Mysore News: ನಿಲ್ಲದ ಕಾಡಾನೆಗಳ ಪುಂಡಾಟ: ಗಜರಾಜನ ದಾಳಿಗೆ ಮೈಸೂರಿನಲ್ಲಿ ಮತ್ತೋರ್ವ ರೈತ ಬಲಿ

|

Updated on: Jun 02, 2023 | 12:23 PM

ಸರಗೂರು ತಾಲೂಕಿನ ಹಿರೇಹಳ್ಳಿಯ ರೈತ ಬೆಳೆ ಕಾಯಲು ಜಮೀನಿಗೆ ಹೋಗಿದ್ದಾಗ ಕಾಡಾನೆ ದಾಳಿ ನಡೆಸಿದ್ದು, ರೈತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Mysore News: ನಿಲ್ಲದ ಕಾಡಾನೆಗಳ ಪುಂಡಾಟ: ಗಜರಾಜನ ದಾಳಿಗೆ ಮೈಸೂರಿನಲ್ಲಿ ಮತ್ತೋರ್ವ ರೈತ ಬಲಿ
ಮೈಸೂರಿನಲ್ಲಿ ಕಾಡಾನೆ ದಾಳಿಗೆ ರೈತ ಸಾವು
Follow us on

ಮೈಸೂರು: ಸರಗೂರು (Sargur) ತಾಲೂಕಿನ ಹಿರೇಹಳ್ಳಿ ಬಳಿ ಕಾಡಾನೆ(Elephant) ದಾಳಿಗೆ ರೈತ ಸಾವನ್ನಪ್ಪಿದ ಘಟನೆ ನಡೆದಿದೆ. ರವಿ(42) ಮೃತ ವ್ಯಕ್ತಿ. ಇತ ಬೆಳೆ ಕಾಯಲು ಜಮೀನಿಗೆ ಹೋಗಿದ್ದ ವೇಳೆ ಏಕಾಎಕಿ ಕಾಡಾನೆ ದಾಳಿ ಮಾಡಿದ್ದು, ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತದೇಹವನ್ನ ಹೆಚ್ ಡಿ ಕೋಟೆ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಕುಟುಂಬಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರದ ಭರವಸೆ ನೀಡಿದ್ದು, ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೆಎಸ್​ಆರ್​ಟಿ‌ಸಿ ಬಸ್ ಮೇಲೆ‌ ಕಾಡಾನೆ ದಾಳಿ‌; ದಂತದಿಂದ ತಿವಿದ ಆನೆ

ಮಂಗಳೂರು: ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್​ಆರ್​ಟಿ‌ಸಿ ಬಸ್​ ಮೇಲೆ‌ ತಡರಾತ್ರಿ ಕಾಡಾನೆ ದಾಳಿ‌ ನಡೆಸಿದೆ. ಹೌದು ಸುಬ್ರಹ್ಮಣ್ಯ ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ಕಾಡಾನೆಯು ದಂತದಿಂದ ಬಸ್​ಗೆ ತಿವಿದಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಬಸ್ ಚಾಲಕ ಅನಿಲ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡು ತಪ್ಪಿಸಲು ಯತ್ನಿಸಿದ್ದಾನೆ. ಆದರೂ ದಾಳಿ ಮಾಡಿದ ಕಾಡಾನೆ ಬಸ್ಸಿನ ಎಡಭಾಗಕ್ಕೆ ದಂತದಿಂದ ತಿವಿದಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಕೊಡಗು: ಕಾಡಾನೆ ದಾಳಿಗೊಳಗಾಗಿದ್ದ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಸಾವು

ಕಾಡಾನೆ ದಾಳಿ: ಕುರಿ ಕಾಯುತ್ತಿದ್ದ ಮಹಿಳೆ ದುರ್ಮರಣ

ಆನೇಕಲ್: ಕಾಡಾನೆ ದಾಳಿಯಿಂದ ಕುರಿ ಕಾಯುತ್ತಿದ್ದ ಮಹಿಳೆ ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ‌ ಹಕ್ಕಿಪಿಕ್ಕಿ ಕಾಲೋನಿ ಬಳಿ ಮೇ.29 ರಂದು ನಡೆದಿತ್ತು. ಕಾಲಿನಿಂದ ತುಳಿದು ನಾಗಮ್ಮ(48) ಎನ್ನುವವರನ್ನು ಒಂಟಿ ಸಲಗ ಕೊಂದಿದೆ. ಪದೇ ಪದೆ ಸುತ್ತಮುತ್ತಲಿನ ಜನರ ಮೇಲೆ ಕಾಡಾನೆ ದಾಳಿ ಮಾಡುತ್ತಿದೆ. ಕಾಡಾನೆ ಸೆರೆ ಹಿಡಿಯುವಂತೆ ಅರಣ್ಯ ಸಿಬ್ಬಂದಿಗೆ ಹಲವು ಸಲ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ