ಗುಜರಾತ್: ಮಗಳ ಅಶ್ಲೀಲ ವಿಡಿಯೊ ಪ್ರಸಾರ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಬಿಎಸ್ಎಫ್ ಯೋಧನನ್ನು ಹೊಡೆದು ಕೊಂದರು
ಹುಡುಗ ಬಾಲಕಿಯ ಅಶ್ಲೀಲ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಇದನ್ನು ಪ್ರಶ್ನಿಸುವುದಕ್ಕಾಗಿ ಯೋಧ ಆ ಹುಡುಗನ ಮನೆಗೆ ಹೋಗಿದ್ದರು ಎಂದ ಬಿಎಸ್ಎಫ್ ಮೂಲಗಳು ಹೇಳಿವೆ.
ದೆಹಲಿ: ತನ್ನ ಮಗಳ ಅಶ್ಲೀಲ ವಿಡಿಯೊ ಪ್ರಸಾರ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಗಡಿ ಭದ್ರತಾ ಪಡೆ (Border Security Force)ಸಿಬ್ಬಂದಿಯನ್ನು ಗುಜರಾತ್‌ನ (Gujarat) ನಾಡಿಯಾಡ್‌ನಲ್ಲಿ ಹೊಡೆದು ಕೊಂದ (Lynched) ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶನಿವಾರ ಚಕ್ಲಾಸಿ ಗ್ರಾಮದಲ್ಲಿ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ 15 ವರ್ಷದ ಯುವಕನ ಮನೆಗೆ ಯೋಧ ಹೋಗಿದ್ದ ಎಂದು ಮೂಲಗಳು ತಿಳಿಸಿವೆ. ಅಲ್ಲಿ ಮನೆಯವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹದಿಹರೆಯದ ಹುಡುಗ ಮತ್ತು ಯೋಧನ ಮಗಳು ಒಂದೇ ಶಾಲೆಯಲ್ಲಿ ಓದುತ್ತಿದ್ದು, ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಹುಡುಗ ಬಾಲಕಿಯ ಅಶ್ಲೀಲ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಇದನ್ನು ಪ್ರಶ್ನಿಸುವುದಕ್ಕಾಗಿ ಯೋಧ ಆ ಹುಡುಗನ ಮನೆಗೆ ಹೋಗಿದ್ದರು ಎಂದ ಬಿಎಸ್ಎಫ್ ಮೂಲಗಳು ಹೇಳಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಪೊಲೀಸರು ದಾಖಲಿಸಿದ ಎಫ್ಐಆರ್ ಪ್ರಕಾರ, ಶನಿವಾರ ರಾತ್ರಿ ಹುಡುಗನ ಮನೆಗೆ ಯೋಧ, ಆತನ ಪತ್ನಿ, ಇಬ್ಬರು ಪುತ್ರರು, ಅಳಿಯ ಹೋಗಿದ್ದರು. ಅಲ್ಲಿಗೆ ಹೋದಾಗ ಹುಡುಗನ ಕುಟುಂಬ ಇವರನ್ನು ನಿಂದಿಸಿದೆ. ಇದನ್ನು ತಡೆದಾಗ ಈ ಕುಟುಂಬ ಯೋಧನ ಕುಟುಂಬದ ಮೇಲೆ ದಾಳಿ ಮಾಡಿದೆ ಎಂದು ಎಫ್ಐಆರ್ ನಲ್ಲಿ ಹೇಳಿದೆ.
ಬಿಎಸ್‌ಎಫ್ ಯೋಧ ಮೆಲ್ಜಿಭಾಯಿ ವಘೇಲಾ ಅವರು 15 ವರ್ಷದ ಬಾಲಕನ ಮನೆಗೆ ಹೋಗಿ, ತನ್ನ ಮಗಳ ಆಕ್ಷೇಪಾರ್ಹ ವಿಡಿಯೊ ಬಗ್ಗೆ ಪ್ರಶ್ನಿಸಿದ್ದಾರೆ ವಘೇಲಾ ತನ್ನ ಮಗ ನವದೀಪ್ ಮತ್ತು ಹೆಂಡತಿಯೊಂದಿಗೆ ಅಲ್ಲಿಗೆ ಹೋಗಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.ಬಿಎಸ್‌ಎಫ್ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪುತ್ರನ ತಲೆಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Tunisha Sharma: ಶ್ರದ್ಧಾ ವಾಕರ್ ಕೊಲೆ ಕೇಸ್ ಪ್ರಭಾವದಿಂದ ತುನಿಶಾ ಶರ್ಮಾ, ಶೀಜಾನ್ ಖಾನ್ ನಡುವೆ ನಡೆದಿತ್ತು ಬ್ರೇಕಪ್
ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 302, 307, 3223, 504, 143, 147 ಮತ್ತು 149 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Mon, 26 December 22