Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಎಸ್ಎಸ್ಎಲ್​ಸಿ ವಿದ್ಯಾರ್ಥಿನಿ ಮದುವೆಗೆ ಸಿದ್ಧತೆ; ಸ್ನೇಹಿತೆಯಿಂದ ನಿಂತ ಬಾಲ್ಯ ವಿವಾಹ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಾಕ್​ಡೌನ್​ ನಡುವೆ ಹಲವು ಬಾಲ್ಯ ವಿವಾಹಗಳು ನಡೆದುಹೋಗಿವೆ. ಇನ್ನು ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಹೋದ ಅಧಿಕಾರಿಗಳು ವಿವಾಹವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲದೆ ಪೋಷಕರಿಗೆ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಿದ್ದಾರೆ.

ಮೈಸೂರಿನಲ್ಲಿ ಎಸ್ಎಸ್ಎಲ್​ಸಿ ವಿದ್ಯಾರ್ಥಿನಿ ಮದುವೆಗೆ ಸಿದ್ಧತೆ; ಸ್ನೇಹಿತೆಯಿಂದ ನಿಂತ ಬಾಲ್ಯ ವಿವಾಹ
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on: Jun 12, 2021 | 8:31 AM

ಮೈಸೂರು: ಜೀವನದಲ್ಲಿ ಏನಾದರೂ ಸಾಧನೆ ಮಾಡಿ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಬೇಕು ಅಂತ ಕನಸು ಕಂಡಿರುತ್ತಾರೆ. ಅದಕ್ಕೆ ವಿದ್ಯಾಭ್ಯಾಸದ ಮೊದಲು ಹಂತದಿಂದ ತಯಾರಿನೂ ನಡೆಸಿಕೊಳ್ಳುತ್ತಾರೆ. ಆದರೆ ಮಕ್ಕಳ ಕನಸು, ಆಸೆ ಆಕಾಂಶೆಗಳಿಗೆ ಮುಳ್ಳಾಗಿರುವುದು ಬಾಲ್ಯ ವಿವಾಹ ಎನ್ನುವ ಕೆಟ್ಟ ಪದ್ಧತಿ. ಈಗ ತಾನೇ ಪ್ರಪಂಚದ ಜ್ಞಾನ ಪಡೆಯುತ್ತಿರುವ ಮಕ್ಕಳನ್ನು ಬಾಲ್ಯ ವಿವಾಹಕ್ಕೆ ಒಡ್ಡಿ ಭವಿಷ್ಯಕ್ಕೆ ಕಡಿವಾಣ ಹಾಕಲು ಪೋಷಕರೇ ನಿಂತಿದ್ದಾರೆ. ತಾವೇ ಸ್ವತಃ ಮುಂದೆ ನಿಂತು ಸಂಸಾರದ ಬಗ್ಗೆ ಜ್ಞಾನವೇ ಇಲ್ಲದ ಮಕ್ಕಳನ್ನು ಸಂಸಾರ ಜೀವನಕ್ಕೆ ತಳ್ಳುತ್ತಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಾಕ್​ಡೌನ್​ ನಡುವೆ ಹಲವು ಬಾಲ್ಯ ವಿವಾಹಗಳು ನಡೆದುಹೋಗಿವೆ. ಇನ್ನು ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಹೋದ ಅಧಿಕಾರಿಗಳು ವಿವಾಹವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲದೆ ಪೋಷಕರಿಗೆ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಿದ್ದಾರೆ. ಬಾಲ್ಯ ವಿವಾಹದಿಂದ ಮಕ್ಕಳ ಭವಿಷ್ಯಕ್ಕೆ ಯಾವ ಯಾವ ರೀತಿ ಕೆಟ್ಟ ಪರಿಣಾಮ ಬೀಳುತ್ತದೆ ಎಂದು ಜಾಗೃತಿ ಮೂಡಿಸುತ್ತಿದ್ದರೂ, ಈ ಬಗ್ಗೆ ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ.

ಅರಮನೆ ನಗರಿಯಲ್ಲಿ ಲಾಕ್​ಡೌನ್​ ನಡುವೆ ಎಸ್ಎಸ್ಎಲ್​ಸಿ ವಿದ್ಯಾರ್ಥಿನಿ ಮದುವೆಗೆ ಸಿದ್ಧತೆ ನಡೆಸಿಕೊಂಡಿದ್ದರು. ಆದರೆ ಆಕೆಯ ಸ್ನೇಹಿತೆ ನೀಡಿದ ಮಾಹಿತಿಯಿಂದ ಬಾಲ್ಯ ವಿವಾಹ ನಿಂತು ಹೋಗಿದೆ. ಮೈಸೂರಿನ ಹೂಟಗಳ್ಳಿಯಲ್ಲಿ ಈ ಘಟನೆ ನಡೆದಿದ್ದು, ರಾಮನಗರದ ಯುವಕನ ಜೊತೆ ಮದುವೆಗೆ ಸಿದ್ಧತೆ ನಡೆದಿತ್ತು. ಆದರೆ ಬಾಲಕಿಯ ಸ್ನೇಹಿತೆಯಿಂದ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ವಿಜಯನಗರ ಪೊಲೀಸ್, ಒಡನಾಡಿ ಸಂಸ್ಥೆಯಿಂದ ಬಾಲಕ ಮನೆಗೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಪೋಷಕರು ಬಾಲಕಿಯನ್ನು ಬಚ್ಚಿಟ್ಟಿದ್ದರು. ಸದ್ಯ ಬಾಲಕಿಯ ಭವಿಷ್ಯಕ್ಕೆ ಅಡ್ಡಿಯಾಗುತ್ತಿದ್ದ ಬಾಲ್ಯ ವಿವಾಹ ನಿಂತಿದ್ದು, ಈ ಪ್ರಕರಣ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ

ಯಾದಗಿರಿ: ಇಂದು ಒಂದೇ ದಿನ 3 ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ಬಾಗಲಕೋಟೆಯಲ್ಲಿ ಲಾಕ್​ಡೌನ್​ ನಡುವೆ ಬಾಲ್ಯ ವಿವಾಹ; 28 ಬಾಲ್ಯ ವಿವಾಹಗಳನ್ನು ತಡೆದ ಅಧಿಕಾರಿಗಳು

(Preparation to child marriage to SSLC Student in mysuru but her friend stop the child marriage)

ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್