇದೀಗ ಈ ಪ್ರದರ್ಶನದಲ್ಲಿ ಭಾರೀ ಸದ್ದು ಮಾಡಿದ್ದು ಹುಲಿಯ ಕಲಾಕೃತಿ, ಈ ಕಲಾಕೃತಿ ಗಿನ್ನೆಸ್ ದಾಖಲೆ ಮಾಡಿದೆ. ಈ ಬಗ್ಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (CESC) ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ್ ರಾಜು ಮಾಹಿತಿ ನೀಡಿದ್ದಾರೆ

ದಸರಾ ಉತ್ಸವದ ಭಾಗವಾಗಿ ಡ್ರೋನ್ ಪ್ರದರ್ಶನವನ್ನು CESC ನಡೆಸಿತ್ತು. 2024ರಲ್ಲೂ ಕೂಡ ಈ ಪ್ರದರ್ಶನವನ್ನು ನಡೆಸಲಾಗಿತ್ತು. ಆ ವರ್ಷದಲ್ಲಿ 1,500 ಡ್ರೋನ್‌ ಪ್ರದರ್ಶನ ನಡೆಸಲಾಗಿತ್ತು. ಈ ಬಾರಿ 3,000 ಡ್ರೂನ್​​​ ಉಪಯೋಗಿಸಲಾಗಿದೆ. ಈ ಪ್ರದರ್ಶನದ ವೇಳೆ ಹುಲಿಯ ಕಲಾಕೃತಿ ವಿಶೇಷವಾಗಿತ್ತು ಹಾಗೂ ಇದು ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಇಲ್ಲಿಯವರೆಗೆ ಈ ಸಾಧನೆಯನ್ನು ಮಾಡಿಲ್ಲ. ಈ ವಿಶೇಷ ದಾಖಲೆಯನ್ನು ನಿರ್ಮಿಸಲು ಲಂಡನ್‌ನಿಂದ ತಂಡವನ್ನು ಕರೆಸಲಾಗಿತ್ತು. ಇದಕ್ಕೆ CESC ಕೂಡ ಎಲ್ಲ ತಯಾರಿಯನ್ನು ಮಾಡಿಕೊಂಡಿತ್ತು. ಇನ್ನು ಈ ಪ್ರದರ್ಶನದ ಪೂರ್ವ ತಯಾರಿಯ ಬಗ್ಗೆ ಎಂಜಿನಿಯರ್‌ಗಳು, ಲೆಕ್ಕಪರಿಶೋಧಕರು ಮತ್ತು ಕಾನೂನು ವಕೀಲರು ಪರಿಶೀಲಿಸಿದ್ದರು ಎಂದು CESC ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ್ ರಾಜು ಹೇಳಿದ್ದಾರೆ.

ಈ ವರ್ಷದ ಮೈಸೂರಿನ ಬೀದಿಗಳು ಮತ್ತು ಜಂಕ್ಷನ್‌ಗಳ ದೀಪಾಲಂಕಾರ ಮತ್ತು ಡ್ರೋನ್ ಪ್ರದರ್ಶನವು ‘ಸ್ಮರಣೀಯ’ ಅನುಭವಕ್ಕೆ ಕೊಡುಗೆ ನೀಡುತ್ತದೆ ಎಂದು ಹೇಳಿದ್ದಾರೆ. ಈ ಹಿಂದಿನ ದಾಖಲೆಗಳನ್ನು ಈ ಪ್ರದರ್ಶನ ಬ್ರೇಕ್ ಮಾಡಿ ಎಂದು ಹೇಳಿದ್ದಾರೆ. 1,985 ಡ್ರೋನ್‌ಗಳನ್ನು ಬಳಸಿಕೊಂಡು ಹುಲಿಯ ಕಲಾಕೃತಿಯನ್ನು ರಚಿಸಲಾಗಿದೆ. ಈ ಪ್ರದರ್ಶನಕ್ಕೂ ಮೊದಲು ಪ್ರಾಯೋಗಿಕ ಪ್ರದರ್ಶನ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಅಕ್ಟೋಬರ್ 1 ಮತ್ತು 2 ರಂದು ನಿಗದಿಯಾಗಿದ್ದ ಮುಖ್ಯ ಪ್ರದರ್ಶನಗಳಿಗೆ ಮುಂಚಿತವಾಗಿ ಸೆಪ್ಟೆಂಬರ್ 28 ಮತ್ತು 29 ರಂದು CESC ಎರಡು ಪ್ರಾಯೋಗಿಕ ಪ್ರದರ್ಶನಗಳನ್ನು ಯೋಜಿಸಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಳೆಗಟ್ಟಿದ ನವರಾತ್ರಿ ಸಂಭ್ರಮ: ದಸರಾ ಬೊಂಬೆಗಳ ಸೌಂದರ್ಯಕ್ಕೆ ಸಿಟಿಮಂದಿ ಫಿದಾ, ಇಲ್ಲಿವೆ ಫೋಟೋಸ್​​

ಈ ಡ್ರೋನ್ ಪ್ರದರ್ಶನ ಪ್ರದರ್ಶನದಲ್ಲಿ ಸೌರಮಂಡಲ, ವಿಶ್ವ ನಕ್ಷೆ, ಹೆಮ್ಮೆಯ ಭಾರತೀಯ ಸೈನಿಕ, ನವಿಲು, ಡಾಲ್ಫಿನ್, ಹದ್ದು, ಸರ್ಪದ ಮೇಲೆ ನೃತ್ಯ ಮಾಡುತ್ತಿರುವ ಶ್ರೀಕೃಷ್ಣ, ‘ಕಾವೇರಿ ತಾಯಿ’, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕರ್ನಾಟಕದ ನಕ್ಷೆ, ಐದು ಖಾತರಿ ಯೋಜನೆಗಳೊಂದಿಗೆ ಕರ್ನಾಟಕದ ನಕ್ಷೆ, ಅಂಬಾರಿ ಆನೆ ಮತ್ತು ಚಾಮುಂಡೇಶ್ವರಿ ಚಿತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ