ಮೈಸೂರು: ಜಿಲ್ಲೆ ಕೆ.ಆರ್.ನಗರ ತಾಲೂಕಿನ ಚಂದಗಾಲ ಗ್ರಾಮದಲ್ಲಿ ವೃದ್ಧ ದಂಪತಿ(Couples) ಸಾವಿನಲ್ಲೂ ಒಂದಾಗಿದ್ದಾರೆ. ರಾಮೇಗೌಡ(75), ಗೌರಮ್ಮ(70) ಮೃತ ದಂಪತಿ. ಜಮೀನಿನಲ್ಲಿ ಕೆಲಸ ಮಾಡುವಾಗ ಅಸ್ವಸ್ಥಗೊಂಡು ರಾಮೇಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ(Death). ಪತಿ ಮನೆಗೆ ಬಾರದ ಹಿನ್ನೆಲೆ ಜಮೀನಿಗೆ ಹೋದ ಗೌರಮ್ಮ ಪತಿಯ ಸಾವು ಕಂಡು ಆಘಾತದಿಂದ ಕುಸಿದು ಬಿದ್ದಿದ್ದಾರೆ. ಈ ವೇಳೆ ಕೆಲವರ ಸಹಾಯದಿಂದ ಗೌರಮ್ಮಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಪತಿ ರಾಮೇಗೌಡ ಅಂತ್ಯಸಂಸ್ಕಾರದ ವೇಳೆ ಪತ್ನಿ ಗೌರಮ್ಮ ಮೃತಪಟ್ಟಿದ್ದಾರೆ. ಗ್ರಾಮಸ್ಥರು ಅಕ್ಕಪಕ್ಕದಲ್ಲೇ ವೃದ್ಧ ದಂಪತಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಸಾಲ ಕೊಡಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹೊಸಹೊಳಲು ಗ್ರಾಮದ ರೈತ ಲಿಂಗೇಗೌಡ(72) ಎಂಬುವವರು ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದಾರೆ. 4 ಎಕರೆ 13 ಗುಂಟೆ ಜಮೀನು ಹೊಂದಿದ್ದ ರೈತ ಲಿಂಗೇಗೌಡ, ₹2 ಲಕ್ಷ ಸಾಲಕ್ಕೆ ಕಾವೇರಿ ಗ್ರಾಮೀಣ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಪಡೆದ ಸಾಲ ತೀರಿಸಿಲ್ಲ ಎಂದು ಬ್ಯಾಂಕ್ ಸಾಲ ನಿರಾಕರಿಸಿತ್ತು. ಇದರಿಂದ ಮನನೊಂದು ಬ್ಯಾಂಕ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡ ರೈತ ಲಿಂಗೇಗೌಡನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದಾರೆ. ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕಾಡಾನೆಗಳ ಅಟ್ಟಹಾಸ, ಜನಸಾಮಾನ್ಯರ ಮೇಲೆ ಲಾಠಿಚಾರ್ಜ್: ನಾಲ್ಕು ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಘಟನೆಗಳು ಇಲ್ಲಿವೆ
ಮಹಾನ್ ವಂಚಕ ಪತಿ-ಪತ್ನಿ ಪೊಲೀಸರಿಗೆ ಲಾಕ್
ಏರ್ಪೋರ್ಟ್ನಲ್ಲಿ ಸೀಜ್ ಆದ ಚಿನ್ನಾಭರಣ ಕಡಿಮೆ ಬೆಲೆಗೆ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ ಮಾಡಿದ್ದ ದಾರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್ ಹಾಗೂ ಧನುಷ್ಯ ಅಲಿಯಾಸ್ ರಾಚೆಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ದಾರ್ಬಿನ್ ದಾಸ್ ಕಸ್ಟಮ್ಸ್ ಅಧಿಕಾರಿ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದ.
ಏರ್ಪೊರ್ಟ್ ನಲ್ಲಿ ಸೀಜ್ ಆದ ಚಿನ್ನಾಭರಣ ಕಡಿಮೆ ಬೆಲೆಗೆ ಕೊಡಿಸೊದಾಗಿ ಇಂದಿರಾನಗರ ನಿವಾಸಿಯೊಬ್ಬರಿಂದ 68 ಲಕ್ಷ ಹಣ ಪಡೆದು ವಂಚನೆ ಮಾಡಿದ್ದ. ಕೆಲವರಿಗೆ ಏರ್ಪೊರ್ಟ್ ನಲ್ಲಿ ಕೆಲಸ ಕೊಡಿಸೊದಾಗಿ ಸಾವಿರಾರು ರೂ. ಹಣ ಪಡೆದಿದ್ದ. ದೇವನಹಳ್ಳಿಯ ಶಿಕ್ಷಕಿಯಿಂದ 97,750 ರೂ ಹಣ ಪಡೆದು ವಂಚನೆ ಮಾಡಿದ್ದ. ಮತ್ತೊಂದಿಷ್ಟು ಜನರಿಗೆ ಗ್ಯಾಜೆಟ್, ಎಲೆಕ್ಟ್ರಿಕ್ ಉಪಕರಣಗಳನ್ನು ಕಡಿಮೆ ಬೆಲೆಗೆ ಕೊಡಿಸೊದಾಗಿ ಹಣ ಪಡೆದಿದ್ದ. ಹೀಗೆ ಸಾಲು ಸಾಲು ವಂಚನೆ ಮಾಡಿ ಊರು ಬಿಟ್ಟಿದ್ದ ವಂಚಕ ದಂಪತಿಯನ್ನು ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದಾರೆ.
ಮಂಗಳೂರಿನ ಮೇರಿಹಿಲ್ಸ್ ಏರ್ಪೊರ್ಟ್ ರಸ್ತೆಯ ಫ್ಲ್ಯಾಟ್ ಬಾಡಿಗೆ ಪಡೆದಿದ್ದ ದಂಪತಿ, ಬೆಂಗಳೂರಿನಲ್ಲಿ ಸರಣಿ ವಂಚನೆ ಮಾಡಿ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದರು. ನಂತರ ಮಂಗಳೂರಿನಲ್ಲಿ ಬೀಡು ಬಿಟ್ಟಿದ್ದರು. ಕೊಡಿಗೆಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ವಂಚಕ ದಂಪತಿಯಿಂದ 34.50 ಲಕ್ಷ ನಗದು, 106.9 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
Published On - 7:25 am, Thu, 24 November 22