ಧಾರವಾಡ: ಕಾರ್​ಗೆ ಲಾರಿ ಡಿಕ್ಕಿ; ಸ್ವಗ್ರಾಮಕ್ಕೆ ತೆರಳುತ್ತಿದ್ದ ಯೋಧ ಸ್ಥಳದಲ್ಲೇ ಸಾವು

ಧಾರವಾಡ: ಕಾರ್​ಗೆ ಲಾರಿ ಡಿಕ್ಕಿ; ಸ್ವಗ್ರಾಮಕ್ಕೆ ತೆರಳುತ್ತಿದ್ದ ಯೋಧ ಸ್ಥಳದಲ್ಲೇ ಸಾವು
ಧಾರವಾಡ: ಕಾರ್​ಗೆ ಲಾರಿ ಡಿಕ್ಕಿ

ಸುಬೇದಾರ್​ ಆಗಿದ್ದ ವಸಂತರಾಜ್ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಬೆಳಗಾವಿ ಜಿಲ್ಲೆ ಗೋಕಾಕ್​ ತಾಲೂಕಿನ ಬೂದಿಹಾಳ ನಿವಾಸಿ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

TV9kannada Web Team

| Edited By: ganapathi bhat

Jan 29, 2022 | 9:56 PM

ಧಾರವಾಡ: ನಗರದ ಹೊರವಲಯದ ಯರಿಕೊಪ್ಪ ಬೈಪಾಸ್​ನಲ್ಲಿ ಲಾರಿ ಡಿಕ್ಕಿ ಆಗಿ ಕಾರಿನಲ್ಲಿ ತೆರಳುತ್ತಿದ್ದ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ನಾಯಕ್ ಸುಬೇದಾರ್​ ವಸಂತರಾಜ್ (45) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೈದರಾಬಾದ್ ಆರ್ಮಿ ಸೆಂಟರ್​ನಲ್ಲಿ ಸುಬೇದಾರ್​ ಆಗಿದ್ದ ವಸಂತರಾಜ್ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಬೆಳಗಾವಿ ಜಿಲ್ಲೆ ಗೋಕಾಕ್​ ತಾಲೂಕಿನ ಬೂದಿಹಾಳ ನಿವಾಸಿ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ತುಮಕೂರು: ಕೆರೆಯಲ್ಲಿ ಮುಳುಗಿ 3 ಮಕ್ಕಳು ಸಾವು

ದೇವರಾಯನರೊಪ್ಪದ ಕೆರೆಯಲ್ಲಿ ಮುಳುಗಿ 3 ಮಕ್ಕಳು ಸಾವನ್ನಪ್ಪಿದ ದುರ್ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದೇವರಾಯನರೊಪ್ಪ ಎಂಬಲ್ಲಿ ನಡೆದಿದೆ. ಷರೀಫ್ (10), ಬಾನುಬಿ (13), ಚಾಂದ್ (4) ಮೃತಪಟ್ಟಿದ್ದಾರೆ. ದನ ಮೇಯಿಸಲು ತೆರಳಿದ್ದಾಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು: ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಭುವನೇಶ್ವರ್- ಬೆಂಗಳೂರು ಪ್ರಶಾಂತಿ ಎಕ್ಸ್​​ಪ್ರೆಸ್​​ನಲ್ಲಿ ಗಾಂಜಾ ಸಾಗಣೆ ಮಾಡಲಾಗುತ್ತಿತ್ತು. ಬೆಂಗಳೂರಿಗೆ ಬರ್ತಿದ್ದಂತೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 15.5 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಯಾದಗಿರಿ: ಶಾರ್ಟ್​ ಸರ್ಕ್ಯೂಟ್​ನಿಂದ 10 ಎಕರೆ ಕಬ್ಬು ಬೆಳೆ ಹಾನಿ

ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ 10 ಎಕರೆ ಕಬ್ಬು ಬೆಳೆ ಹಾನಿ ಆಗಿರುವ ದುರ್ಘಟನೆ ನಡೆದಿದೆ. ರಮೇಶ್​ ಎಂಬ ರೈತನಿಗೆ ಸೇರಿದ 10 ಎಕರೆ ಕಬ್ಬು ಬೆಳೆ ಬೆಂಕಿಗಾಹುತಿ ಆಗಿದೆ. ಕಾರ್ಮಿಕರ ಸಮಸ್ಯೆ ಎಂದು ಕಬ್ಬು ಕೊಂಡೊಯ್ಯಲು ಕಾರ್ಖಾನೆ ವಿಳಂಬ ಮಾಡಿದ್ದಕ್ಕೆ ಕಾರ್ಖಾನೆ ವಿರುದ್ಧ ರೈತನ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ತುಮಕೂರು: ದೇವರ ಉತ್ಸವ ನೋಡುತ್ತಿದ್ದವರ ಮೇಲೆ ನುಗ್ಗಿದ ಗೂಡ್ಸ್ ಆಟೋ; ಒಬ್ಬರ ಸಾವು, ನಾಲ್ವರ ಸ್ಥಿತಿ ಗಂಭೀರ

ಇದನ್ನೂ ಓದಿ: Crime News: ತ್ರಿಕೋನ ಪ್ರೇಮ ಪ್ರಕರಣದಲ್ಲಿ ಲಾಯ್ಡ್ ಡಿಸೋಜ ಸಾವು; ಘಟನೆಯ ವಿವರ ನೀಡಿದ ಪೊಲೀಸ್ ಆಯುಕ್ತ

Follow us on

Related Stories

Most Read Stories

Click on your DTH Provider to Add TV9 Kannada