Mysore News: ಸಾಲಭಾದೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ

ಜಿಲ್ಲೆಯಲ್ಲಿ ಸಾಲಭಾದೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುರೇಶ್(58), ರಾಜಶೆಟ್ಟಿ (78) ಮೃತ ರ್ದುದೈವಿಗಳು. ಬೆಳೆಯನ್ನ ನಂಬಿಕೊಂಡು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು, ಬೆಳೆ ಕೈ ಕೊಟ್ಟ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Mysore News: ಸಾಲಭಾದೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ
ಮೃತ ರೈತರು

Updated on: May 28, 2023 | 7:03 AM

ಮೈಸೂರು: ದೇಶದ ಬೆನ್ನೇಲುಬು ರೈತ(Former), ಆದರೆ ಆತನ ಗೋಳು ಕೇಳುವವರಾರು, ಒಮ್ಮೆ ಬೆಳೆ ಚೆನ್ನಾಗಿ ಬಂದರೆ, ಸರಿಯಾದ ಬೆಲೆ ಸಿಗಲ್ಲ. ಬೆಲೆ ಸರಿಯಾಗಿ ಸಿಕ್ಕರೆ, ಬೆಳೆ ಚೆನ್ನಾಗಿ ಬರಲ್ಲ. ಎಷ್ಟೋ ಸಾಲಸೋಲ ಮಾಡಿ ಬೆಳೆದ ಬೆಳೆ, ಫಲ ಕೊಡದೇ ಇದ್ದಾಗ ರೈತನ ಪಾಡು ಹೇಳತೀರದು. ಈ ಕಾರಣಕ್ಕೆ ಎಷ್ಟೋ ರೈತರು ನೇಣಿಗೆ ಶರಣಾಗಿದ್ದಾರೆ. ಅದರಂತೆ ಇದೀಗ ಜಿಲ್ಲೆಯಲ್ಲಿ ಸಾಲಭಾದೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ (suicide) ಮಾಡಿಕೊಂಡ ಘಟನೆ ನಡೆದಿದೆ. ಹುಣಸೂರು(Hunsur) ತಾಲ್ಲೂಕು ಶ್ಯಾನಭೋಗನಹಳ್ಳಿಯ ಸುರೇಶ್(58) ಎಂಬಾತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ಎಕರೆ ಜಮೀನು ಹೊಂದಿದ್ದ ರೈತ ಸುರೇಶ್​, ಬ್ಯಾಂಕ್ ಸೊಸೈಟಿ ಸೇರಿ 7 ಲಕ್ಷ ಸಾಲ ರೂಪಾಯಿ ಸಾಲ ಮಾಡಿದ್ದ. ಇನ್ನೇನು ಬೆಳೆ ಬಂದ ಕೂಡಲೇ ಎಲ್ಲವನ್ನ ಹಿಂದಿರುಗಿಸುವ ಉತ್ಸಾಹದಲ್ಲಿದ್ದ ರೈತನಿಗೆ ಬೆಳೆ ಕೈ ಕೊಟ್ಟ ಹಿನ್ನೆಲೆ‌ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮದ ರಾಜಶೆಟ್ಟಿ (78) ಎಂಬಾತ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 5 ಎಕರೆ ಜಮೀನು ಹೊಂದಿದ್ದ ರಾಜಶೆಟ್ಟಿ, ತಂಬಾಕು ರಾಗಿ ಬೆಳೆ ಬೆಳೆದಿದ್ದರು. ಬ್ಯಾಂಕ್, ಸೊಸೈಟಿ, ಮಹಿಳಾ ಸಂಘ, ಕೈ ಸಾಲ ಸೇರಿ ಸುಮಾರು 8 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಬಡ್ಡಿ ಹೆಚ್ಚಾಗಿತ್ತು. ಇದರಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Mangaluru News: ಬಲೂನ್ ಕಟ್ಟಿಕೊಂಡು ಕುಮಾರಧಾರ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ

ಮೈಸೂರು: ಇನ್ನು ಇದೇ ಮೇ.24 ರಂದು  ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಉಡುವೆಪುರ ಗ್ರಾಮದಲ್ಲಿ ನಡೆದಿತ್ತು. ಯಾಲಕ್ಕಿಗೌಡ (65) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. 3 ಎಕರೆ ಜಮೀನು ಹೊಂದಿದ್ದ ಯಾಲಕ್ಕಿ ಗೌಡ, ತಂಬಾಕು ಬ್ಯಾರನ್ ಹೊಂದಿದ್ದರು. ಹೊಗೆಸೊಪ್ಪು, ಶುಂಠಿ ಬೆಳೆ ಬೆಳೆದಿದ್ದ ರೈತ. ಕೃಷಿ ಚಟುವಟಿಕೆಗಾಗಿ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯ ಐಓಬಿ ಬ್ಯಾಂಕಿನಲ್ಲಿ 12ಲಕ್ಷ ಹಾಗೂ ಗ್ರಾಮದಲ್ಲಿ 6 ಲಕ್ಷ ಕೈ ಸಾಲ ಪಡೆದಿದ್ದರು. ಆದರೆ, ನಾಲ್ಕು ವರ್ಷಗಳಿಂದ ಬೆಳೆ ಕೈ ಕೊಟ್ಟು ನಷ್ಟ ಅನುಭವಿಸಿದ ಕಾರಣ, ಸಾಲ ತೀರಿಸಲಾಗಿಲ್ಲ. ಇದರಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆ ನಡೆದು ಕೇವಲ 5 ದಿನಗಳಲ್ಲೇ ಮತ್ತೆ ಇಂತಹ ಘಟನೆಗಳು ನಡೆದಿದ್ದು ವಿಷಾಧನೀಯ

ಚಲಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ವೃದ್ಧೆ ಸಾವು

ಯಾದಗಿರಿ: ಹುಣಸಗಿ ತಾಲೂಕಿನ ಕಲ್ಲದೇನಹಳ್ಳಿ ಬಳಿ ಚಲಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ನಂದಮ್ಮ ಹೊರಟ್ಟಿ(60) ಎಂಬುವವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಕಲಬುರಗಿ ಆಸ್ಪತ್ರೆಗೆ ಹೋಗಿದ್ದ ನಂದಮ್ಮ, ಸ್ವಂತ ಗ್ರಾಮ ವಜ್ಜಲಕ್ಕೆ ಬಸ್‌ನಲ್ಲಿ ತೆರಳುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಸಮೀಪದ ಕಲ್ಲದೇವನಹಳ್ಳಿ ಆರೋಗ್ಯ ಕೇಂದ್ರಕ್ಕೆ ದಾಖಲಿಸುವಾಗಲೇ ವೃದ್ಧೆ ಕೊನೆಯುಸಿರೆಳದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ