ತನ್ನ ಮನೆಯಲ್ಲೇ ಚಿನ್ನ ಕದ್ದು ಪ್ರೇಯಸಿ ಜೊತೆ ಗೋವಾ ಪ್ರವಾಸ; ಆರೋಪಿ ಅರೆಸ್ಟ್

ಪ್ರೇಯಸಿ ಜೊತೆಗಿನ ಜಾಲಿ ಟ್ರಿಪ್​​ಗೆ ತನ್ನ ಮನೆಯಲ್ಲೇ ಚಿನ್ನ ಕದ್ದ ಯುವಕ ಸಿಕ್ಕಿಬಿದ್ದಿದ್ದಾನೆ. ಆಡುಗೋಡಿ ಪೊಲೀಸರು ಚಿನ್ನ ಕದ್ದ ಇರ್ಫಾನ್​ನನ್ನು ಬಂಧಿಸಿದ್ದಾರೆ.

ತನ್ನ ಮನೆಯಲ್ಲೇ ಚಿನ್ನ ಕದ್ದು ಪ್ರೇಯಸಿ ಜೊತೆ ಗೋವಾ ಪ್ರವಾಸ; ಆರೋಪಿ ಅರೆಸ್ಟ್
ಬಂಧಿತ ಆರೋಪಿ ಇರ್ಫಾನ್ ಮತ್ತು ಪೊಲೀಸರು ವಶಕ್ಕೆ ಪಡೆದ ಚಿನ್ನಾಭರಣಗಳು
Follow us
TV9 Web
| Updated By: Rakesh Nayak Manchi

Updated on:Dec 27, 2022 | 8:55 AM

ಬೆಂಗಳೂರು: ಕೆಲವರ ಕೈಯಲ್ಲಿ ಬಿಡಿಗಾಸು ಇಲ್ಲದಿದ್ದರೂ ಶೋಕಿಗೇನು ಕಮ್ಮಿ ಇರುವುದಿಲ್ಲ. ನೋಡಿದವರ ಕಣ್ಣಿಗೆ ತಾನು ಶ್ರೀಮಂತನಂತೆ ಕಾಣಿಸಿಕೊಳ್ಳಲು ಮನೆಯವರಿಂದಲೇ ಹಣ ಕೇಳಿ ಸಮಾಜದ ಎದುರು ಬಿಟ್ಟಿ ಶೋಕಿ ನೀಡುವುದನ್ನು ನೋಡಿರುತ್ತೀರಿ. ಇನ್ನು ಕೆಲವರು ತಂದೆ ಜೇಬಿಗೆ ಕೈಹಾಕುತ್ತಾರೆ. ಇಂತಹದ್ದೇ ಪ್ರಕರಣವೊಂದು ಬೆಂಗಳೂರು ನಗರದಲ್ಲಿ ಬೆಳಕಿಗೆ ಬಂದಿದೆ. ಪ್ರೇಯಸಿ (Girl friend) ಜೊತೆ ಅಂತಾರಾಜ್ಯ ಪ್ರವಾಸ ಕೈಗೊಳ್ಳಲು ತನ್ನದೇ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿದ (Gold Theft) ಪ್ರಕರಣ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇರ್ಫಾನ್ ಎಂಬ ಯುವಕನಿಗೆ ಯುವತಿ ಮೇಲೆ ಲವ್ವೋ ಲವ್, ಆಕೆಯೊಂದಿಗೆ ಜಾಲಿ ರೈಡ್ ಹೋಗುವ ಕನಸು ಕೂಡ ಕಾಣುತ್ತಿದ್ದ. ಅದರಂತೆ ವರ್ಷಾಂತ್ಯದ ವೇಳೆ ಗೋವಾಕ್ಕೆ ಹೋಗುವ ಪ್ಲಾನ್ ಇಬ್ಬರೂ ಹಾಕಿಕೊಂಡಿದ್ದರು. ಗೋವಾಕ್ಕೆ ಹೋಗಿ ಜಾಲಿ ಮಾಡುವುದು ಸುಲಭವಲ್ಲ, ಅದಕ್ಕೆ ಹಣ ಅತ್ಯವಶ್ಯಕವಾಗಿದೆ. ಆದರೆ ಏನು ಮಾಡುವುದು? ಇರ್ಫಾನ್ ಜೇಬು ಖಾಲಿಯಾಗಿದೆ. ಇದಕ್ಕಾಗಿ ತನ್ನ ಮನೆಯವರು ಕಷ್ಟಪಟ್ಟು ಬೆವರು ಸುರಿಸಿ ಮಾಡಿಟ್ಟಿದ್ದ ಚಿನ್ನದ ಮೇಲೆಯೇ ಕನ್ನ ಹಾಕಿದ್ದಾನೆ.

ಇದನ್ನೂ ಓದಿ: ಗುಜರಾತ್: ಮಗಳ ಅಶ್ಲೀಲ ವಿಡಿಯೊ ಪ್ರಸಾರ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಬಿಎಸ್ಎಫ್ ಯೋಧನನ್ನು ಹೊಡೆದು ಕೊಂದರು

ಕೆಲಸಕ್ಕೆ ಹೋಗದೆ ಅಣ್ಣ, ಅತ್ತಿಗೆ ಹಾಗೂ ಅಮ್ಮನ ಜೊತೆಯಲ್ಲೇ ಇದ್ದ ಇರ್ಫಾನ್​ಗೆ ತನ್ನ ಪ್ರೇಯಸಿಯನ್ನು ಗೋವಾಗೆ ಕರೆದುಕೊಂಡು ಹೊಗಲು ಕೈಯಲ್ಲಿ ಹಣ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಎಲ್ಲರು ಮಲಗಿದ್ದ ವೇಳೆಯಲ್ಲಿ ಎದ್ದ ಇರ್ಫಾನ್, 103 ಗ್ರಾಂ ಚಿನ್ನ ಕದ್ದಿದ್ದಾನೆ. ಇದನ್ನು ಮಾರಿ ಬಂದ ಹಣದಲ್ಲಿ ಗರ್ಲ್​​ಫ್ರೆಂಡ್​ ಜೊತೆ ಗೋವಾ ಟ್ರಿಪ್ ಹೋಗಿದ್ದಾನೆ.

ಒಂದೆಡೆ ಇರ್ಫಾನ್​ನ ಗೋವಾ ಜಾಲಿ ಟ್ರಿಪ್, ಇನ್ನೊಂದೆಡೆ ಚಿನ್ನ ಕಳುವಾದ ಬಗ್ಗೆ ಚಿಂತೆಯಲ್ಲೇ ಇದ್ದ ಇರ್ಫಾನ್ ಮನೆಯವರು. 103 ಗ್ರಾಂ ಚಿನ್ನ ಕಳವಾಗಿದೆ ಎಂದು ಆರೋಪಿಸಿ ಇರ್ಫಾನ್​ನ ಸಹೋದರ ಆಡುಗೋಡಿ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಸಹೋದರನ ಗೋವಾ ಟ್ರಿಪ್ ಬಯಲಾಗಿದೆ.

ಕಳ್ಳತನವಾದ ತಲೆಬಿಸಿಯಲ್ಲಿ ಕುಟುಂಬ ಇದ್ದರೆ, ಮನೆ ಮಗ ಜಾಲಿ ಟ್ರಿಪ್​ನಲ್ಲಿದ್ದಾನೆ. ಇದು ಸಹಜವಾಗಿ ಶಂಕೆ ವ್ಯಕ್ತಪಡಿಸುವ ಅಂಶವಾಗಿದೆ. ಅದರಂತೆ ಅನುಮಾನಗೊಂಡು ಇರ್ಫಾನ್​ನನ್ನು ವಿಚಾರಣೆ ನಡೆಸಿದ ವೇಳೆ ಅಸಲಿ ಕೃತ್ಯ ಬಯಲಾಗಿದೆ. ತನ್ನ ಪ್ರೇಯಸಿ ಜೊತೆ ಪ್ರವಾಸಕ್ಕೆ ಹೋಗಲು ತಾನೇ ಚಿನ್ನ ಕದ್ದು ಮಾರಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಇರ್ಫಾನ್ ಜೈಲು ಪಾಲಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 am, Tue, 27 December 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ