Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಗಾವಣೆಗೆ ಸಾ.ರಾ.ಮಹೇಶ್, ರಾಜೀವ್ ಷಡ್ಯಂತ್ರವಿದೆ; ರೋಹಿಣಿ ಸಿಂಧೂರಿಯವರದ್ದು ಎನ್ನಲಾದ ಆಡಿಯೋದಲ್ಲಿ ಆರೋಪ

ನಾನು ಭೂ ಅಕ್ರಮದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದೆ. ಇದಕ್ಕಾಗಿ ನಾನು ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೆ. ಹೀಗಾಗಿಯೇ ನನ್ನ ವರ್ಗಾವಣೆಗೆ ಷಡ್ಯಂತ್ರ ನಡೆದಿದೆ ಎಂದು ರೋಹಿಣಿ ಸಿಂಧೂರಿಯದ್ದು ಎನ್ನಲಾದ ಆಡಿಯೋದಲ್ಲಿ ಶಾಸಕ ಸಾ.ರಾ.ಮಹೇಶ್ ಮತ್ತು ರಾಜೀವ್ ವಿರುದ್ಧ ಆರೋಪ ಕೇಳಿಬಂದಿದೆ.

ವರ್ಗಾವಣೆಗೆ ಸಾ.ರಾ.ಮಹೇಶ್, ರಾಜೀವ್ ಷಡ್ಯಂತ್ರವಿದೆ; ರೋಹಿಣಿ ಸಿಂಧೂರಿಯವರದ್ದು ಎನ್ನಲಾದ ಆಡಿಯೋದಲ್ಲಿ ಆರೋಪ
ಶಾಸಕ ಸಾ.ರಾ ಮಹೇಶ್ ಮತ್ತು ರೋಹಿಣಿ ಸಿಂಧೂರಿ
Follow us
TV9 Web
| Updated By: sandhya thejappa

Updated on: Jun 10, 2021 | 11:41 AM

ಮೈಸೂರು: ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಯವರದ್ದು ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದ್ದು, ಆ ಆಡಿಯೋದಲ್ಲಿ ಸಾ.ರಾ.ಮಹೇಶ್ ಮತ್ತು ರಾಜೀವ್ ವಿರುದ್ಧ ಆರೋಪ ಕೇಳಿಬಂದಿದೆ. ಇಬ್ಬರು ಮೈಸೂರಿನಲ್ಲಿ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ. ತನ್ನ ವರ್ಗಾವಣೆಗೆ ಈ ಇಬ್ಬರ ಷಡ್ಯಂತ್ರವಿದೆ ಎಂಬ ಆರೋಪ ಆಡಿಯೋದಲ್ಲಿದೆ. ರಾಜೀವ್ ಮುಡಾ ಅಧ್ಯಕ್ಷರಾದ ಬಳಿಕ ಎಲ್ಲ ತೀರ್ಮಾನಗಳ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದು, ಶಾಸಕ ಸಾ.ರಾ.ಮಹೇಶ್ ದಾಖಲೆ ಕೇಳಿದ್ದಕ್ಕೆ ಕೊಟ್ಟಿದ್ದೇನೆ. ಬೇರೆಯವರು ಕೇಳಿದರೆ ಅವರ ದಾಖಲೆಯನ್ನು ಕೊಡುತ್ತೇನೆ ಎಂಬ ಮಾತುಗಳು ಆಡಿಯೋದಲ್ಲಿವೆ.

ನಾನು ಭೂ ಅಕ್ರಮದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದೆ. ಇದಕ್ಕಾಗಿ ನಾನು ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೆ. ಹೀಗಾಗಿಯೇ ನನ್ನ ವರ್ಗಾವಣೆಗೆ ಷಡ್ಯಂತ್ರ ನಡೆದಿದೆ ಎಂದು ರೋಹಿಣಿ ಸಿಂಧೂರಿಯದ್ದು ಎನ್ನಲಾದ ಆಡಿಯೋದಲ್ಲಿ ಶಾಸಕ ಸಾ.ರಾ.ಮಹೇಶ್ ಮತ್ತು ರಾಜೀವ್ ವಿರುದ್ಧ ಆರೋಪ ಕೇಳಿಬಂದಿದೆ.

ಸಾ.ರಾ.ಮಹೇಶ್ ಏಕಾಂಗಿ ಧರಣಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹುಣಸೂರು ರಸ್ತೆಯ ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ರಾಜಕಾಲುವೆ ಮೇಲೆ ಸಾ.ರಾ.ಕಲ್ಯಾಣ ಮಂಟಪ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಆರೋಪವನ್ನು ಸಾಬೀತುಪಡಿಸುವಂತೆ ಸಾ.ರಾ.ಮಹೇಶ್ ಪ್ರತಿಭಟನೆ ನಡೆಸಿದರು.

ಐಎಎಸ್ ಅಧಿಕಾರಿಗಳನ್ನು ಓಡಿಸುತ್ತಿದ್ದಾರೆ; ಹೆಚ್.ವಿಶ್ವನಾಥ್ ಕೊರೊನಾ ಓಡಿಸಿ ಎಂದು ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿ ಕರೆ ನೀಡಿದ್ದರು. ಆದರೆ ಇವರೆಲ್ಲಾ ಸೇರಿ ಐಎಎಸ್ ಅಧಿಕಾರಿಗಳನ್ನು ಓಡಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ಒಳ್ಳೆಯ ಅಧಿಕಾರಿಗಳು. ಇಬ್ಬರು ಐಎಎಸ್ ಅಧಿಕಾರಿಗಳನ್ನು ಹೊರಹಾಕಿದ್ದು ರಾಜಕಾರಣಿಗಳ ಸ್ವಾರ್ಥ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ

ವರ್ಗಾವಣೆಗೂ ಮುನ್ನ ಭೂ ಅಕ್ರಮದ ಬಗ್ಗೆ ತನಿಖೆಗೆ ಆದೇಶಿಸಿದ ರೋಹಿಣಿ ಸಿಂಧೂರಿ; ಆದೇಶ ಪ್ರತಿ ವೈರಲ್

ಕೊರೊನಾ ಲಸಿಕೆ ಪಡೆಯಲು ಹೋದಾಗ ಸೂಜಿಗೆ ಹೆದರಿ ನೆಲಕ್ಕುರುಳಿದ ವ್ಯಕ್ತಿ: ವಿಡಿಯೋ ವೈರಲ್

(Sa Ra Mahesh and Rajeev has involved in Rohini Sindhuri transfer process alleged in leaked audio clip)