Statue of Equality: ಶ್ರೀರಾಮಾನುಜಾಚಾರ್ಯರ ಪ್ರತಿಮೆ ಅನಾವರಣಕ್ಕೆ ಬರಲು ಒಪ್ಪಿಗೆ ನೀಡಿದ ಮೋದಿ

ಶ್ರೀರಾಮಾನುಜಾಚಾರ್ಯ ಸಹಸ್ರಾಬ್ಧಿ ಸಮಿತಿ ವತಿಯಿಂದ ಶ್ರೀ ಚಿನ್ನ ಜೀಯರ್ ಸ್ವಾಮೀಜಿ ಮೋದಿ ಅವರಿಗೆ ಆಮಂತ್ರಣ ನೀಡಿದ್ದಾರೆ. ಮೈ ಹೋಮ್ ಗ್ರೂಪ್ ಚೇರ್ಮನ್ ಡಾ.ಜೂಪಲ್ಲಿ ರಾಮೇಶ್ವರ್ ರಾವ್ ಅವರು ಮೋದಿ ಅವರಿಗೆ ಶ್ರೀರಾಮಾನುಜಾಚಾರ್ಯರ ಪ್ರತಿಮೆ ನಿರ್ಮಿಸಿರುವ ದಿವ್ಯ ಸಾಕೇತಂ ಆಶ್ರಮದ ವಿಶೇಷತೆಗಳನ್ನು ವಿವರಿಸಿದ್ರು.

Statue of Equality: ಶ್ರೀರಾಮಾನುಜಾಚಾರ್ಯರ ಪ್ರತಿಮೆ ಅನಾವರಣಕ್ಕೆ ಬರಲು ಒಪ್ಪಿಗೆ ನೀಡಿದ ಮೋದಿ
ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಾನತೆಯ ಮೂರ್ತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮೀಜಿ
Follow us
TV9 Web
| Updated By: ಆಯೇಷಾ ಬಾನು

Updated on: Sep 19, 2021 | 8:40 AM

ದೆಹಲಿ: ವಿಶ್ವದ ಧರ್ಮಶಾಸ್ತ್ರ ಚೇತನ ಶ್ರೀರಾಮಾನುಜಾಚಾರ್ಯರ ಐತಿಹಾಸಿಕ ಮಹೋತ್ಸವಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಬರಲು ಒಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. 2022ರ ಫೆಬ್ರವರಿ 2ರಿಂದ 14ರವರೆಗೆ ನಡೆಯಲಿರುವ ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಹಿನ್ನೆಲೆ, ಫೆಬ್ರವರಿ 5ರಂದು ಹೈದರಾಬಾದ್ ಬಳಿ ಮುಚ್ಚಿಂತಾಲ್ ನಲ್ಲಿರುವ ದಿವ್ಯ ಸಾಕೇತಂ ಆಶ್ರಮಕ್ಕೆ ಮೋದಿ ಭೇಟಿ ನೀಡಲಿದ್ದಾರೆ.

ಶ್ರೀರಾಮಾನುಜಾಚಾರ್ಯ ಸಹಸ್ರಾಬ್ಧಿ ಸಮಿತಿ ವತಿಯಿಂದ ಶ್ರೀ ಚಿನ್ನ ಜೀಯರ್ ಸ್ವಾಮೀಜಿ ಮೋದಿ ಅವರಿಗೆ ಆಮಂತ್ರಣ ನೀಡಿದ್ದಾರೆ. ಮೈ ಹೋಮ್ ಗ್ರೂಪ್ ಚೇರ್ಮನ್ ಡಾ.ಜೂಪಲ್ಲಿ ರಾಮೇಶ್ವರ್ ರಾವ್ ಅವರು ಮೋದಿ ಅವರಿಗೆ ಶ್ರೀರಾಮಾನುಜಾಚಾರ್ಯರ ಪ್ರತಿಮೆ ನಿರ್ಮಿಸಿರುವ ದಿವ್ಯ ಸಾಕೇತಂ ಆಶ್ರಮದ ವಿಶೇಷತೆಗಳನ್ನು ವಿವರಿಸಿದ್ರು. ಧಾರ್ಮಿಕ ಹಾಗೂ ಸಾಮಾಜಿಕ ಸಾಮರಸ್ಯದ ಸಂತನ ಐತಿಹಾಸಿಕ ಪ್ರತಿಮೆ ಅನಾವರಣಕ್ಕೆ 2022ರ ಫೆಬ್ರವರಿ 5 ಶನಿವಾರ ವಸಂತ ಪಂಚಮಿ ದಿನದಂದು ಬರೋದಾಗಿ ಮೋದಿ ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದಾರೆ. ದೇಶದ ಜನಪ್ರಿಯ ಪ್ರಧಾನಿ ಮೋದಿ ಫೆಬ್ರವರಿ 5ರಂದು ಧರ್ಮಗುರು, ದಾರ್ಶನಿಕ ಶ್ರೀರಾಮಾನುಜಾಚಾರ್ಯರ ಸಮಾನತೆ ಪ್ರತಿಮೆ ಲೋಕಾರ್ಪಣೆಗೆ ಆಗಮಿಸುತ್ತಿದ್ದು, ಪ್ರತಿಮೆ ಇರುವ ದಿವ್ಯ ಸಾಕೇತಂ ಆಶ್ರಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ.

ಇದನ್ನೂ ಓದಿ:  Statue of Equality: ಹೈದರಾಬಾದ್‌ನಲ್ಲಿ ತಲೆ ಎತ್ತಲಿದೆ ವಿಶ್ವದ ಎರಡನೇ ಅತೀ ಎತ್ತರದ ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ‌

ಸಮಾನತೆಯ ಮೂರ್ತಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ ಚಿನ್ನ ಜೀಯರ್ ಸ್ವಾಮೀಜಿ