ಚಿತ್ತಾಪುರ: ಶಂಕಿತ ಚಿಕನ್ ಪಾಕ್ಸ್ ಗೆ ಇಬ್ಬರು ಮಕ್ಕಳು ಸಾವು, ಕುಟುಂಬದವರಿಗೂ ಚಿಕನ್ ಪಾಕ್ಸ್!
chickenpox: ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಯು ಮಕ್ಕಳ ಸಾವಿಗೆ ಕಾರಣ ಪತ್ತೆ ಮಾಡಲು ಮುಂದಾಗಿದ್ದು, ಮೃತ ಮಕ್ಕಳ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ. ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ವೈರಾಲಜಿ ಬೆಂಗಳೂರಿಗೆ ರಕ್ತದ ಮಾದರಿ ರವಾನೆ ಮಾಡಲಾಗಿದೆ.
ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರ (chittapur) ತಾಲೂಕಿನ ಸ್ಟೇಷನ್ ನಾಲವಾರ್ ಗ್ರಾಮದಲ್ಲಿ ಶಂಕಿತ ಚಿಕನ್ ಪಾಕ್ಸ್ ಗೆ (chickenpox) ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. 8 ವರ್ಷದ ಇಮ್ರಾನ್ ಎಂಬ ಬಾಲಕ ಜನವರಿ 17 ರಂದು ಮನೆಯಲ್ಲಿ ಮೃತಪಟ್ಟಿದ್ದರೆ ರೆಹಮಾನ್( 15) ಜನವರಿ 30 ರಂದು ಸೊಲ್ಲಾಪುರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇನ್ನೂ ಆತಂಕದ ವಿಷಯವೆಂದರೆ ಮೃತ ರೆಹಮಾನ್ ಮತ್ತು ಇಮ್ರಾನ್ ಅವರುಗಳ ತಾಯಿ, ಸಹೋದರ ಮತ್ತು ಸಹೋದರಿಗೂ ಚಿಕನ್ ಪಾಕ್ಸ್ ಬಂದಿದ್ದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಫೀಜಾ (13), ಅರ್ಮಾನ್ (6) ಮತ್ತು ಹಫೀಜಾ ಬೇಗಂ (33) ಜಿಮ್ಸ್ ಆಸ್ಪತ್ರೆಗೆ ದಾಖಲಾದವರು.
ಜಿಲ್ಲಾ ಆರೋಗ್ಯ ಇಲಾಖೆಯು ಮಕ್ಕಳ ಸಾವಿಗೆ ಕಾರಣ ಪತ್ತೆ ಮಾಡಲು ಮುಂದಾಗಿದ್ದು, ಮೃತ ಮಕ್ಕಳ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ. ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ವೈರಾಲಜಿ ಬೆಂಗಳೂರಿಗೆ ರಕ್ತದ ಮಾದರಿ ರವಾನೆ ಮಾಡಲಾಗಿದೆ. ಸಾವಿಗೆ ಚಿಕಿನ್ ಪಾಕ್ಸ್ ಕಾರಣವಾ? ಅಥವಾ ದಡಾರದಿಂದ ಆಗಿದೆಯಾ? ಅನ್ನೋದನ್ನು ಪತ್ತೆ ಮಾಡಲು ಪರೀಕ್ಷೆಗಳು ನಡೆದಿವೆ. ಸ್ಟೇಷನ್ ನಾಲವಾರ್ ದಲ್ಲಿ ಮತ್ತಿಬ್ಬರು ಮಕ್ಕಳಲ್ಲಿ ಕೂಡಾ ಚಿಕನ್ ಪಾಕ್ಸ್ ಲಕ್ಷಣಗಳು ಗೋಚರವಾಗಿದೆ.
ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಗಾಯಗೊಂಡು ಸಾವು: ವಿಜಯಪುರ: ರಜೆಯ ಮೇಲೆ ಬಂದಿದ್ದ ಯೋಧ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಬಸವರಾಜ್ ಡೂಂಗರಗಾವಿ ಮೃತಪಟ್ಟ ಯೋಧ. ಕುಟಂಬಸ್ಥರೊಂದಿಗೆ, ಗೆಳೆಯರೊಂದಿಗೆ ಆರಾಮಾಗಿ ಕಾಲ ಕಳೆಯೋಣ ಎಂದು ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಇಂದು ಕುಟುಂಬಸ್ಥರ ಮನದಲ್ಲಿ ನೆನೆಪಾಗಿ ಉಳಿದಿದ್ದಾರೆ. ಯೋಧ ಬಸವರಾಜ್ ರಜೆ ಮೇಲೆ ಊರಿಗೆ ಬಂದಿದ್ದ ವೇಳೆ ಆಲಮಟ್ಟಿ ಬಳಿ ಎರಡು ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
8 ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಬಸವರಾಜ್, ಸದ್ಯ ಬಿಹಾರ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಟುಂಬದ ಜೊತೆ ದಿನ ಕಳೆಯೋಣ ಎಂದು ರಜೆಯ ಮೇಲೆ ಊರಿಗೆ ಬಂದು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Also Read: Ramanujacharya Sahasrabdi: ಮುಚ್ಚಿಂತಲ್ದಲ್ಲಿ ಘನವಾಗಿ ಆರಂಭವಾದ ರಾಮಾನುಜಾಚಾರ್ಯರ ಸಹಸ್ರಾಬ್ದಿ ಕಾರ್ಯಕ್ರಮ
Also Read: Statue of Equality: ಶ್ರೀರಾಮಾನುಜಾಚಾರ್ಯರ ಪ್ರತಿಮೆ ಅನಾವರಣಕ್ಕೆ ಬರಲು ಒಪ್ಪಿಗೆ ನೀಡಿದ ಮೋದಿ
Published On - 12:00 pm, Wed, 2 February 22