ಮೈಸೂರು: ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಗರ್ಗೇಶ್ವರಿ ಬಳಿ ರಸ್ತೆಯಲ್ಲಿ ಅಡ್ಡ ಬಂದ ಹಂದಿಗೆ ಡಿಕ್ಕಿ ತಪ್ಪಿಸಲು ಹೋಗಿ ಕಾರು ಗದ್ದೆಗೆ ನುಗ್ಗಿದೆ. ಕಾರು ಚಾಲಕ ದುಷ್ಯಂತ (33) ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಾಯಗಳಾಗಿವೆ. ದುಷ್ಯಂತ್ ಮೈಸೂರಿನ ಜೆಪಿ ನಗರದ ನಿವಾಸಿ. ಕಾರಿನಲ್ಲಿದ್ದ ಸುರೇಶ್ ಮತ್ತು ದಯಾನಂದ್‌ಗೆ ಗಾಯಗಳಾಗಿವೆ. ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಭಾವಿ ವೈದ್ಯನ ಅಪಘಾತ ವರಸೆ, ಬೈಕ್ ಸವಾರನ ವಿರುದ್ದವೂ ಪ್ರಕರಣ?
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬಲ್ಲಾ ಹುಣಸಿ ಗ್ರಾಮದ ಬಳಿ ಡಾ. ರಾಜೇಶ್ ನಾಯ್ಕ್ ಕಾರು ಡಿಕ್ಕಿ ಪ್ರಕರಣದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿವೆ. ಗಾಯಾಳು ಬಸವರಾಜ್‌ಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ದೂರದ ಸಂಬಂಧಿಯಾಗಿರುವ ವೈದ್ಯ ರಾಜೇಶ್ ಈ ಹಿಂದೆಯೂ ಅಪಘಾತವೆಸಗಿದ್ದ ಆರೋಪವಿದೆ. ಸೂಕ್ತ ಪರಿಹಾರಕ್ಕೆ ಮೃತ ವ್ಯಕ್ತಿಯ ಸಂಬಂಧಿಕರು ಮತ್ತು ಗಾಯಾಳುವಿನ ಸಂಬಂಧಿಕರು ಆಗ್ರಹಿಸಿದ್ದಾರೆ. ಆಘಾತಕಾರಿಯೆಂದರೆ, ಅಪಘಾತವಾಗಿ ಹಲವು ಗಂಟೆಯಾದರೂ ಸ್ಥಳೀಯ ಪೊಲೀಸರು FIR ದಾಖಲಿಸಿಲ್ಲ. ಆದರೆ, ಬೈಕ್ ಸವಾರ ಹಾಗೂ ಕಾರು ಚಾಲಕ ವೈದ್ಯ ರಾಜೇಶ ನಾಯಕ ಇಬ್ಬರದ್ದೂ ತಪ್ಪು ಎನ್ನುತ್ತಿರುವ ಪೊಲೀಸರು ಬೈಕ್ ಹಾಗೂ ಕಾರು ಚಾಲಕನ ವಿರುದ್ದ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ!
ಹೊಸಪೇಟೆ: ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬಳಿ ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾಗಿದ್ದಾರೆ. ಬಳ್ಳಾರಿ ತಾಲೂಕಿನ ವೀರಾಪುರದ ಮಂಜುನಾಥ ಮೃತರು. ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಸವಾರ ಹೊಸಪೇಟೆ ಪಟ್ಟಣದಿಂದ ತೋರಣಗಲ್ ಗೆ ಆಗಮಿಸುತ್ತಿದ್ದ.
ಪೊಲೀಸ್ ಇನ್ಸ್‌ಪೆಕ್ಟರ್ ಕಾರಿನ ಗಾಜನ್ನೇ ಒಡೆದು ಬೆಲೆ ಬಾಳುವ ವಸ್ತುಗಳನ್ನು ಕದ್ದ ಖದೀಮರು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳರ(Thief) ಹಾವಳಿ ಹೆಚ್ಚಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಪೊಲೀಸ್ ಇನ್ಸ್‌ಪೆಕ್ಟರ್ನ(Police Inspector) ಕಾರಿನ ಗಾಜನ್ನೇ ಒಡೆದು ಖದೀಮರು ಕಳ್ಳತನ ಮಾಡಿದ್ದಾರೆ. ಬೆಂಗಳೂರಿನ ರೇಸ್‌ಕೋರ್ಟ್ ರಸ್ತೆ ಕಾಂಗ್ರೆಸ್ ಕಚೇರಿ ಬಳಿ ನಿಲ್ಲಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಸಾಳುಂಕೆ ಕಾರಿನ ಗಾಜು ಒಡೆದು ಖದೀಮರು ಕಳ್ಳತನ(Theft) ಮಾಡಿದ್ದಾರೆ. ಕಾರಿನಲ್ಲಿದ್ದ 1 ಲ್ಯಾಪ್‌ಟಾಪ್, 3 ಪೆನ್‌ಡ್ರೈವ್, 50 ಸಾವಿರ ನಗದು ಕಳವಾಗಿದೆ.
ಇನ್ಸ್‌ಪೆಕ್ಟರ್ ಅರುಣ್, ಕಾಂಗ್ರೆಸ್ ಕಚೇರಿ ಬಳಿ ಕಾರು ನಿಲ್ಲಿಸಿ ತೆರಳಿದ್ದರು. ವಾಪಸ್ ಬರುವಷ್ಟರಲ್ಲಿ ಕಳ್ಳರು ಕಾರಿನ ಹಿಂಬದಿ ಗಾಜು ಒಡೆದು ಕಾರಿನಲ್ಲಿದ್ದ 1 ಲ್ಯಾಪ್‌ಟಾಪ್, 3 ಪೆನ್‌ಡ್ರೈವ್, 50 ಸಾವಿರ ನಗದು ಕಳ್ಳತನ ಮಾಡಿದ್ದರು. ಸದ್ಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಶುರು ಮಾಡಿದ್ದಾರೆ.
ಇದನ್ನೂ ಓದಿ:
Sidlaghatta: ಶಿಡ್ಲಘಟ್ಟದ ಇತಿಹಾಸದಲ್ಲಿಯೇ ದಂಪತಿಯ ಭೀಕರ ಕೊಲೆ, ಗವಾಕ್ಷಿಯಿಂದ ಇಳಿದು ಕುಕೃತ್ಯ, ನಗನಾಣ್ಯ ದರೋಡೆ
ಇದನ್ನೂ ಓದಿ:
HD Revanna: ದೇವಾಲಯ ಉದ್ಘಾಟನೆ ವೇಳೆ ಬೆಂಬಲಿಗರಿಗೆ ನಿಂಬೆಹಣ್ಣು ಹಂಚಿದ ಹೆಚ್ಡಿ ರೇವಣ್ಣ
Published On - 7:51 am, Fri, 11 February 22