ಸೋಮವಾರ ದೆಹಲಿಗೆ ಹಾರಲಿರುವ ಸಿಎಂ ಬೊಮ್ಮಾಯಿ; ಬಜೆಟ್ ಕುರಿತು ವರಿಷ್ಠರ ಜೊತೆ ಚರ್ಚೆ
ಬೊಮ್ಮಾಯಿ ನಾಳೆ ದೆಹಲಿಗೆ ಹೋಗುವ ಸಾಧ್ಯತೆಯಿತ್ತು. ಆದರೆ ಸೋಮವಾರ ದೆಹಲಿಗೆ ಹೋಗುತ್ತೇನೆ ಅಂತ ಸಿಎಂ ಬೊಮ್ಮಾಯಿ ತಿಳಿಸಿದರು. ನಮ್ಮ ಸಂಸದರ ಮನವಿ ಮೇರೆಗೆ ಸೋಮವಾರ ಹೋಗುವೆ ಎಂದರು.
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೋಮವಾರ (ಫೆ.07) ದೆಹಲಿಗೆ (Delhi) ತೆರಳುತ್ತಾರೆ. ನಾಳೆ ಪ್ರಧಾನಿ ನರೇಂದ್ರ ಮೋದಿ (PM Modi) ಭೇಟಿಗೆ ಸಮಯ ಕೇಳಿದ್ದ ಸಿಎಂ ಬೊಮ್ಮಾಯಿ, ಸಮಯ ನೀಡಿದರೆ ನಾಳೆ ದೆಹಲಿಗೆ ತೆರಳುತ್ತಾರೆ. ದೆಹಲಿಗೆ ಹೋದರೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆ ನಡೆಸಬಹುದು. ಅಂತಾರಾಜ್ಯ ಜಲ ವಿವಾದಗಳ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಯಿದೆ. ಅಲ್ಲದೆ ದೆಹಲಿ ಭೇಟಿಯ ವೇಳೆ ಸಂಸದರ ಜೊತೆ ಮಾತುಕತೆ ನಡೆಸಿ, ರಾಜ್ಯ ಬಜೆಟ್ಗೂ ಮುನ್ನ ವರಿಷ್ಠರ ಜತೆ ಚರ್ಚಿಸಬಹುದು.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸೋಮವಾರ ಬೆಳಗ್ಗೆ ದೆಹಲಿಗೆ ಹೋಗುತ್ತೇನೆ. ಫೆಬ್ರವರಿ 7ರಿಂದ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತೇನೆ. ವಿವಿಧ ಇಲಾಖೆಗಳ ಜೊತೆ ಸಭೆ ನಡೆಸಲಾಗುವುದು. ಬಜೆಟ್ಗೂ ಮುನ್ನ ಸಂಸದರ ಜೊತೆ ಸಭೆ ನಡೆಸುತ್ತೇನೆ. ಜಲ ವಿವಾದ ಸಂಬಂಧ ವಕೀಲರ ಜತೆ ಚರ್ಚಿಸುತ್ತೇನೆ. ಸಚಿವ ಸಂಪುಟದ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲ್ಲ. ಪಕ್ಷದ ನಾಯಕರು, ಸಚಿವರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ನೀಡಿದಾಗ ದೆಹಲಿಗೆ ಹೋಗಿ ಚರ್ಚೆ ಮಾಡುವೆ ಅಂತ ತಿಳಿಸಿದರು.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಬಜೆಟ್ ಬಗ್ಗೆ ಗೊಂದಲವೇನಿಲ್ಲ. ರಾಜ್ಯದಲ್ಲೂ ಬಜೆಟ್ ಬಗ್ಗೆ ಬೇರೆ ಬೇರೆ ಇಲಾಖೆ ಜೊತೆಗೆ ಮಾತನಾಡುತ್ತಿದ್ದೇನೆ. ಎಲ್ಲರ ಅಭಿಪ್ರಾಯ ತೆಗೆದುಕೊಂಡು ಬಜೆಟ್ ಮಾಡುತ್ತೇವೆ. ಸಂಸದರ ಜೊತೆ ಬಜೆಟ್ ಪೂರ್ವ ಸಭೆ ಮಾಡಿ ಚರ್ಚೆ ಮಾಡಲಾಗುವುದು. ಅಂತರ್ ರಾಜ್ಯ ಜಲವಿವಾದಗಳ ಬಗ್ಗೆ ವಕೀಲರ ಜೊತೆ ಚರ್ಚೆಸುತ್ತೇನೆ ಎಂದು ಹೇಳಿದರು.
ಸೋಮವಾರ ದೆಹಲಿಗೆ: ಬೊಮ್ಮಾಯಿ ನಾಳೆ ದೆಹಲಿಗೆ ಹೋಗುವ ಸಾಧ್ಯತೆಯಿತ್ತು. ಆದರೆ ಸೋಮವಾರ ದೆಹಲಿಗೆ ಹೋಗುತ್ತೇನೆ ಅಂತ ಸಿಎಂ ಬೊಮ್ಮಾಯಿ ತಿಳಿಸಿದರು. ನಮ್ಮ ಸಂಸದರ ಮನವಿ ಮೇರೆಗೆ ಸೋಮವಾರ ಹೋಗುವೆ. ನಾಳೆ ತೆರಳಲು ನಿರ್ಧರಿಸಿದ್ದೆ ಆದರೆ ಸೋಮವಾರ ಹೋಗುವೆ ಅಂತ ಹೇಳಿದ್ದಾರೆ.
ಇದನ್ನೂ ಓದಿ
ಮೈಸೂರು: 45ನೇ ಬ್ಯಾಚ್ ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳ ನಿರ್ಗಮನ ಪಥಸಂಚಲನ; ಯಾರೆಲ್ಲಾ ಆಯ್ಕೆಯಾಗಿದ್ದಾರೆ ಗೊತ್ತಾ?
Published On - 11:30 am, Wed, 2 February 22