ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಗಾಯಗೊಂಡು ಸಾವು, ಕುಟುಂಬದಲ್ಲಿ ಮಡುಗಟ್ಟಿದ ದುಃಖ
8 ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಬಸವರಾಜ್, ಸದ್ಯ ಬಿಹಾರ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಟುಂಬದ ಜೊತೆ ದಿನ ಕಳೆಯೋಣ ಎಂದು ರಜೆಯ ಮೇಲೆ ಊರಿಗೆ ಬಂದು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.
ವಿಜಯಪುರ: ರಜೆಯ ಮೇಲೆ ಬಂದಿದ್ದ ಯೋಧ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಬಸವರಾಜ್ ಡೂಂಗರಗಾವಿ ಮೃತಪಟ್ಟ ಯೋಧ. ಕುಟಂಬಸ್ಥರೊಂದಿಗೆ, ಗೆಳೆಯರೊಂದಿಗೆ ಆರಾಮಾಗಿ ಕಾಲ ಕಳೆಯೋಣ ಎಂದು ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಇಂದು ಕುಟುಂಬಸ್ಥರ ಮನದಲ್ಲಿ ನೆನೆಪಾಗಿ ಉಳಿದಿದ್ದಾರೆ. ಯೋಧ ಬಸವರಾಜ್ ರಜೆ ಮೇಲೆ ಊರಿಗೆ ಬಂದಿದ್ದ ವೇಳೆ ಆಲಮಟ್ಟಿ ಬಳಿ ಎರಡು ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 8 ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಬಸವರಾಜ್, ಸದ್ಯ ಬಿಹಾರ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಟುಂಬದ ಜೊತೆ ದಿನ ಕಳೆಯೋಣ ಎಂದು ರಜೆಯ ಮೇಲೆ ಊರಿಗೆ ಬಂದು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಅಂದರೆ ಕಳೆದ ಜನವರಿ 31 ರಂದು ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದರು. ಅಪಘಾತದಲ್ಲಿ ಯೋಧ ಬಸವರಾಜ ತೀವ್ರವಾಗಿ ಗಾಯಗೊಂಡು ಬಾಗಲಕೋಟೆ ನಗರದ ಧನುಷ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾದದೇ ಯೋಧ ಬಸವರಾಜ್ ಇಂದು ಅಸುನೀಗಿದ್ಧಾರೆ. ವಿಜುಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಬಸವರಾಜ ಡೊಂಗರಗಾಗಿ ಕಳೆದ ಎಂಟು ದಿನಗಳ ಹಿಂದೆ ಸೇನೆಯಿಂದ ರಜೆಯನ್ನು ಪಡೆದುಕೊಂಡು ಸ್ವಗ್ರಾಮ ತಂಗಡಗಿಗೆ ಬಂದಿದ್ದರು. ಎರಡನೇ ಮಗು ಹುಟ್ಟಿ ಐದು ತಿಂಗಳಾದ ಬಳಿಕ ಮಗುವಿನ ಮುಖ ನೋಡಲು ಇದೇ ಮೊದಲ ಬಾರಿಗೆ ಆಗಮಿಸಿದ್ದರು. 26-11-2017 ರಲ್ಲಿ ಸ್ವಗ್ರಾಮದ ಜ್ಯೋತಿ ಎಂಬುವವರ ಜೊತೆಗೆ ಬಸವರಾಜ್ ವಿವಾಹವಾಗಿತ್ತು. ಬಸವರಾಜ ಹಾಗೂ ಜ್ಯೋತಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 3 ವರ್ಷದ ಭರತ ಹಾಗೂ ಐದು ತಿಂಗಳ ಗಂಡು ಮಗುವಿದೆ. ಎರಡನೇ ಮಗುವಿನ ಮುಖ ನೋಡಲು ಬಸವರಾಜ ಆಗಮಿಸಿದ್ದರು. ಆದರೆ ಬಸವರಾಜ ಬದುಕಿನಲ್ಲಿ ವಿಧಿ ಲಿಖಿತವೇ ಬೇರೆಯಾಗಿದೆ. ಎರಡನೇ ಮಗನನ್ನು ಕಂಡು ಖುಷಿ ಖುಷಿಯಾಗಿದ್ದ ಕುಟುಂದಲ್ಲೀಗಾ ಕಣ್ಣೀರೇ ಮಾತಾಗಿದೆ.
ಕೃಷಿ ಕುಟುಂಬದ ಹಿನ್ನಲೆಯ ಯೋಧ : ತಂಗಡಗಿ ಗ್ರಾಮದ ಸಿದ್ದಪ್ಪ ಹಾಗೂ ದುಂಡಮ್ಮ ದಂಪತಿಯ ಹಿರಿಯ ಪುತ್ರ ಬಸವರಾಜ್ ಕಳೆದ 22-07-2012 ರಲ್ಲಿ ದೇಶ ಸೇವೆಗೆ ಸೇರಿದ್ದರು. ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನಲ್ಲಿ ಕಾನ್ಸಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬಸವರಾಜನಿಗೆ ಇಬ್ಬರು ಸಹೋದರಿಯರಿದ್ದು, ಇಬ್ಬರಿಗೂ ವಿವಾಹವಾಗಿದೆ. ಕಿರಿಯ ಸಹೋದರ ಪದವಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. 22-11-1992 ರಲ್ಲಿ ಜನಿಸಿದ್ದ ಬಸವರಾಜನಿಗೆ ಮೊದಲಿನಿಂದಲೂ ದೇಶ ಸೇರುವ ಆಸೆಯಿತ್ತಂತೆ. ತಂದೆವ ತಾಯಿ ಸ್ವಂತ ಜಮೀನಿನಲ್ಲಿ ಕೃಷಿಯನ್ನು ಮಾಡಿಕೊಂಡಿದ್ದರು. ಕೃಷಿ ಮಾಡಿಕೊಂಡಿದ್ದರೂ ಬಡತನ ಕಾಡುತ್ತಿತ್ತು. ಬಸವರಾಜ ಸೇನೆಗೆ ಸೇರಿದ ಬಳಿಕ ಇವರ ಕುಟುಂಬ ಆರ್ಥಿಕವಾಗಿ ಸಬಲವಾಗಿತ್ತು. ಆದರೆ ಮನೆಗೆ ಆಸರೆಯಾಗಿದ್ದ ಯೋದ ಬಸವರಾಜ ಇದ್ದಕ್ಕಿಂತೆ ಎಲ್ಲರನ್ನೂ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ.
ಮೃತ ಯೋಧನ ಪತ್ನಿ ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಪುಟ್ಟ ಪುಟ್ಟ ಇಬ್ಬರು ಕಂದಮ್ಮಗಳನ್ನು ಬಿಟ್ಟು ಹೋದ ಯೋಧನ ಸಾವಿಗೆ ಇಡೀ ತಂಗಡಗಿ ಗ್ರಾಮದ ಜನರು ಮರಗಿದ್ದಾರೆ. ಇಂದು ಸಾಯಂಕಾಲ ಮೃತ ಯೋಧ ಬಸವರಾಜ ಅಂತ್ಯಕ್ರಿಯೆ ಸ್ವಗ್ರಾಮ ತಂಗಡಗಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂದ ಸದಸ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Ashok Rao: ಕನ್ನಡದ ಹಿರಿಯ ನಟ ಅಶೋಕ್ ರಾವ್ ನಿಧನ; ಕ್ಯಾನ್ಸರ್ನಿಂದ ಕೊನೆಯುಸಿರೆಳೆದ ಕಲಾವಿದ
ಚಿತ್ತಾಪುರ: ಶಂಕಿತ ಚಿಕನ್ ಪಾಕ್ಸ್ ಗೆ ಇಬ್ಬರು ಮಕ್ಕಳು ಸಾವು, ಕುಟುಂಬದವರಿಗೂ ಚಿಕನ್ ಪಾಕ್ಸ್!
Published On - 12:08 pm, Wed, 2 February 22