ಮೈಸೂರು ಡಿಸಿಯಾಗಿ ನೇಮಿಸಲು ಒತ್ತಾಯ; ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಆನ್ಲೈನ್ ಕ್ಯಾಂಪೇನ್
ರೋಹಿಣಿ ಸಿಂಧೂರಿಯನ್ನು ಮತ್ತೆ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ನೇಮಿಸುವಂತೆ ಒತ್ತಾಯಿಸಿ, ಚೇಂಜ್ ಆರ್ಗ್ ಸಂಸ್ಥೆಯಿಂದ ‘ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಅಭಿಯಾನ ಆರಂಭವಾಗಿದೆ.
ಮೈಸೂರು: ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರ ಆನ್ಲೈನ್ ಕ್ಯಾಂಪೇನ್ ನಡೆಯುತ್ತಿದೆ. ರೋಹಿಣಿ ಸಿಂಧೂರಿಯನ್ನು ಮತ್ತೆ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ನೇಮಿಸುವಂತೆ ಒತ್ತಾಯಿಸಿ, ಚೇಂಜ್ ಆರ್ಗ್ ಸಂಸ್ಥೆಯಿಂದ ‘ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಅಭಿಯಾನ ಆರಂಭವಾಗಿದೆ. ಈಗಾಗಲೇ ಸುಮಾರು 26ಸಾವಿರ ಜನರಿಂದ ಸಹಿ ಸಂಗ್ರಹವಾಗಿದ್ದು, ರೋಹಿಣಿ ಸಿಂಧೂರಿಯನ್ನು ಮರಳಿ ಮೈಸೂರಿಗೆ ನೇಮಿಸುವಂತೆ ಮನವಿ ಮಾಡಿದೆ. ಚೇಂಜ್ ಆರ್ಗ್ ಸಂಸ್ಥೆ, ಸಹಿ ಸಂಗ್ರಹ ಅಭಿಯಾನದ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ಮನವಿ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ.
ಮತ್ತೊಂದು ಆಡಿಯೋ ವೈರಲ್ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಯದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಆಡಿಯೋದಲ್ಲಿ ಸಾ.ರಾ.ಮಹೇಶ್ ಮತ್ತು ರಾಜೀವ್ ವಿರುದ್ಧ ಆರೋಪ ಕೇಳಿಬಂದಿದೆ. ತನ್ನ ವರ್ಗಾವಣೆಗೆ ಇವರಿಬ್ಬರ ಷಡ್ಯಂತ್ರವಿದೆ ಎಂದು ದೂರಿದ್ದಾರೆ. ಅಲ್ಲದೇ ಸಾ.ರಾ.ಮಹೇಶ್ ಮತ್ತು ರಾಜೀವ್ ಭೂ ಹಗರಣದಲ್ಲಿ ಭಾಗಿದ್ದಾರೆ ಎನ್ನುವ ಮಾತುಗಳು ವೈರಲ್ ಆದ ಆಡಿಯೋದಲ್ಲಿ ಕೇಳಿಬಂದಿವೆ.
ಚೇಂಜ್ ಆರ್ಗ್ ಸಂಸ್ಥೆಯಿಂದ ಅಭಿಯಾನ
ವರ್ಗಾವಣೆಗೆ ಸಾ.ರಾ.ಮಹೇಶ್, ರಾಜೀವ್ ಷಡ್ಯಂತ್ರವಿದೆ; ರೋಹಿಣಿ ಸಿಂಧೂರಿಯವರದ್ದು ಎನ್ನಲಾದ ಆಡಿಯೋದಲ್ಲಿ ಆರೋಪ
ವರ್ಗಾವಣೆಗೂ ಮುನ್ನ ಭೂ ಅಕ್ರಮದ ಬಗ್ಗೆ ತನಿಖೆಗೆ ಆದೇಶಿಸಿದ ರೋಹಿಣಿ ಸಿಂಧೂರಿ; ಆದೇಶ ಪ್ರತಿ ವೈರಲ್
(An online campaign is underway to appoint the Change Org organization Rohini Sindhuri as DC for Mysore)
Published On - 8:56 am, Sat, 12 June 21