ಮೈಸೂರು: ಕನಕಪುರದ ಪ್ರೈಡ್ ಹೋಟೆಲ್‌ನಲ್ಲಿ ಊಟ ಮಾಡುವಾಗ ಕುಸಿದು ಬಿದ್ದು ಮೈಸೂರು ಮೂಲದ ಯುವಕ ಮೃತಪಟ್ಟಿದ್ದಾನೆ. ಮೈಸೂರಿನ ಸಿದ್ದಾರ್ಥ ನಗರದ ನಿವಾಸಿ ಪ್ರೀತಂ(35) ಮೃತ ದುರ್ದೈವಿ. ಬೆಂಗಳೂರಿನಿಂದ ವಾಪಸ್ ಮೈಸೂರಿಗೆ ಬರುವಾಗ ಸ್ನೇಹಿತರ ಜೊತೆ ಊಟಕ್ಕೆ ತೆರಳಿದ್ದಾಗ ಅವಘಡ ಸಂಭವಿಸಿದೆ. ಕನಕಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಪ್ರೀತಂ ಮೃತಪಟ್ಟಿದ್ದಾನೆ. ಪ್ರೀತಂ ಕುಸಿದು ಬಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜಮೀನಿನಲ್ಲಿ ಮೆಕ್ಕೆಜೋಳ ತೆಗೆಯುವಾಗ ಹಾವು ಕಚ್ಚಿ ರೈತ ದುರಗಪ್ಪ (70) ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮಾದನಹಳ್ಳಿಯಲ್ಲಿ ಮೆಕ್ಕೆಜೋಳದ ರಾಶಿ ತೆಗೆಯುವಾಗ ರೈತ ದುರಗಪ್ಪನಿಗೆ ಹಾವು ಕಚ್ಚಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಿಸದೇ ರೈತ ಮೃತಪಟ್ಟಿದ್ದಾರೆ. ಬಿಳಿಚೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಬೈಕ್ ವ್ಹೀಲಿಂಗ್: ಹಿಡಿಯಲು ಮುಂದಾದ ಡಿವೈಎಸ್ಪಿ ಜೊತೆ ಪುಂಡರ ವಾಗ್ವಾದ
ಮೈಸೂರು: ನಂಜನಗೂಡು ತಾಲೂಕಿನ ಕೆಂಪಿ ಸಿದ್ದನ ಹುಂಡಿಯಲ್ಲಿ ಸಾಲಭಾದೆ ತಾಳಲಾರದೆ ರೈತ ಸಣ್ಣಪ್ಪ(50) ನೇಣಿಗೆ ಶರಣಾಗಿದ್ದಾರೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆ ಕೈಕೊಟ್ಟಿದ್ದರಿಂದ ತಮ್ಮ ಹೊಲದಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಸಣ್ಣಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರದ ಹಳೇ ಬಸ್ ನಿಲ್ದಾಣದ ಬಳಿ ನೇಣು ಬಿಗಿದುಕೊಂಡು ಅಪರಿಚಿತ ವೃದ್ದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರಸಭೆ ವಾಣಿಜ್ಯ ಸಂಕೀರ್ಣದಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ರಾಮನಗರ ಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:18 am, Tue, 27 December 22