ಮೈಸೂರು: ಕಾರಿಗೆ ಟ್ರಕ್ ಡಿಕ್ಕಿ; ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ

| Updated By: preethi shettigar

Updated on: Feb 02, 2022 | 2:18 PM

ಮೌಳೇಶ್ವರ ರೆಡ್ಡಿ ಹಾಗೂ ತೇಜಸ್ ಮೃತ ದುರ್ದೈವಿಗಳು. ಈ ಅಪಘಾತದಲ್ಲಿ ಮತ್ತಿಬ್ಬರಿಗೆ ಗಂಭೀರ ಗಾಯವಾಗಿದ್ದು, ಗಾಯಾಳಗಳನ್ನು ಮೈಸೂರಿನ ಡಿ.ಆರ್.ಎಂ. ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ.

ಮೈಸೂರು: ಕಾರಿಗೆ ಟ್ರಕ್ ಡಿಕ್ಕಿ; ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ
ಕಾರು, ಟ್ರಕ್ ನಡುವೆ ಅಪಘಾತ
Follow us on

ಮೈಸೂರು: ಕಾರು ಮತ್ತು ಟ್ರಕ್​ ನಡುವೆ ಡಿಕ್ಕಿಯಾಗಿದ್ದು, ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು(engineering students) ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್ ನಗರ ರಸ್ತೆಯ ರಾಮೇನಹಳ್ಳಿ ಬಳಿ ನಡೆದಿದೆ. ಮೌಳೇಶ್ವರ ರೆಡ್ಡಿ ಹಾಗೂ ತೇಜಸ್ ಮೃತ ದುರ್ದೈವಿಗಳು. ಈ ಅಪಘಾತದಲ್ಲಿ ಮತ್ತಿಬ್ಬರಿಗೆ ಗಂಭೀರ ಗಾಯವಾಗಿದ್ದು(Injury), ಗಾಯಾಳಗಳನ್ನು ಮೈಸೂರಿನ ಡಿ.ಆರ್.ಎಂ. ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ.

ಮೌಳೇಶ್ವರ ರೆಡ್ಡಿ, ಸುಹಾನ್, ತೇಜಸ್ ಹಾಗೂ ಶುಭಂಕರ ಕಾರಿನಲ್ಲಿ ಮೈಸೂರಿನ ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದ ಮೌಳೇಶ್ವರ ರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ತೇಜಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಏಕಾಏಕಿ ಹೊತ್ತಿ ಉರಿದ ಬಿಎಂಟಿಸಿ ಬಸ್

ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್​ನಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಕಿಡಿ ಕಾಣುತ್ತಿದ್ದಂತೆ ಸಮಯ ಪ್ರಜ್ಞೆ ಮೇರೆದ ಬಸ್ ಚಾಲಕ ಎಲ್ಲಾ ಪ್ರಯಾಣಿಕರನ್ನ ಬಸ್​ನಿಂದ ಕೆಳಗೆ ಇಳಿಸಿದ್ದಾರೆ. ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಯಾಣಿಕರನ್ನು ಮತ್ತೊಂದು ಬಸ್​ನಲ್ಲಿ ಪ್ರಯಾಣ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೆಜೆಸ್ಟಿಕ್​ನಿಂದ ಬನಶಂಕರಿ ನಿಲ್ದಾಣಕ್ಕೆ ತೆರಳುತ್ತಿದ್ದ ಬಸ್​ನಿಂದ ಟಾಕೀಸ್​ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾರದ ಹಿಂದೆಯೂ ಕೂಡ ಬಿಎಂಟಿಸಿ ಬಸ್ ನಡುರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆಯೊಂದು ಸಂಭವಿಸಿತ್ತು.

ಹಾವೇರಿ: ಜಾತಿ-ಧರ್ಮ ಬಿಟ್ಟು ಕುಟುಂಬಸ್ಥರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದವಳ ದುರಂತ ಅಂತ್ಯ

ಪ್ರೀತಿ ಜಾತಿಯನ್ನು ಮೀರಿದ್ದು. ಪ್ರೀತಿ ಹುಟ್ಟುವಾಗ ಜಾತಿ, ಧರ್ಮ ನೋಡಿ ಹುಟ್ಟಲ್ಲ. ಆದ್ರೆ ಸಮಾಜದಲ್ಲಿ ಮದುವೆ ಆಗಲು, ಪ್ರೀತಿ ಮಾಡಲು ಜಾತಿ ಅತಿ ಮುಖ್ಯ. ಇಲ್ಲೊಂದು ಜೋಡಿಗೆ ಜಾತಿ ಬೇರೆ ಬೇರೆಯಾದ್ರೂ ಅವರ ಪ್ರೀತಿಗೆ ಜಾತಿ ಅಡ್ಡಿಯಾಗಿರಲಿಲ್ಲ. ಮನೆಯವರ ವಿರೋಧದ ನಡುವೆಯೂ ಆಕೆ ಆತನನ್ನ ಮದುವೆಯಾಗಿದ್ಲು. ಹೀಗೆ ಹತ್ತಾರು ಕನಸು ಕಂಡು ಲವ್‌ ಮ್ಯಾರೇಜ್‌ ಆಗಿದ್ದ ಯುವತಿ ನಿನ್ನೆ ಶವವಾಗಿದ್ದಾಳೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಪೊಲೀಸ್‌ ಠಾಣೆ ಮುಂದೆ ನಿನ್ನೆ ಬಿಗ್‌ ಹೈಡ್ರಾಮಾವೇ ನಡೆದಿತ್ತು. ರೊಚ್ಚಿಗೆದ್ದ ಜನ ಠಾಣೆಗೆ ನುಗ್ಗಿದ್ರು. ಆಕ್ರೋಶಗೊಂಡಿದ್ರು. ಅಷ್ಟಕ್ಕೂ ಇವರ ಆಕ್ರೋಶಕ್ಕೆ ಕಾರಣವೇ ಯುವತಿಯ ಸಾವು.

ಬ್ಯಾಡಗಿ ತಾಲೂಕಿನ ಕಳಗೊಂಡ ಗ್ರಾಮದ ತನುಜಾ ಅನ್ನೋ ಯುವತಿ ಅದೇ ಗ್ರಾಮದ ಬಸವರಾಜ ಬಸಾಪುರ ಅನ್ನೋ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ಲು. ಹೀಗೆ ಮದುವೆಯಾದವಳು ನಿನ್ನೆ ಕಾಗಿನೆಲೆ ಕೆರೆಯಲ್ಲಿ ಶವವಾಗಿದ್ಲು. ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ತನುಜಾಳನ್ನ ಗಂಡನ ಮನೆಯವರೆ ಕೊಂದು ಕೆರೆಗೆ ಎಸೆದಿದ್ದಾರೆ ಅಂತಾ ತನುಜಾ ಪೋಷಕರು ಆರೋಪಿಸುತ್ತಿದ್ದಾರೆ .

ಇನ್ನು ಜನವರಿ 28 ರಂದೇ ತನುಜಾ ಕಾಣೆಯಾಗಿದ್ಲು. ಈ ಸಂಬಂಧ ಕಾಗಿನೆಲೆ ಠಾಣೆಯಲ್ಲಿ ಮಿಸ್ಸಿಂಗ್‌ ಕೇಸ್‌ ಕೂಡಾ ದಾಖಲಾಗಿತ್ತು. ಈ ವಿಷ್ಯ ತನುಜಾ ಪೋಷಕರಿಗೆ ಗೊತ್ತಾಗಿತ್ತು. ಹೀಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ರು. ಹೀಗಿರುವಾಗ್ಲೇ ನಿನ್ನೆ ಕಾಗಿನೆಲೆ ಕೆರೆಯಲ್ಲಿ ಮಹಿಳೆಯ ಶವ ತೇಲಾಡ್ತಿರೋದು ಕಂಡಿದೆ. ಹತ್ತಿರಕ್ಕೆ ಹೋಗಿ ನೋಡಿದ್ರೆ ಅದು ತನುಜಾಳದ್ದೇ ಅನ್ನೋದು ಗೊತ್ತಾಗಿದೆ. ಜನವರಿ 28 ರಂದೇ ತನುಜಾಳನ್ನ ಕಾಗಿನೆಲೆ ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದ ಪತಿ ಬಸವರಾಜ್‌ ಅಲ್ಲಿ ಮಾನಸಿಕ ಹಿಂಸೆ ನೀಡಿದ್ದಾನೆ. ಬಳಿಕ ಕೊಂದು ಶವವನ್ನ ಕೆರೆಗೆ ಎಸೆದಿದ್ದಾನೆ ಅನ್ನೋದು ಆಕೆಯ ಪೋಷಕರ ಆರೋಪ. ಅಷ್ಟಕ್ಕೂ ಸತ್ತವಳ ಕಾಲಲ್ಲಿ ಇದ್ದ ಚಪ್ಪಲಿಗಳು ಕೂಡಾ ಹಾಗೇ ಇದ್ವು. ಆಕೆ ಒಂದಿಷ್ಟು ಒದ್ದಾಡದೇ ಪ್ರಾಣ ಬಿಟ್ಟಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ಆಗಿದ್ರೂ ಶವದ ಬಳಿ ಆಕೆಯ ಪತಿಯಾಗ್ಲಿ, ಪತಿ ಮನೆಯವರಾಗ್ಲಿ ಬಂದಿರಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಮೃತಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು.

ಇದನ್ನೂ ಓದಿ:

ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಗಾಯಗೊಂಡು ಸಾವು, ಕುಟುಂಬದಲ್ಲಿ ಮಡುಗಟ್ಟಿದ ದುಃಖ

ಮೈಸೂರಲ್ಲಿ ಅಪಘಾತಕ್ಕೀಡಾದ ಬೈಕ್ ಸವಾರನಿಗೆ ಮಾಜಿ ಶಾಸಕ ಎಮ್ ಕೆ ಸೋಮಶೇಖರ್ ನೆರವಾದರು!

Published On - 1:41 pm, Wed, 2 February 22