ರೇವಣ್ಣ ವಿರುದ್ಧ ಏಕವಚನದಲ್ಲಿ ಚಲುವರಾಯಸ್ವಾಮಿ ನೇರ ವಾಗ್ದಾಳಿ

|

Updated on: Dec 02, 2019 | 2:39 PM

ಮಂಡ್ಯ: ಹೆಚ್.ಡಿ.ರೇವಣ್ಣ ಒಬ್ಬ ರಾಜಕಾರಣಿನಾ, ಅವನಿಗೆ ಸಂಸ್ಕೃತಿ ಇದ್ಯಾ? ಮಾಜಿ ಪ್ರಧಾನಿ ಮಗ ಹೇಗೆ ನಡೆದುಕೊಳ್ಳಬೇಕು ಅಂತಾ ಅವನಿಗೆ ಗೊತ್ತಿಲ್ವಾ? ಎಂದು ಕೆ.ಆರ್‌.ಪೇಟೆಯಲ್ಲಿ ರೇವಣ್ಣ ವಿರುದ್ಧ ಎನ್​. ಚಲುವರಾಯಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಾತು ಎತ್ತಿದ್ರೆ ಪಿಡಬ್ಲ್ಯೂಡಿ ಅಂತಾನೆ. ಅದೆಲ್ಲಾ ಬಿಟ್ಟು ಮಂಡ್ಯದಲ್ಲಿ ರಾಜಕಾರಣ ಮಾಡೋಕೆ ಹೇಳಿ. ಕೆ.ಆರ್‌.ಪೇಟೆಗೂ ಇವನಿಗೂ ಏನ್ ಸಂಬಂಧ. ಇವನು ಯಾರು ರೀ? ಮಾತು ಎತ್ತಿದ್ರೆ ನನ್ನ ತಮ್ಮನಿಗೆ ಹೇಳಿದ್ದೀನಿ ಅಂತಾನೆ. ದೇವೇಗೌಡರ ಮಗ, ಕುಮಾರಸ್ವಾಮಿ ಅಣ್ಣ ಇಷ್ಟೇ ಅವನ ಐಡೆಂಟಿಟಿ. ಅದನ್ನು […]

ರೇವಣ್ಣ ವಿರುದ್ಧ ಏಕವಚನದಲ್ಲಿ ಚಲುವರಾಯಸ್ವಾಮಿ ನೇರ ವಾಗ್ದಾಳಿ
Follow us on

ಮಂಡ್ಯ: ಹೆಚ್.ಡಿ.ರೇವಣ್ಣ ಒಬ್ಬ ರಾಜಕಾರಣಿನಾ, ಅವನಿಗೆ ಸಂಸ್ಕೃತಿ ಇದ್ಯಾ? ಮಾಜಿ ಪ್ರಧಾನಿ ಮಗ ಹೇಗೆ ನಡೆದುಕೊಳ್ಳಬೇಕು ಅಂತಾ ಅವನಿಗೆ ಗೊತ್ತಿಲ್ವಾ? ಎಂದು ಕೆ.ಆರ್‌.ಪೇಟೆಯಲ್ಲಿ ರೇವಣ್ಣ ವಿರುದ್ಧ ಎನ್​. ಚಲುವರಾಯಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಾತು ಎತ್ತಿದ್ರೆ ಪಿಡಬ್ಲ್ಯೂಡಿ ಅಂತಾನೆ. ಅದೆಲ್ಲಾ ಬಿಟ್ಟು ಮಂಡ್ಯದಲ್ಲಿ ರಾಜಕಾರಣ ಮಾಡೋಕೆ ಹೇಳಿ. ಕೆ.ಆರ್‌.ಪೇಟೆಗೂ ಇವನಿಗೂ ಏನ್ ಸಂಬಂಧ. ಇವನು ಯಾರು ರೀ? ಮಾತು ಎತ್ತಿದ್ರೆ ನನ್ನ ತಮ್ಮನಿಗೆ ಹೇಳಿದ್ದೀನಿ ಅಂತಾನೆ. ದೇವೇಗೌಡರ ಮಗ, ಕುಮಾರಸ್ವಾಮಿ ಅಣ್ಣ ಇಷ್ಟೇ ಅವನ ಐಡೆಂಟಿಟಿ. ಅದನ್ನು ಬಿಟ್ರೆ ಲೋಕೋಪಯೋಗಿನೇ ಬೇಕು ಅಂತಾನೇ ಎಂದು ಕಿಡಿಕಾರಿದ್ದಾರೆ.

ಹಿಂಬಾಗಿಲಿನಿಂದ ಮಂತ್ರಿ ಆದ:
ಕುಮಾರಸ್ವಾಮಿ 20 ತಿಂಗಳು ಸಿಎಂ ಆದಾಗ ರೇವಣ್ಣ ವೋಟ್ ಹಾಕಲು ಬರಲಿಲ್ಲ. ಹಿಂಬಾಗಿಲಿನಿಂದ ಬಂದು ಮಂತ್ರಿ ಆದ. ನಮ್ಮ ನಾಯಕರ ಮಗ, ನನ್ನ ಸ್ನೇಹಿತನ ಸಹೋದರ ಎಂದು ನಾನೂ ಗೌರವ ಕೊಡುತ್ತಿದ್ದೆ. ಆದ್ರೆ, ಅವನು ರಾಜಕಾರಣಿ ಅಲ್ಲ, ನಾಯಕನೂ ಅಲ್ಲ ಎಂದು ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.