ಬೆಂಗಳೂರು, ಸೆಪ್ಟೆಂಬರ್ 20: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳು ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಅಂತ ಚಂದ್ರಬಾಬು ನಾಯ್ಡು ನೀಡಿದ್ದ ಸ್ಫೋಟಕ ಹೇಳಿಕೆ ಸದ್ಯ ದೇಶ ವ್ಯಾಪಿ ಸುದ್ದಿಯಾಗಿದೆ. ಇದೇ ವಿಷಯ ಇದೀಗ ರಾಜಕೀಯ ವಾಗ್ಯುದ್ಧಕ್ಕೂ ವೇದಿಕೆ ಆಗಿದೆ. ಈ ಮಧ್ಯೆ ಇತ್ತ ಕರ್ನಾಟಕದ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ (Nandini ghee) ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.
ಮುಜರಾಯಿ & ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೂಚನೆಯ ಮೇರೆಗೆ ಸುತ್ತೋಲೆ ಹೊರಡಿಸಿರುವ ಧಾರ್ಮಿಕ ದತ್ತಿ ಇಲಾಖೆ, ದೇವಸ್ಥಾನದ ಸೇವೆಗಳಿಗೆ, ದೀಪಗಳಿಗೆ, ಪ್ರಸಾದ ತಯಾರಿಕೆ ಮತ್ತು ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪಕ್ಕೆ ಕೆಎಂಎಫ್ ಅಧ್ಯಕ್ಷ ಸ್ಪಷ್ಟನೆ
ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಅನ್ನೋದನ್ನು ಟಿಟಿಡಿ ಒಪ್ಪಿಕೊಂಡಿದೆ. ಲಡ್ಡುಗೆ ಬಳಸಲಾಗಿರುವ ಕಚ್ಚಾವಸ್ತುಗಳ ಲ್ಯಾಬ್ ವರದಿ ಬಯಲಾಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ್ದ ಟಿಟಿಡಿ ಎಕ್ಸಿಕ್ಯೂಟಿವ್ ಅಧಿಕಾರಿ ಶ್ಯಾಮಲಾ ರಾವ್, ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಅದೇ ರೀತಿಯಾಗಿ ತಿರುಪತಿಯಲ್ಲಿ ತಯಾರಾಗುವ ಲಡ್ಡುವಿಗೆ ಬಳಸುವ ತುಪ್ಪದ ಮಾದರಿ ಪರೀಕ್ಷೆ ನಡೆಸಲಾಗಿದೆ. ಆ ತುಪ್ಪದಲ್ಲಿ ಮೀನಿನ ಎಣ್ಣೆ, ಪಾಮ್ ಆಯಿಲ್ ಪತ್ತೆಯಾಗಿದೆ. ಅಚ್ಚರಿ ಏನಂದ್ರೆ.. ದನದ ಮಾಂಸದಿಂದ ತೆಗೆದ ಕೊಬ್ಬು, ಹಂದಿ ಮಾಂಸದ ಪದರದಿಂದ ತೆಗೆದ ಬಿಳಿ ಕೊಬ್ಬು ತುಪ್ಪದಲ್ಲಿ ಇರುವುದು ಕೂಡ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ನಾನು ನಂದಿನಿ ತಿರುಪತಿಗೆ ಹೊಂಟೀನಿ: ಮತ್ತೆ ತಿಮ್ಮಪ್ಪನ ಲಡ್ಡುವಿನಲ್ಲಿ ಕರ್ನಾಟಕ ತುಪ್ಪದ ಘಮ
ಇನ್ನು ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಗೆ ಕರ್ನಾಟಕ ನಂದಿನಿ ತುಪ್ಪವೇ ಹೋಗುತ್ತಿದೆ. ಆದರೆ ಜಗನ್ ರೆಡ್ಡೆ ಸರ್ಕಾರದ ಅವಧಿಯಲ್ಲಿ 4 ವರ್ಷ ನಂದಿನಿ ತುಪ್ಪ ತಿರುಪತಿಗೆ ಸರಬರಾಜು ಆಗಿರಲಿಲ್ಲ. ಹೀಗಾಗಿ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ನಿನ್ನೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:41 pm, Fri, 20 September 24