ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಪ್ರಕರಣ; ಮೃತಪಟ್ಟ ವ್ಯಕ್ತಿಯ ಹೆಸರು ಪರಿಹಾರ ಪಟ್ಟಿಯಲ್ಲಿ ಸೇರಿಸದ ಜಿಲ್ಲಾಡಳಿತ

| Updated By: sandhya thejappa

Updated on: Jun 12, 2021 | 9:54 AM

ಕೊರೊನಾ ಸೋಂಕಿನಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಕುಟುಂಬಸ್ಥರನ್ನು ಕಳೆದುಕೊಂಡು ಸಂಬಂಧಿಕರು ಮುಂದಿನ ಜೀವನ ಹೇಗೆ ಎಂದು ದಿಕ್ಕು ತೋಚದೆ ಕುಳಿತಿದ್ದಾರೆ. ಇದೇ ರೀತಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಮೃತಪಟ್ಟ ವ್ಯಕ್ತಿಯ ಕುಟುಂಬ ಕಣ್ಣೀರಾಕುತ್ತಿದೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಪ್ರಕರಣ; ಮೃತಪಟ್ಟ ವ್ಯಕ್ತಿಯ ಹೆಸರು ಪರಿಹಾರ ಪಟ್ಟಿಯಲ್ಲಿ ಸೇರಿಸದ ಜಿಲ್ಲಾಡಳಿತ
ಸಾಂದರ್ಭಿಕ ಚಿತ್ರ
Follow us on

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಈ ದುರಂತ ಪ್ರಕರಣಕ್ಕೆ ಸಂಬಂಧಿಸಿ ಮೃತಪಟ್ಟ ವ್ಯಕ್ತಿಯೊಬ್ಬರ ಹೆಸರು ಪಟ್ಟಿಯಲಿಲ್ಲ ಎಂಬ ಮಾಹಿತಿ ಇದೀಗ ತಿಳಿದುಬಂದಿದ್ದು, ಆಕ್ಸಿಜನ್ ದುರಂತದಿಂದ ಮೃತಪಟ್ಟವರ ಹೆಸರು ಮುಚ್ಚಿಡಲು ಜಿಲ್ಲಾಡಳಿತ ಮುಂದಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಆಕ್ಸಿಜನ್ ಕೊರತೆಯಿಂದ ಮೊದಲು ಸಾವನಪ್ಪಿದ್ದ ಮೊದಲ ವ್ಯಕ್ತಿಯ ಹೆಸರು ಪಟ್ಟಿಯಲ್ಲಿ ಜಿಲ್ಲಾಡಳಿತ ಸೇರಿಸಿಲ್ಲ ಎಂದು ಹೇಳಲಾಗುತ್ತಿದೆ.

ಕೊರೊನಾ ಸೋಂಕಿನಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಕುಟುಂಬಸ್ಥರನ್ನು ಕಳೆದುಕೊಂಡು ಸಂಬಂಧಿಕರು ಮುಂದಿನ ಜೀವನ ಹೇಗೆ ಎಂದು ದಿಕ್ಕು ತೋಚದೆ ಕುಳಿತಿದ್ದಾರೆ. ಇದೇ ರೀತಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಮೃತಪಟ್ಟ ವ್ಯಕ್ತಿಯ ಕುಟುಂಬ ಕಣ್ಣೀರಾಕುತ್ತಿದೆ. ಜಿಲ್ಲೆಯ ಕೊಳ್ಳೇಲಾಗದ ಮುಂಡಿಗುಂಡ ನಿವಾಸಿಯಾದ ಜಯಶಂಕರ್ (40) ಆಕ್ಸಿಜನ್ ಸಿಗದೆ ಮೇ 2ರಂದು ಸಾವವನ್ನಪ್ಪಿದ್ದರು. ಪತಿಯನ್ನು ಕಳೆದುಕೊಂಡ ಪತ್ನಿಗೆ ದಿಕ್ಕು ತೋಚದಂತಾಗಿದೆ.

ಮೃತ ವ್ಯಕ್ತಿ ಜಯಶಂಕರ್ ಉಸಿರಾಟದ ಸಮಸ್ಯೆಯಿಂದ ಏಪ್ರಿಲ್ 27 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಕ್ಸಿಜನ್ ಸಿಗದೆ ಮರಣ ಹೊಂದಿದ್ದರು. ಮೃತಪಟ್ಟ 24 ಮಂದಿಯ ಪರಿಹಾರದ ಪಟ್ಟಿಯಲ್ಲಿ ಜಯಶಂಕರ್ ಹೆಸರನ್ನು ಜಿಲ್ಲಾಡಳಿತ ಕೈಬಿಟ್ಟಿದೆ. ಪಟ್ಟಿಯಲ್ಲಿ ಹೆಸರಿಲ್ಲದೇ ಇರುವುದನ್ನು ನೋಡಿ ಪತ್ನಿ ಆಘಾತಕ್ಕೆ ಒಳಗಾಗಿದ್ದಾರೆ. ಜಯಶಂಕರ್ ಸಾವನ್ನಪ್ಪಿದ ಬಳಿಕ ಜಿಲ್ಲಾಡಳಿತ ಶವವನ್ನು ಕುಟುಂಬಸ್ಥರಿಗೆ ಕೊಟ್ಟು ಕಳುಹಿಸಿದೆ. ನೋವಿನಲ್ಲಿದ್ದ ಸಂಬಂಧಿಕರು ಏನೂ ಕೇಳಲಾಗದೆ ಶವ ತೆಗೆದುಕೊಂಡು ಹೋಗಿದ್ದರು.

ಶವ ಸಾಗಿಸುವ ದೃಶ್ಯ ಟಿವಿ9 ಕ್ಯಾಮಾರಾದಲ್ಲಿ ಸೆರೆಯಾಗಿತ್ತು. ಮೃತ ವ್ಯಕ್ತಿಯ ಹೆಸರು ಪರಿಹಾರದ ಪಟ್ಟಿಯಲ್ಲಿ ಸೇರಿಸದಿರುವ ಕಾರಣ ವೃದ್ಧ ಪೋಷಕರು, ಇಬ್ಬರು ಚಿಕ್ಕ ಹೆಣ್ಣು ಮಕ್ಕಳೊಂದಿಗೆ ಮೃತನ ಮಡದಿ ಕಣ್ಣೀರಾಕುತ್ತಿದ್ದಾರೆ.

ಇದನ್ನೂ ಓದಿ

Anjeer Benefits: ಅಂಜೂರದ ಹಣ್ಣು ರುಚಿಗಾಗಿ ಮಾತ್ರ ಸೇವಿಸಬೇಡಿ, ಆರೋಗ್ಯಕರ ಗುಣಲಕ್ಷಣದ ಬಗ್ಗೆಯೂ ಗಮನಹರಿಸಿ

ಅಪ್ರಾಪ್ತೆ ಮೇಲೆ ರೇಪ್​ ಮಾಡಿದ ಆರೋಪ ಹೊತ್ತ ನಟ ಪರ್ಲ್​ ವಿ. ಪುರಿಗೆ ಸಂತ್ರಸ್ತೆಯ ತಾಯಿ ಬೆಂಬಲ; ಬಿಗ್​ ಟ್ವಿಸ್ಟ್​

(name of the person who died in Chamarajanagar district is not included in the relief list)