ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರ, ವಾರಣಾಸಿಯಲ್ಲಿ ಅಧ್ಯಯನ
ಗಂಗೆಯಷ್ಟೇ ಪವಿತ್ರ ನದಿ ಕಾವೇರಿ ಎಂಬ ನಿಟ್ಟಿನಲ್ಲಿ ಕಾವೇರಿ ಆರತಿ ಮಾಡಲು ಸರ್ಕಾರ ಮುಂದಾಗಿದೆ. ಹಾಗಾಗಿ ಸಚಿವ ಚೆಲುವರಾಯಸ್ವಾಮಿ ನೇತೃತ್ವದ ನಿಯೋಗ ಕಾವೇರಿ ಆರತಿಯ ರೂಪುರೇಷೆ ತಯಾರಿಸಲಿದೆ. ಇದಕ್ಕಾಗಿ ನಿಯೋಗ ಇಂದು ಮತ್ತು ನಾಳೆ ಹರಿದ್ವಾರ ಹಾಗೂ ವಾರಣಾಸಿಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಲಿದೆ.
ಬೆಂಗಳೂರು, ಸೆಪ್ಟೆಂಬರ್ 20: ಗಂಗಾ ನದಿಗೆ ಮಾಡುವ ಗಂಗಾ ಆರತಿ ಮಾದರಿಯಲ್ಲಿ ಸದ್ಯ ಕಾವೇರಿ ನದಿಗೆ (cauvery river) ಕಾವೇರಿ ಆರತಿ ನಡೆಸಲು ಅಧ್ಯಯನ ಕೈಗೊಳ್ಳಲಾಗುತ್ತಿದೆ. ಇದ್ದಕ್ಕಾಗಿ ಸಚಿವ ಚೆಲುವರಾಯಸ್ವಾಮಿ ನೇತೃತ್ವದ ನಿಯೋಗ ಇಂದು ಮತ್ತು ನಾಳೆ ಹರಿದ್ವಾರ ಹಾಗೂ ವಾರಣಾಸಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ತಯಾರಿಸಲಿದ್ದಾರೆ.
ಗಂಗೆಯಷ್ಟೇ ಪವಿತ್ರ ನದಿ ಕಾವೇರಿ ಎಂಬ ನಿಟ್ಟಿನಲ್ಲಿ ಕಾವೇರಿ ಆರತಿ ಮಾಡಲು ಸರ್ಕಾರ ಮುಂದಾಗಿದೆ. ಹಾಗಾಗಿ ಸಮಿತಿಯು ಕಾವೇರಿ ಆರತಿಯ ರೂಪುರೇಷೆ ತಯಾರಿಸಲಿದೆ. ಅಂದರೆ ಕರ್ನಾಟಕದ ಯಾವ ಸ್ಥಳದಲ್ಲಿ ಮಾಡುವುದು? ಯಾವ ಜಾಗ ಸೂಕ್ತ? ಎಷ್ಟು ಖರ್ಚು-ವೆಚ್ಚ ತಗಲುತ್ತದೆ ಎಂಬಿತ್ಯಾದಿ ವಿಷಯಗಳ ಅಧ್ಯಯನವನ್ನು ತಂಡ ನಡೆಸಲಿದೆ.
ವಾರಕ್ಕೆ ಮೂರು ದಿನ ಕಾವೇರಿಗೆ ಆರತಿ: ಸುಮಾರು 5 ಕೋಟಿ ರೂ. ವೆಚ್ಚ
ಸದ್ಯಕ್ಕೆ ವಾರಕ್ಕೆ ಮೂರು ದಿನ ಕಾವೇರಿಗೆ ಆರತಿ ನಡೆಸುವ ಯೋಜನೆ ಇದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆಯೂ ಆಯೋಗ ನಿರ್ಧರಿಸಲಿದೆ. ಜೊತೆಗೆ ಪ್ರತೀ ವರ್ಷ ಮಾಡುವಂತೆ ಕ್ಯಾಬಿನೆಟ್ನಲ್ಲಿ ಇಟ್ಟು ಜಿಓ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ.
ಇದನ್ನೂ ಓದಿ: 70 ವರ್ಷಗಳಲ್ಲಿ ಮೊದಲ ಬಾರಿಗೆ ಬತ್ತಿ ಹೋಗಿದ್ದ ಕಾವೇರಿ ನದಿ ಮತ್ತೆ ಗತವೈಭವಕ್ಕೆ ಮರಳುತ್ತಿದೆ! ಇಲ್ಲಿದೆ ಚಿತ್ರಣ
ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಕಾವೇರಿಗೆ ಆರತಿ ಮಾಡುವ ಬಗ್ಗೆ ಪ್ಲ್ಯಾನ್ ಇದೆ ಎನ್ನಲಾಗುತ್ತಿದೆ. ಇದರ ಬಗ್ಗೆ ಚಾಮರಾಜನಗರ, ಮೈಸೂರು, ಮಂಡ್ಯ, ಮಡಿಕೇರಿ ಭಾಗದ ಶಾಸಕರ ನಿಯೋಗ ಅಧ್ಯಯನ ನಡೆಸಲಿದೆ.
ಇದನ್ನೂ ಓದಿ: ಕಾವೇರಿ ನೀರು ವಿವಾದ: ಕರ್ನಾಟಕ-ತಮಿಳುನಾಡಿಗೆ ಮಹತ್ವದ ಸೂಚನೆ ಕೊಟ್ಟ CWMA
ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ಶಿವಲಿಂಗೇಗೌಡ, ರಮೇಶ್ ಬಂಡಿ ಸಿದ್ದೇಗೌಡ, ಉದಯ್ ಗೌಡ, ರವಿಕುಮಾರ್ ಗಾಣಿಗ, ಬಾಲಕೃಷ್ಣ ಮಾಗಡಿ, ದರ್ಶನ್ ನಾರಾಯಣ್ ಮತ್ತು ನಟ ನಿರ್ದೇಶಕ ಸಾಧು ಕೋಕಿಲ ಒಳಗೊಂಡ ತಂಡ ಇಂದು ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಕಾವೇರಿ ಕುರಿತ ವಿಭಿನ್ನ ಹಾಡು ರಚಿಸಲು ಸಾಧು ಕೊಕಿಲಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಕೂಡ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.