Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದಲ್ಲಿ ಬೈಕ್ ವ್ಹೀಲಿಂಗ್: ಹಿಡಿಯಲು ಮುಂದಾದ ಡಿವೈಎಸ್​ಪಿ ಜೊತೆ ಪುಂಡರ ವಾಗ್ವಾದ

ಜನಬಿಡ ಪ್ರದೇಶದಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದಲ್ಲದೆ ಹಿಡಿಯಲು ಬಂದ ಡಿವೈಎಸ್​ಪಿ ಜೊತೆ ಗುಂಪು ಕಟ್ಟಿಕೊಂಡು ವಾಗ್ವಾದಕ್ಕಿಳದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದಲ್ಲಿ ಬೈಕ್ ವ್ಹೀಲಿಂಗ್: ಹಿಡಿಯಲು ಮುಂದಾದ ಡಿವೈಎಸ್​ಪಿ ಜೊತೆ ಪುಂಡರ ವಾಗ್ವಾದ
ವ್ಹೀಲಿಂಗ್​ಗೆ ಬಳಸಿದ ಬೈಕ್ ವಶಕ್ಕೆ ಪಡೆದ ಪೊಲೀಸರು
Follow us
TV9 Web
| Updated By: Rakesh Nayak Manchi

Updated on:Dec 27, 2022 | 9:52 AM

ಚಿಕ್ಕಬಳ್ಳಾಫುರ: ಜನಬಿಡ ಪ್ರದೇಶದಲ್ಲಿ ಬೈಕ್ ವ್ಹೀಲಿಂಗ್ (Bike wheeling) ಮಾಡಿದ್ದಲ್ಲದೆ ಹಿಡಿಯಲು ಬಂದ ಡಿವೈಎಸ್​ಪಿ (Chikkaballarpu DySP) ಜೊತೆ ಗುಂಪು ಕಟ್ಟಿಕೊಂಡು ವಾಗ್ವಾದಕ್ಕಿಳದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಬೈಕ್ ವ್ಹೀಲಿಂಗ್ ಮಾಡುವುದನ್ನು ನೋಡಿದ ಡಿವೈಎಸ್​ಪಿ ವಿ.ಕೆ.ವಾಸುದೇವ್ ಅವರು ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಪುಂಡರ ತಂಡ ವಾಗ್ವಾದ ನಡೆಸುತ್ತಿದ್ದಾಗ ಪೊಲೀಸರ ಎಂಟ್ರಿಯಾಗಿದೆ. ಅದರಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಪೊಲೀಸರು ಓರ್ವ ಆರೋಪಿಯ ಸಹಿತ ಬೈಕ್​ ಅನ್ನು ವಶಕ್ಕೆ ಪಡೆದಿದ್ದಾರೆ.

ಮಪ್ತಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಚಿಕ್ಕಬಳ್ಳಾಪುರ ಡಿವೈಎಸ್​​ಪಿ ವಾಸುದೇವ್ ಅವರು ನಗರದ ವಾಪಸಂದ್ರದಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿರುವುದನ್ನು ನೋಡಿ ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಗುಂಪು ಕಟ್ಟಿಕೊಂಡ ಪುಂಡರು ವಾಸುದೇವ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಧಾವಿಸುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಬೈಕ್ ಬಿಟ್ಟು ಎಸ್ಕೇಪ್ ಆಗಿದ್ದಾರೆ. ನಂತರ ಬೈಕ್ ಹಾಗೂ ಓರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ರೂಲ್ಸ್ ಬ್ರೇಕ್; ನಿಯಮ ಗಾಳಿಗೆ ತೂರಿ ಮಾಸ್ಕ್ ಇಲ್ಲದೆ ಜನ ಸಂದಣಿ ಪ್ರದೇಶದಲ್ಲಿ ಓಡಾಟ

ಕೊಪ್ಪಳದಲ್ಲಿ ಬಡವರ ಅನ್ನಭಾಗ್ಯ ಅಕ್ಕಿಗೆ ಕಳ್ಳರ ಕನ್ನ

Crime

ಅಕ್ರಮವಾಗಿ ದಾಸ್ತಾನು ಮಾಡಿದ್ದ ಅನ್ನಭಾಗ್ಯ ಅಕ್ಕಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು

ಕೊಪ್ಪಳ: ಜಿಲ್ಲೆಯಲ್ಲಿ ಬಡವರ ಅನ್ನಭಾಗ್ಯ ಅಕ್ಕಿಗೆ ಕಳ್ಳರು ಕನ್ನ ಹಾಕುತ್ತಿದ್ದಾರೆ. ಕೊಪ್ಪಳದ ಅಕ್ರಮವಾಗಿ ಸಂಗ್ರಹಿಸಿದ ಅಕ್ಕಿ ಗೋದಾಮು ಮೇಲೆ ಅಧಿಕಾರಿಗಳು ದಾಳಿ ನಡೆಸಿ 70 ಕ್ಚಿಂಟಲ್​ಗೂ ಅಧಿಕ ಅಕ್ಕಿ ಚೀಲಗಳನ್ನು ಜಪ್ತಿ ಮಾಡಿದ್ದಾರೆ. ನಿನ್ನೆ ತಡರಾತ್ರಿ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಮಾಹಿತಿ ತಿಳಿದ ತಹಶೀಲ್ದಾರ್ ಅಂಬರೀಶ್ ಬಿರಾದಾರ್ ಹಾಗೂ ಫುಡ್ ಡಿಡಿ ಮಲ್ಲಿಕಾರ್ಜುನ ನಾಯಕ ನೇತೃತ್ವದ ತಂಡ ಲಾರಿಯನ್ನು ತಡೆದು ಜಪ್ತಿ ಮಾಡಿದ್ದಾರೆ. ವಿಚಾರಣೆ ನಂತರ ಕೊಪ್ಪಳದ ಹೊರ ವಲಯದ ಬ್ರಿಕ್ಸ್ ಕಾರ್ಖಾನೆ ಬಳಿ ಅಕ್ಕಿ ದಾಸ್ತಾನು ಮಾಡಿದ್ದ ಗೋದಾಮಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ 70 ಕ್ಚಿಂಟಲ್​ಗೂ ಅಧಿಕ ಅಕ್ಕಿ ಚೀಲಗಳು ಪತ್ತೆಯಾಗಿವೆ. ಜಿಲ್ಲಾಧಿಕಾರಿ ಸುಂದರೇಶ್ ಬಾಬು ಸೂಚನೆ ಮರೆಗೆ ಈ ದಾಳಿ ನಡೆದಿದೆ.

ಇದನ್ನೂ ಓದಿ: ತನ್ನ ಮನೆಯಲ್ಲೇ ಚಿನ್ನ ಕದ್ದು ಪ್ರೇಯಸಿ ಜೊತೆ ಗೋವಾ ಪ್ರವಾಸ; ಆರೋಪಿ ಅರೆಸ್ಟ್

ಚಿಕ್ಕಬಳ್ಳಾಫುರದಲ್ಲಿ ದೇವಸ್ಥಾನದ ಹುಂಡಿ ಹಣಕ್ಕೆ ಕನ್ನ

Crime

ದೇವಸ್ಥಾನದ ಹುಂಡಿ ಕಳ್ಳತನ; ಒದ್ದೆಯಾಗಿದ್ದ ನೋಟುಗಳನ್ನು ಎಸೆದ ಕಳ್ಳರು

ಚಿಕ್ಕಬಳ್ಳಾಫುರ: ಭಕ್ತರು ಹಾಕಿದ್ದ ಕಾಣಿಕೆ ಹುಂಡಿ ಮೇಲೆ ಕನ್ನ ಹಾಕಿದ (Templ hundi theft) ಖದೀಮರು ಹುಂಡಿಯೊಳಗಿದ್ದ ಹಣವನ್ನು ದೋಚಿ ಪರಾರಿಯಾದ ಘಟನೆ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರಮಾಪುರದ ಶ್ರೀವರಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದಿದೆ. ಮಳೆಯಿಂದಾಗಿ ಹುಂಡಿಯಲ್ಲಿ ಒದ್ದೆಯಾಗಿದ್ದ ನೋಟುಗಳನ್ನು ಎಲ್ಲಂದರಲ್ಲಿ ಬಿಸಾಡಿ ಉಳಿದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಇತ್ತಿಚಿಗೆ ಸುರಿದ ಮಳೆಯಿಂದ ದೇವಸ್ಥಾನ ಸೋರಿ ಹುಂಡಿಯಲ್ಲಿ ನೀರು ತುಂಬಿಕೊಂಡಿತ್ತು ಎಂದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 am, Tue, 27 December 22

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್