ಮೈಸೂರಿನಲ್ಲಿ ಅ.18ರಿಂದ 21ರ ವರೆಗೆ ಯುವ ದಸರಾ: 4 ದಿನ ಜನರಿಗೆ ಸಂಗೀತದ ರಸದೌತಣ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 10, 2023 | 4:43 PM

ಯುವ ದಸರಾ ಉದ್ಘಾಟನೆಯಲ್ಲಿ ನಟ ಶಿವರಾಜ್​ ಕುಮಾರ್​ ಭಾಗವಹಿಸಲಿದ್ದಾರೆ. ಜೊತೆಗೆ ಕನ್ನಡ ಹಿನ್ನೆಲೆ ಗಾಯಕ ಸಂಜೀತ್​​ ಹೆಗ್ಡೆ ಮತ್ತು ತಂಡದಿಂದ ಕಾರ್ಯಕ್ರಮ ಕೂಡ ನಡೆಯಲಿದ್ದು, ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಅಷ್ಟೇ ಅಲ್ಲ, ಮೊದಲ ದಿನವೇ ಸಾಧು ಕೋಕಿಲ ಹಾಗೂ ತಂಡದಿಂದ ಸಂಗೀತ ರಸದೌತಣ ಹಮ್ಮಿಕೊಳ್ಳಲಾಗಿದೆ.

ಮೈಸೂರಿನಲ್ಲಿ ಅ.18ರಿಂದ 21ರ ವರೆಗೆ ಯುವ ದಸರಾ: 4 ದಿನ ಜನರಿಗೆ ಸಂಗೀತದ ರಸದೌತಣ
ಎಸ್​ಪಿ ಸೀಮಾ ಲಾಟ್ಕರ್
Follow us on

ಮೈಸೂರು, ಅ.10: ಅಕ್ಟೋಬರ್​ 18ರಿಂದ 21ರ ವರೆಗೆ ಯುವ ದಸರಾ(Yuva Dasara)ಆಯೋಜನೆ ಮಾಡಲಾಗಿದ್ದು, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಸಂಭ್ರಮ ಮನೆಮಾಡಲಿದೆ ಎಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ಮೂಲಕ ಎಸ್​ಪಿ ಸೀಮಾ ಲಾಟ್ಕರ್(Seema Latkar)ಮಾಹಿತಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ‘ಒಟ್ಟು ನಾಲ್ಕುದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆ ಆಗಿದೆ. ಸಂಜೆ 6.30 ರಿಂದ ರಾತ್ರಿ10.30ರವರಿಗೆ ನಡೆಯಲಿರುವ ಯುವ ದಸರಾವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದರು.

ಮೊದಲ ದಿನ ಸಾಧು ಕೋಕಿಲ ಮತ್ತು ತಂಡದಿಂದ ಸಂಗೀತದ ರಸದೌತಣ

ಇನ್ನು ಯುವ ದಸರಾ ಉದ್ಘಾಟನೆಯಲ್ಲಿ ನಟ ಶಿವರಾಜ್​ ಕುಮಾರ್​ ಭಾಗವಹಿಸಲಿದ್ದಾರೆ. ಜೊತೆಗೆ ಕನ್ನಡ ಹಿನ್ನೆಲೆ ಗಾಯಕ ಸಂಜೀತ್​​ ಹೆಗ್ಡೆ ಮತ್ತು ತಂಡದಿಂದ ಕಾರ್ಯಕ್ರಮ ಕೂಡ ನಡೆಯಲಿದ್ದು, ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಅಷ್ಟೇ ಅಲ್ಲ, ಮೊದಲ ದಿನವೇ ಸಾಧು ಕೋಕಿಲ ಹಾಗೂ ತಂಡದಿಂದ ಸಂಗೀತ ರಸದೌತಣ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಕನ್ನಡ ರ್ಯಾಪರ್​ ಆಲ್​ ಓಕೆ ತಂಡದಿಂದ ಕೂಡ ಸಂಗೀತ ಕಾರ್ಯಕ್ರಮ ಇದ್ದು, ಇದರ ಜೊತೆ ಬೆನ್ನಿ ದಯಾಳ್ ಸೇರಿ ಬಾಲಿವುಡ್ ಹಾಡುಗಾರರಿಂದ ಸಂಗೀತ ರಸದೌತಣ ನಡೆಯಲಿದೆ. ಇನ್ನು ಸ್ಥಳೀಯ ಪ್ರತಿಭೆಗಳಿಗೂ ಈ ಬಾರಿಯ ಯುವ ದಸರಾದಲ್ಲಿ ಅವಕಾಶ ಕೊಡಲಾಗಿದೆ ಎಂದು ಮೈಸೂರು ಎಸ್​ಪಿ ಸೀಮಾ ಲಾಟ್ಕರ್ ಹೇಳಿದರು.

ಇದನ್ನೂ ಓದಿ:ಮಹಿಷ ದಸರಾ ಮುಗಿಯುವವರೆಗೆ ಸಂಸದ ಪ್ರತಾಪ್ ಸಿಂಹರನ್ನ ಬಂಧಿಸಿ: ಮಾಜಿ ಮೇಯರ್ ಪುರುಷೋತ್ತಮ

ಇನ್ನು ಮೈಸೂರು ದಸರಾದಲ್ಲಿ ಈ ಬಾರಿ ವಿಶೇಷವಾಗಿ ಏರ್​ ಶೋ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಅವರು ‘ಐದು ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್​ಶೋ ನಡೆಯುತ್ತಿದ್ದು, ಅಕ್ಟೋಬರ್​ 22 ಮತ್ತು 23ರಂದು ನಡೆಯಲಿದೆ ಎಂದರು. ಇನ್ನು ಅ.22ರಂದು ಏರ್​ಶೋ ರಿಹರ್ಸಲ್  ನಡೆಯಲಿದ್ದು, 23 ರಂದು ಸಂಜೆ 4 ಗಂಟೆಗೆ 45 ನಿಮಿಷಕ್ಕೆ ಪಂಜಿನ ಕವಾಯತು ಮೈದಾನದಲ್ಲಿ ಮುಖ್ಯ ಏರ್​ಶೋ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Tue, 10 October 23