ಶಿಖರ ಮತ್ತ ಗುಂಬಜ್ ಗಳ ನಡುವೆ ವ್ಯತ್ಯಾಸವಿದೆ ಆದರೆ ಎರಡಕ್ಕೂ ಧಾರ್ಮಿಕ ವೈಶಿಷ್ಟ್ಯತೆಗಳಿವೆ: ಸೆಲ್ವಪಿಳ್ಳೆ ಅಯ್ಯಂಗಾರ್, ಇತಿಹಾಸಜ್ಞ
ಗೋಪುರ ಆದರೆ ದೇವಾಲಯಗಳ ಮೇಲೆ ನಿರ್ಮಿಸೋದು ಶಿಖರ. ದೇವಾಲಯ ದೇವರ ದೇಹವಾದರೆ ಶಿಖರ ದೇವರ ತಲೆಭಾಗ ಮತ್ತು ಕಲಶ ಕೂದಲು ಅಂತ ಅಯ್ಯಂಗಾರ್ ಹೇಳುತ್ತಾರೆ.
ಮೈಸೂರಿನ ಜೆ ಎಸ್ ಎಸ್ ಕಾಲೇಜು ಬಳಿ ಗುಂಬಜ್ ಆಕೃತಿಯ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಇತಿಹಾಸಜ್ಞ (Historian) ಸೆಲ್ವಪಿಳ್ಳೆ ಅಯ್ಯಂಗಾರ್ (Selvapillai Aiyangar) ಅವರು ಗುಂಬಜ್ ಮತ್ತು ಗೋಪುರಗಳ ಇತಿಹಾಸ, ಧಾರ್ಮಿಕ ವೈಶಿಷ್ಟ್ಯತೆ ಬಗ್ಗೆ ವಿವರಣೆ ನೀಡಿದ್ದಾರೆ. ಗೋಪುರ (tower) ಅಂತ ಬಳಸುವ ಪದವೇ ತಪ್ಪು ಎಂದು ಹೇಳುವ ಅಯ್ಯಂಗಾರ್, ಅರಮನೆ ಮೇಲೆ ಕಟ್ಟುವಂಥದ್ದು ಗೋಪುರ ಆದರೆ ದೇವಾಲಯಗಳ ಮೇಲೆ ನಿರ್ಮಿಸೋದು ಶಿಖರ. ದೇವಾಲಯ ದೇವರ ದೇಹವಾದರೆ ಶಿಖರ ದೇವರ ತಲೆಭಾಗ ಮತ್ತು ಕಲಶ ಕೂದಲು ಅಂತ ಅವರು ಹೇಳುತ್ತಾರೆ. ಹಾಗೆಯೇ ಗುಂಬಜ್ ಗಳಿಗಿರುವ ಧಾರ್ಮಿಕ ಮಹತ್ವವನ್ನೂ ಅವರು ವಿವರಿಸಿದ್ದಾರೆ. ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರನೊಂದಿಗೆ ಅಯ್ಯಂಗಾರ್ ಮಾತಾಡಿದ್ದಾರೆ.
Latest Videos