AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಸಿಎಂ ಸಿದ್ದರಾಮಯ್ಯ ಮನೆಗೆ ಕಲ್ಲು ತೂರಿದ ವ್ಯಕ್ತಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು

ಮೈಸೂರಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ನಿನ್ನೆ ಭೇಟಿ ನೀಡಿದ ವ್ಯಕ್ತಿಯೊಬ್ಬ ಸೆಲ್ಫೀ ತೆಗೆದಿದ್ದನು. ಇಂದು ಅದೇ ವ್ಯಕ್ತಿ ಸಿಎಂ ಮನೆಗೆ ಕಲ್ಲು ತೂರಿದ್ದು, ಕಿಟಕಿ ಗಾಜು ಹಾನಿಯಾಗಿದೆ. ಭದ್ರತಾ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಕೂಡಲೇ ಆತನನ್ನು ಬಂಧಿಸಿದ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಮೈಸೂರು: ಸಿಎಂ ಸಿದ್ದರಾಮಯ್ಯ ಮನೆಗೆ ಕಲ್ಲು ತೂರಿದ ವ್ಯಕ್ತಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಕಲ್ಲು ತೂರಿದ ವ್ಯಕ್ತಿ
ದಿಲೀಪ್​, ಚೌಡಹಳ್ಳಿ
| Edited By: |

Updated on: Oct 10, 2023 | 7:24 PM

Share

ಮೈಸೂರು, ಅ.10: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನಿವಾಸಕ್ಕೆ ವ್ಯಕ್ತಿಯೊಬ್ಬ ಕಲ್ಲು ಎಸೆದ ಘಟನೆ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ಸತ್ಯಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ಈತ ಮಾಡಿದ ಕೆಲವು ಅವಾಂತರಗಳು ಕೂಡ ಬೆಳಕಿಗೆ ಬಂದಿವೆ.

ಪ್ರಕರಣ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಹಿಂದೆ ಸತ್ಯಮೂರ್ತಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಕಲ್ಲು ಎಸೆದವ ಮಾನಸಿಕ ಅಸ್ವಸ್ಥನಲ್ಲ. ಮಾನಸಿಕ ಅಸ್ವಸ್ಥ ಎಂಬುದಕ್ಕೆ ಅಧಿಕೃತ ವೈದ್ಯಕೀಯ ದಾಖಲೆಯಿಲ್ಲ. ಹೀಗಾಗಿ ಕಲ್ಲು ಎಸೆತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಎಲ್ಲಿದೆಯಪ್ಪಾ 10 ಕೆಜಿ ಅಕ್ಕಿ: ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಬೊಮ್ಮಾಯಿ

ದ್ವಿಚಕ್ರ ವಾಹನದಲ್ಲಿ ಬಂದು ಸಿಎಂ ಮನೆ ಮೇಲೆ ಕಲ್ಲು ತೂರಿದ್ದಾನೆ. ತಡೆಯಲು ಮುಂದಾದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ನಂತರ ಆತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಸಿಎಂ ಮನೆ ಮೇಲೆ ಕಲ್ಲೆಸೆಯಲು ಯಾರಾದರೂ ಹೇಳಿಕೊಟ್ಟಿದ್ದಾರಾ? ಕಲ್ಲು ತೂರಿದವನ ಹಿನ್ನೆಲೆ ಪತ್ತೆ ಹಚ್ಚುತ್ತಿದ್ದೇವೆ ಎಂದರು.

ನಿನ್ನೆ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದ ಆರೋಪಿ

ನಿನ್ನೆಯಷ್ಟೇ ಸಿಎಂ‌‌ ನಿವಾಸಕ್ಕೆ ಸಿದ್ದರಾಮಯ್ಯ ಅವರನ್ನ ಭೇಟಿಯಾಗಲೆಂದು ಆಗಮಿಸಿದ್ದ ಆರೋಪಿ ಸತ್ಯಮೂರ್ತಿ, ಈ ಬಗ್ಗೆ ಸೆಲ್ಫಿ ವಿಡಿಯೋ ಸಹ ಮಾಡಿದ್ದ. ಇಂದು ಬೆಳಗ್ಗೆ ಬಂದು ಸಿದ್ದರಾಮಯ್ಯ ಅವರ ನಿವಾಸದ ಮನೆಯ ಕಿಟಕಿಗೆ ಕಲ್ಲು ತೂರಿದ್ದಾನೆ.

ತನ್ನ ಅವಾಂತರಗಳಿಗೆ ತಾನೇ ಬಿಲ್ಡಪ್ ಕೊಟ್ಟುಕೊಳ್ಳುತ್ತಿದ್ದ ಆರೋಪಿ

ಕಳೆದ ಚುನಾವಣೆಯಲ್ಲಿ ಇವಿಎಂ ಒಡೆದಿದ್ದ ಆರೋಪಿ ಸತ್ಯಮೂರ್ತಿ, ಇವಿಎಂ‌ ಒಡೆದ ದೃಶ್ಯ ಬಳಸಿ ಜೈಲರ್ ಸಿನಿಮಾ ಹಾಡನ್ನ ಮಿಕ್ಸ್ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್‌ ಮಾಡಿದ್ದ. ಅಷ್ಟೇ ಅಲ್ಲದೆ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂಂದ್ರ ಅವರ ಫೋಟೊಗೆ ರೌಡಿ ರಾಜೇಂದ್ರ ಎಂದು ಪೋಸ್ಟ್ ಮಾಡಿದನು. ಆ ಮೂಲಕ ತನ್ನ ಅವಾಂತರಗಳಿಗೆ ತಾನೇ ಬಿಲ್ಡಪ್​ಕೊಟ್ಟುಕೊಳ್ಳುತ್ತಿದ್ದನು. ಹೀಗಾಗಿ ಆತನನ್ನು ಮಾನಸಿತ ಅಸ್ವಸ್ಥತ ಎಂದು ಈ ಹಿಂದೆ ಹೇಳಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ