AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

HD Revanna: ದೇವಾಲಯ ಉದ್ಘಾಟನೆ ವೇಳೆ ಬೆಂಬಲಿಗರಿಗೆ ನಿಂಬೆಹಣ್ಣು ಹಂಚಿದ ಹೆಚ್ಡಿ ರೇವಣ್ಣ

ಶಿವಲಿಂಗೇಗೌಡ ವೇದಿಕೆ ಮೇಲಿದ್ದ ನಿಂಬೆಹಣ್ಣು ನೋಡುತ್ತಲೆ ಕೈಗೆತ್ತಿಕೊಂಡು ಎಲ್ಲರಿಗೂ ಕೊಡುವಂತೆ ತಮಾಷೆ ಮಾಡಿದ್ರು. ಆಗ ರೇವಣ್ಣ ತಾವೇ ನಿಂಬೆಹಣ್ಣು ಎತ್ತಿಕೊಂಡು ತಮ್ಮ ಕಾರ್ಯಕರ್ತರ ಕಡೆಗೆ ಉರುಳಿಸಿದ್ರು.

HD Revanna: ದೇವಾಲಯ ಉದ್ಘಾಟನೆ ವೇಳೆ ಬೆಂಬಲಿಗರಿಗೆ ನಿಂಬೆಹಣ್ಣು ಹಂಚಿದ ಹೆಚ್ಡಿ ರೇವಣ್ಣ
ಶಾಸಕ ಶಿವಲಿಂಗೇಗೌಡ, ಹೆಚ್ಡಿ ರೇವಣ್ಣ
TV9 Web
| Edited By: ಆಯೇಷಾ ಬಾನು|

Updated on: Feb 11, 2022 | 7:38 AM

Share

ಹಾಸನ: ಹೆಚ್ಡಿ ರೇವಣ್ಣ(HD Revanna) ಮತ್ತು ನಿಂಬೆ ಹಣ್ಣು(lemon) ಜೋಡಿ ನಿಮಗೆಲ್ಲಾ ಗೊತ್ತೇ ಇದೆ. ಹೆಚ್ಡಿ ರೇವಣ್ಣ ತಮ್ಮ ಜೀವನದಲ್ಲಿ ನಿಂಬೆಹಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ. ಶುಭ ಸಂಭ್ರಮದ ಸಮಯ ಅಂತಲ್ಲ, ಕಷ್ಟದ ಸಮಯ ಅಂತಲ್ಲ – ಎಲ್ಲಾ ಸಮಯದಲ್ಲೂ ಅವರು ನಿಂಬೆ ಹಣ್ಣಿನ ಮೊರೆ ಹೋಗ್ತಾರೆ. ಸದ್ಯ ಈಗ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ರೇವಣ್ಣ ನಿಂಬೆಹಣ್ಣು ವಿತರಿಸಿದ್ದಾರೆ. ವೇದಿಕೆ ಮೇಲೆ ಬುಟ್ಟಿಯಲ್ಲಿದ್ದ ನಿಂಬೆಹಣ್ಣುಗಳನ್ನ ಅಭಿಮಾನಿಗಳಿಗೆ ನೀಡಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ತಿರುಮಲ ದೇವಾಲಯದ ಉದ್ಘಾಟನಾ ಕಾರ್ಯಕ್ರಮ ನಡೀತು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಹಾಗೂ ಶಿವಲಿಂಗೇಗೌಡ ಭಾಗಿಯಾಗಿದ್ದರು. ಜೊತೆಗೆ ವೇದಿಕೆ ಮೇಲೆ ಕುಳಿತಿದ್ದರು. ಈ ವೇಳೆ ಶಾಸಕ ಶಿವಲಿಂಗೇಗೌಡ ವೇದಿಕೆ ಮೇಲಿದ್ದ ನಿಂಬೆಹಣ್ಣು ನೋಡುತ್ತಲೆ ಕೈಗೆತ್ತಿಕೊಂಡು ಎಲ್ಲರಿಗೂ ಕೊಡುವಂತೆ ತಮಾಷೆ ಮಾಡಿದ್ರು. ಆಗ ರೇವಣ್ಣ ತಾವೇ ನಿಂಬೆಹಣ್ಣು ಎತ್ತಿಕೊಂಡು ತಮ್ಮ ಕಾರ್ಯಕರ್ತರ ಕಡೆಗೆ ಉರುಳಿಸಿದ್ರು. ಇದನ್ನು ನೋಡಿ ನಿಂಬೆಹಣ್ಣುಗಳನ್ನು ಜನರಿಗೆ ಕೊಡುವಂತೆ ಶಾಸಕ ಶಿವಲಿಂಗೇಗೌಡ ಮನವಿ ಮಾಡಿದ್ರು. ಬಳಿಕ ಶಾಸಕರ ಮಾತಿನಂತೆ ರೇವಣ್ಣ ಒಂದೊಂದೇ ನಿಂಬೆಹಣ್ಣನ್ನು ತಮ್ಮ ಬೆಂಬಲಿಗರಿಗೆ ನೀಡಿದ್ರು. ರೇವಣ್ಣ ನಿಂಬೆಹಣ್ಣು ನೀಡುತ್ತಿರುವುದನ್ನು ನೋಡಿ ಶಾಸಕ ಶಿವಲಿಂಗೇಗೌಡ ನಗೆಬೀರಿದ್ರು.

HD Kumaraswamy

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಶಾಸಕ ಶಿವಲಿಂಗೇಗೌಡ

HD Revanna

ಶಾಸಕ ಶಿವಲಿಂಗೇಗೌಡ, ಹೆಚ್ಡಿ ರೇವಣ್ಣ

ಇದನ್ನೂ ಓದಿ:  ಬರಿಗಾಲಿನಲ್ಲಿ ವಾಕ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ; ಇದರಿಂದಾಗುವ ಆರೋಗ್ಯಯುತ ಬದಲಾವಣೆ ಇಲ್ಲಿದೆ ನೋಡಿ

Follow Us
TV9 Web
TV9 Web

TV9 Kannada

Read More
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್