ಮೈಸೂರು: ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು (Urban Development) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮೈಸೂರು ಜಿಲ್ಲೆಯ ಬಸವನಹಳ್ಳಿಯಲ್ಲಿ ಒತ್ತುವರಿ ಮಾಡಿದ್ದ ಜಾಗವನ್ನು ತೆರವು ಮಾಡಿ, ಜಮೀನಿನಲ್ಲಿ ಹಾಕಿದ್ದ ಶೆಡ್ ತೆಗೆದು ಮುಡಾ ನಾಮಫಲಕ ಅಳವಡಿಸಿದ್ದಾರೆ. ಸುಮಾರು 100 ಕೋಟಿ ರೂಪಾಯಿ ಮೌಲ್ಯದ 5.14 ಎಕರೆ ಒತ್ತುವರಿ ಜಾಗವನ್ನು ಇಂದು (ಡಿಸೆಂಬರ್ 19) ಅಧಿಕಾರಿಗಳು ತೆರವು ಮಾಡಿದ್ದಾರೆ.
ಬಸವನಹಳ್ಳಿ ಗ್ರಾಮದ ಮಹದೇವಯ್ಯ ಅವರಿಗೆ ಸೇರಿದ ಜಮೀನಿನಲ್ಲಿ ತೆರವು ಕಾರ್ಯ ಆರಂಭಗೊಂಡಿದೆ. ಮಹದೇವಯ್ಯ ಜಮೀನು ಸ್ವಾಧೀನ ಮಾಡಿಕೊಂಡಿದ್ದರು. ಅಲ್ಲದೇ ಭೂಮಿ ನೀಡದೆ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಮುಡಾ ಪರ ಮೈಸೂರು ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಶೆಡ್ ತೆರವುಗೊಳಿಸಿ ಮುಡಾ ನಾಮಫಲಕ ಅಳವಡಿಸಲಾಗಿದೆ.
ಸರ್ವೇ ನಂ 118ರಲ್ಲಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಒತ್ತುವರಿ ಮಾಡಿದ್ದು, ಜಮೀನಿನಲ್ಲಿ ನಿರ್ಮಾಣ ಮಾಡಿದ್ದ ಎರಡು ಶೆಡ್ಗಳನ್ನು ತೆರವು ಮಾಡಲಾಗಿದೆ. ಪೊಲೀಸ್ ಬಿಗಿ ಬಂದೊಬಸ್ತ್‌ನಲ್ಲಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಈ ಹಿಂದೆಯೂ ಕೂಡ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಜತೆಗೆ ತೆರವು ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ತರಾಟೆಗೂ ಕೂಡ ತೆಗೆದುಕೊಳ್ಳಲಾಗಿದೆ. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ,
4 ಅಧಿಕಾರಿಗಳಿಗೆ ಕೊಪ್ಪಳ ಡಿಸಿ ನೋಟಿಸ್
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಂಪಿ ಪಕ್ಕದ ವಿರೂಪಾಪೂರ ಗಡ್ಡಿಯ ಅಕ್ರಮ ರೆಸಾರ್ಟ್ಗಳನ್ನು ಕೊಪ್ಪಳ ಜಿಲ್ಲಾಡಳಿತ ನೆಲಸಮ ಮಾಡಿತ್ತು. ಇದರ ಬೆನ್ನಲ್ಲೇ ರೆಸಾರ್ಟ್ ಮಾಲೀಕರು ಪಟ್ಟಾ ಭೂಮಿಯಲ್ಲಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವ ಆರೋಪ ಈಗ ಮತ್ತೆ ಕೇಳಿ ಬಂದಿದೆ. ಇದಕ್ಕೂ ಕೊಪ್ಪಳ ಜಿಲ್ಲಾಡಳಿತ ಬ್ರೇಕ್ ಹಾಕಲು ಮುಂದಾಗಿತ್ತು. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯ ಹಂಪಿ ಪ್ರದೇಶ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ರೆಸಾರ್ಟ್ಗಳನ್ನು ತೆರವು ಮಾಡಿ. ಇಲ್ಲದಿದ್ದರೆ ಅದಕ್ಕೆ ನೀವೇ ಹೊಣೆಗಾರರಾಗಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಸ್.ವಿಕಾಸ ಕಿಶೋರ ಅವರು ನೋಟಿಸ್ ನೀಡಿದ್ದರು.
ಹಂಪಿ ಪರಂಪರೆ ಪ್ರದೇಶ ವ್ಯಾಪ್ತಿಗೆ ಒಳಪಡುವ ಕೊಪ್ಪಳದ ಗಂಗಾವತಿ ತಾಲೂಕಿನ ವಿರೂಪಾಪೂರ ಗಡ್ಡಿಯಲ್ಲಿದ್ದ ಅಕ್ರಮ ರೆಸಾರ್ಟ್ಗಳು ಕಳೆದ 2 ವರ್ಷದ ಹಿಂದೆ ನೆಲಸಮ ಆಗಿದ್ದವು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಇಲ್ಲಿನ ರೆಸಾರ್ಟ್ಗಳನ್ನು ತೆರವು ಮಾಡಿತ್ತು. ವಿರೂಪಾಪೂರ ಗಡ್ಡಿಯಲ್ಲಿನ ರೆಸಾರ್ಟ್ ನೆಲಸಮ ಆದ ನಂತರ ಗಂಗಾವತಿ ತಾಲೂಕಿನ ಆನೇಗೊಂದಿ, ಹನುಮನಹಳ್ಳಿ, ಜಂಗ್ಲಿ, ಸಣಾಪೂರ, ರಂಗಾಪೂರ, ಗಡ್ಡಿ, ಪಂಪಾ ಸರೋವರ ಸುತ್ತಮುತ್ತ ಪಟ್ಟಾ ಭೂಮಿಯಲ್ಲಿ ಮತ್ತೆ ಅಕ್ರಮವಾಗಿ ರೆಸಾರ್ಟ್ಗಳು ತಲೆ ಎತ್ತುತ್ತಿವೆ. ಈ ಕಾರಣಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಎಸ್.ವಿಕಾಸ ಕಿಶೋರ್ ಅವರು ಹೊಸಪೇಟೆಯ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಕೊಪ್ಪಳ ಉಪ ವಿಭಾಗಾಧಿಕಾರಿ, ಗಂಗಾವತಿಯ ತಹಶೀಲ್ದಾರ್ ಮತ್ತು ತಾಲೂಕು ಪಂಚಾಯತ್ ಇಒಗೆ ನೋಟಿಸ್ ನೀಡಿದ್ದರು.
ಇದನ್ನೂ ಓದಿ:
ಅಕ್ರಮ ಕಟ್ಟಡ ತೆರವು ವಿಚಾರ: ಬಿಬಿಎಂಪಿ ಕಾರ್ಯವೈಖರಿಗೆ ಹೈಕೋರ್ಟ್ ಗರಂ
Published On - 8:30 am, Sun, 19 December 21