ಮೈಸೂರು: ಡಿಕೆ ಶಿವಕುಮಾರ ಟ್ವಿಟ್ ವಾರ್ ವಿಚಾರವಾಗಿ ಮಧ್ಯೆದಲ್ಲಿ ರಮ್ಯ (Ramya) ಬರುವ ಅವಶ್ಯಕತೆ ಇರಲಿಲ್ಲ. ನಮ್ಮ ನಾಯಕರ ವಿರುದ್ದ ರಮ್ಯಾ ಹೇಳಿದಾಗ ಅದನ್ನು ಖಂಡಿಸಿದ್ದೇನೆ. ರಾಜ್ಯದಲ್ಲಿ ಯಾರೇ ನಮ್ಮ ನಾಯಕರ ವಿರುದ್ದ ಮಾತನಾಡಿದರೆ ನಾವು ಬಿಡುವುದಿಲ್ಲ ಎಂದು ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಳಪಾಡ್ ನಗರದಲ್ಲಿ ಟಿವಿ 9ಗೆ ಹೇಳಿಕೆ ನೀಡಿದ್ದಾರೆ. ರಮ್ಯಾ ಅವರು ಇಷ್ಟು ದಿನ ಎಲ್ಲಿದ್ದರೂ ಅನ್ನೋದು ನನಗೆ ಗೊತ್ತಿಲ್ಲ. ನಾನು ರಮ್ಯಾ ಅವರಷ್ಟು ದೊಡ್ಡವನಲ್ಲ, ನಾನು ಅವರನ್ನು ಎದುರು ಹಾಕಿಕೊಳ್ಳಲು. ವಾರ್ ಮಾಡಲು ಅಷ್ಟೋಂದು ದೊಡ್ಡವನಲ್ಲ. ನನ್ನ ಶಕ್ತಿಯನ್ನು ಕುಂದಿಸಲು ಯಾರ ಕೈಯಿಂದಲೂ ಸಾಧ್ಯವಿಲ್ಲ. ನನ್ನ ಓಟಕ್ಕೆ ಬ್ರೇಕ್ ಹಾಕಲು ಯಾರಿಗೂ ಸಾಧ್ಯವಿಲ್ಲ ರಾಹುಲ್ ಗಾಂಧಿ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ನನ್ನ ಬೆಂಬಲಕ್ಕೆ ಇದ್ದಾರೆ ಎಂದು ಹೇಳಿದರು.
ರಮ್ಯಾರಿಂದ ಬಾರ್ ಗಲಾಟೆ ವಿಚಾರ ಪ್ರಸ್ತಾಪ ವಿಚಾರ ಹಿನ್ನೆಲೆ ಇದು ನನ್ನ ತೇಜೋವಧೆ ಮಾಡುವ ಕೆಲಸ. ಬರೀ ಏಕೆ ಆ ಒಂದು ಘಟನೆ ಬಗ್ಗೆ ಮಾತನಾಡುತ್ತೀರಾ? ಕೋವಿಡ್ ಸಮಯದಲ್ಲಿ ನಾನು ಮಾಡಿದ ಕೆಲಸದ ಬಗ್ಗೆಯೂ ಮಾತನಾಡಿ. ಒಂದು ಘಟನೆ ಬಗ್ಗೆ ಮಾತ್ರ ಏಕೆ ಹೇಳುತ್ತೀರಾ. ನೂರಕ್ಕೆ ನೂರು ಪಾಲು ರಮ್ಯಾ ವಿರುದ್ದ ಕ್ರಮಕ್ಕೆ ಒತ್ತಾಯಿಸುತ್ತೇನೆ. ರಮ್ಯಾ ಏಕೆ ಮಧ್ಯೆ ಬಂದರೂ ನನಗೆ ಗೊತ್ತಾಗುತ್ತಿಲ್ಲ. ಅವರು ವೈಯಕ್ತಿಕವಾಗಿ ಮಾತನಾಡಿದ್ದರೆ ಕೇಳುತ್ತಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದಕ್ಕೆ ಕೇಳಿದ್ದೇನೆ. ಅವರು ಮಾಡಿರುವುದು ಸರಿಯಲ್ಲ. ಯೂಥ ಕಾಂಗ್ರೆಸ್ ಅಧ್ಯಕ್ಷನಾಗಿ ಅವರು ಪಕ್ಷದಲ್ಲಿ ಏನಾಗಿದ್ದಾರೆ ಅಂತಾ ನಿಜವಾಗಲೂ ನನಗೆ ಗೊತ್ತಿಲ್ಲ. ನಾಲ್ಕು ವರ್ಷದಿಂದ ಅವರು ಕೇವಲ ವೈಯಕ್ತಿಕ ಟ್ವೀಟ್ ಮಾಡುತ್ತಿದ್ದರು. ಇದೀಗ ಇದ್ದಕ್ಕಿದ್ದಂತೆ ನಮ್ಮ ನಾಯಕರ ವಿರುದ್ದ ಮಾತನಾಡಿದ್ದಾರೆ. ನನಗೆ ಇದು ಸರ್‌ಪ್ರೈಜ್ ಆಯ್ತು ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡಲು ಯೋಚನೆ ಮಾಡಬೇಕು. ನಾನು ರಮ್ಯಾ ವಿರೋಧಿ ಅಲ್ಲ. ನಾವು ರಮ್ಯಾ ಜೊತೆಗೆ ಇದ್ದೇವೆ. ದಯಮಾಡಿ ಪಕ್ಷದ ನಾಯಕರ ವಿರುದ್ದ ಮಾತನಾಡಬೇಡಿ ಎಂದು ಮೈಸೂರಿನಲ್ಲಿ ಟಿವಿ9ಗೆ ಮಹಮದ್ ನಲಪಾಡ್ ಹೇಳಿದ್ದಾರೆ.
ಎಂ.ಬಿ.ಪಾಟೀಲ್ ಪರ ನಟಿ ರಮ್ಯಾ ಟ್ವೀಟ್
ಸಚಿವ ಅಶ್ವತ್ಥ್ ನಾರಾಯಣ, ಎಂ.ಬಿ.ಪಾಟೀಲ್ ಭೇಟಿ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಅಚ್ಚರಿ ತಂದಿದೆ ಎಂದು ಟ್ವೀಟ್ ಮಾಡಿ ಎಂ.ಬಿ.ಪಾಟೀಲ್ ಪರ ನಟಿ, ಮಾಜಿ ಸಂಸದೆ ರಮ್ಯಾ ಬ್ಯಾಟಿಂಗ್ ಮಾಡಿದ್ದರು. ಪಕ್ಷವನ್ನು ಹೊರತುಪಡಿಸಿ ಅನೇಕರು ಭೇಟಿಯಾಗುತ್ತಿರುತ್ತಾರೆ. ಮದುವೆ, ಇತರೆ ಸಮಾರಂಭಗಳಿಗೆ ಭೇಟಿಯಾಗುತ್ತಿರುತ್ತಾರೆ. ಎಂ.ಬಿ.ಪಾಟೀಲ್ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ ಎಂದು ರಮ್ಯಾ ಟ್ವೀಟ್ ಮಾಡಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.