ಮೈಸೂರಿನ ಬಸ್ ಶೆಲ್ಟರ್ ಮೇಲಿದ್ದ ಗುಂಬಜ್ ತೆರವು; ಅವಶೇಷಗಳು ಮೋರಿಯಲ್ಲಿ ಪತ್ತೆ

| Updated By: ಆಯೇಷಾ ಬಾನು

Updated on: Nov 27, 2022 | 10:01 AM

ಮೈಸೂರಿನ ಜೆಎಸ್​ಎಸ್​ ಕಾಲೇಜು ಬಳಿ ಇರುವ ಬಸ್ ಶೆಲ್ಟರ್​​​​​ ವಿವಾದದ ಕೇಂದ್ರವಾಗಬಾರದು ಎಂಬ ಕಾರಣಕ್ಕೆ ಗುಂಬಜ್ ತೆರವು ಮಾಡಲಾಗಿದೆ.

ಮೈಸೂರಿನ ಬಸ್ ಶೆಲ್ಟರ್ ಮೇಲಿದ್ದ ಗುಂಬಜ್ ತೆರವು; ಅವಶೇಷಗಳು ಮೋರಿಯಲ್ಲಿ ಪತ್ತೆ
ಮೈಸೂರಿನ ಬಸ್ ಶೆಲ್ಟರ್ ಮೇಲಿದ್ದ ಗುಂಬಜ್ ತೆರವು
Follow us on

ಮೈಸೂರು: ಕೆಲವು ದಿನಗಳ ಹಿಂದೆ ವಿವಾದ ಸೃಷ್ಟಿಸಿದ್ದ ಮೈಸೂರಿನ ಬಸ್ ಶೆಲ್ಟರ್ ಮೇಲಿದ್ದ ಗುಂಬಜನ್ನು ತೆರವುಗೊಳಿಸಲಾಗಿದೆ. ಬಸ್​​ ಶೆಲ್ಟರ್​​ ಮೇಲಿದ್ದ ಮೂರು ಗುಂಬಜ್​ಗಳ ಪೈಕಿ 2 ಗುಂಬಜ್ ತೆರವು ಮಾಡಲಾಗಿದೆ ಎಂದು ಶಾಸಕ ರಾಮದಾಸ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಮೈಸೂರಿನ ಜೆಎಸ್​ಎಸ್​ ಕಾಲೇಜು ಬಳಿ ಇರುವ ಬಸ್ ಶೆಲ್ಟರ್​​​​​ ವಿವಾದದ ಕೇಂದ್ರವಾಗಬಾರದು ಎಂಬ ಕಾರಣಕ್ಕೆ ಗುಂಬಜ್ ತೆರವು ಮಾಡಲಾಗಿದೆ. ಇದೇ ಮಾದರಿಯಲ್ಲಿ 12 ಬಸ್ ಶೆಲ್ಟರ್​​ ನಿರ್ಮಾಣ ಮಾಡಲಾಗುತ್ತೆ. ಅರಮನೆ ಮಾದರಿಯಲ್ಲಿ ಬಸ್​​ ಶೆಲ್ಟರ್​ ನಿರ್ಮಿಸುವ ಉದ್ದೇಶ ಇತ್ತು. ಇದಕ್ಕೆ ಅನವಶ್ಯಕವಾಗಿ ಧರ್ಮದ ಲೇಪನ ಮಾಡಿದ್ದು ನೋವಾಗಿದೆ. ಹಿರಿಯರ ಸಲಹೆ ಮೇರೆಗೆ, ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾರೂ ಅನ್ಯತಾ ಭಾವಿಸಬಾರದು ಎಂದು ಮಾಧ್ಯಮ ಪ್ರಕಟಣೆ ಮೂಲಕ ಶಾಸಕ ರಾಮದಾಸ್ ಜನತೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಶಿಖರ ಮತ್ತ ಗುಂಬಜ್ ಗಳ ನಡುವೆ ವ್ಯತ್ಯಾಸವಿದೆ ಆದರೆ ಎರಡಕ್ಕೂ ಧಾರ್ಮಿಕ ವೈಶಿಷ್ಟ್ಯತೆಗಳಿವೆ: ಸೆಲ್ವಪಿಳ್ಳೆ ಅಯ್ಯಂಗಾರ್, ಇತಿಹಾಸಜ್ಞ

ಕಾಲಾವಕಾಶ ಕೋರಿ ಮಾತಿನಂತೆ ನಡೆದುಕೊಂಡ ಡಿಸಿಗೆ ಧನ್ಯವಾದ

ಇನ್ನು ಈ ಘಟನೆ ಸಂಬಂಧ ಗುಂಬಜ್​​ ತೆರವು ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ಮಸೀದಿ ಬಸ್ ಶೆಲ್ಟರ್ ಪೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಮಧ್ಯದಲ್ಲಿ ದೊಡ್ಡ ಗುಂಬಜ್​ ಅಕ್ಕಪಕ್ಕ 2 ಚಿಕ್ಕ ಗುಂಬಜ್ ಇದೆ. ಹೀಗೆ​ ಇದ್ದರೆ ಅದು ಮಸೀದಿನೆ, ಅದನ್ನು ತೆರವು ಮಾಡಿಸುವೆ ಎಂದಿದ್ದೆ. ಅದರಂತೆ ನಾನು ನಡೆದುಕೊಂಡಿದ್ದೇನೆ. ಕಾಲಾವಕಾಶ ಕೋರಿ ಮಾತಿನಂತೆ ನಡೆದುಕೊಂಡ ಡಿಸಿಗೆ ಧನ್ಯವಾದಗಳು. ಜನಾಭಿಪ್ರಾಯಕ್ಕೆ ತಲೆಬಾಗಿದ ಶಾಸಕ ರಾಮದಾಸ್​ಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ ತೆರವುಗೊಳಿಸಿದ್ದ ಡೂಮ್ ಅವಶೇಷಗಳು ಮೋರಿಯಲ್ಲಿ ಪತ್ತೆಯಾಗಿವೆ. ಕೆಲಸಗಾರರು ಬಸ್ ಶೆಲ್ಟರ್ ಪಕ್ಕದ ಮೋರಿಗೆ ಅವಶೇಷಗಳನ್ನು ಎಸೆದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:01 am, Sun, 27 November 22