70 ವರ್ಷಗಳಲ್ಲಿ ಮೊದಲ ಬಾರಿಗೆ ಬತ್ತಿ ಹೋಗಿದ್ದ ಕಾವೇರಿ ನದಿ ಮತ್ತೆ ಗತವೈಭವಕ್ಕೆ ಮರಳುತ್ತಿದೆ! ಇಲ್ಲಿದೆ ಚಿತ್ರಣ

ಈ ಬಾರಿ ಅವಧಿಗೆ ಮೊದಲೇ ಜಿಲ್ಲೆಗೆ ಮುಂಗಾರು ಎಂಟ್ರಿ ಕೊಟ್ಟಿದೆ. ಜೂನ್ ಒಂದರಿಂದ ಮುಂಗಾರು ಅಧಿಕೃತವಾಗಿ ಅಬ್ಬರಿಸಲಾರಂಭಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಮಳೆಯೇ ಇಲ್ಲದೆ ಅಂತರ್ಜಲ ಬರಿದಾಗಿದೆ. ಎಲ್ಲೆಡೆ ನೀರಿನ ಹಾಹಾಕಾರ ತಲೆದೋರಿತ್ತು. ಆದ್ರೆ ಈ ವರ್ಷ ಉತ್ತಮ ಮಳೆಯ ನಿರೀಕ್ಷೆ ಇದ್ದು, ಕೊಡಗು ಜಿಲ್ಲೆ ಎಂದಿನ ಮಳೆಗಾಲದ ವೈಭವಕ್ಕೆ ಮರಳುವ ಸಂಭವವಿದೆ.

70 ವರ್ಷಗಳಲ್ಲಿ ಮೊದಲ ಬಾರಿಗೆ ಬತ್ತಿ ಹೋಗಿದ್ದ ಕಾವೇರಿ ನದಿ ಮತ್ತೆ ಗತವೈಭವಕ್ಕೆ ಮರಳುತ್ತಿದೆ! ಇಲ್ಲಿದೆ ಚಿತ್ರಣ
70 ವರ್ಷದಲ್ಲಿ ಮೊದಲ ಬಾರಿಗೆ ಬತ್ತಿ ಹೋಗಿದ್ದ ಕಾವೇರಿ ನದಿ ಮತ್ತೆ ಗತವೈಭವ
Follow us
| Updated By: ಸಾಧು ಶ್ರೀನಾಥ್​

Updated on:May 20, 2024 | 11:32 AM

ಸುಮಾರು 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭರ್ತಿ ಬತ್ತಿ ಹೋಗಿದ್ದ ಕಾವೇರಿ (Cauvery) ಮತ್ತೆ ತನ್ನ ಗತವೈಭವಕ್ಕೆ ಮರಳುತ್ತಿದೆ. ತೀವ್ರ ಬರದಿಂದಾಗಿ ಹರಿಯುವಿಕೆಯನ್ನೇ ನಿಲ್ಲಿಸಿದ್ದ ಜೀವನದಿ ಕಾವೇರಿ ಮತ್ತೆ ಮೈದುಂಬಿಕೊಳ್ಳುತ್ತಿದೆ. ಇದು ಕಾವೇರಿ ಕೊಳ್ಳದ ಜನ ವರ್ಗದಲ್ಲಿ ಸಂತಸ ತಂದಿದೆ. ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ (Kodagu) ಉತ್ತಮ ಮಳೆಯಾಗ್ತಾ (Madikeri Rain) ಇರೋದ್ರಿಂದ ಕಾವೇರಿ ಮಾತ್ರವಲ್ಲ ಕೊಡಗಿನ ಎಲ್ಲಾ ನದಿ ತೊರೆಗಳು ಜೀವ ಪಡೆದುಕೊಂಡಿವೆ. ಎಲ್ಲೆಡೆ ಮತ್ತೆ ಹಸಿರು ನಳನಳಿಸುತ್ತಿದೆ.

# #Kodagu #Madikeri #Rain #MadikeriRain

ಅದು ಏಪ್ರಿಲ್ ಮೊದಲ … ಎಲ್ಲೆಲ್ಲೂ ಸುಡು ಬಿಸಿಲು.. ಭೀಕರ ಬರ.. ಪರಿಣಾಮ ಕೊಡಗಿನಲ್ಲಿ ಜೀವ ನದಿ ಹರಿಯುವಿಕೆ ನಿಲ್ಲಿಸಿ ಬಟಾಬಯಲಾಗಿದ್ದ ಭೀಕರ ದೃಶ್ಯವದು.. ಎಲ್ಲಿ ನೋಡಿದರೂ ಬರೀ ಬಂಡೆಗಲ್ಲುಗಳು.. ನೀರಿನ ಸುಳಿವೇ ಇಲ್ಲ.. ಕಾವೇರಿಯನ್ನ ನೀರಿಗಾಗಿ ಆಶ್ರಯಿಸಿದ್ದ ಹಳ್ಳಿಗಳು, ಪಟ್ಟಣಗಳು, ನಗರಗಳಂತೂ ಹನಿ ಹನಿ ನೀರಿಗೂ ತತ್ವಾರ ಪಡುವಂತಾಗಿತ್ತು.

ಆದ್ರೆ ಈಗಿನ ದೃಶ್ಯ ಹೇಗಿದೆಯೆಂದರೆ ಜೀವನದಿ ಮತ್ತೆ ಜೀವ ಪಡೆದುಕೊಂಡಿದೆ. ಉತ್ತಮ ಎನಿಸುವಷ್ಟರ ಮಟ್ಟಿಗೆ ಸರಾಗವಾಗಿ ನದಿ ಹರಿಯುತ್ತಿದೆ. ಕೊಡಗಿನ ದುಬಾರೆ, ವಾಲ್ನೂರು, ತೆಪ್ಪದಕಂಡಿ, ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಭರ್ತಿ 50 ದಿನಗಳ ಬಳಿಕ ಹರಿಯುವಿಕೆ ಶುರು ಮಾಡಿದೆ. ಸುಮಾರು 70 ವರ್ಷ ಗಳ ಹಿಂದೆ ಕಾವೇರಿ ನದಿ ಭೀಕರ ಬರಗಾಲಕ್ಕೆ ತುತ್ತಾಗಿ ಹರಿಯುವಿಕೆ ನಿಲ್ಲಿಸಿತ್ತು. ಅದಾದ ಬಳಿಕ ಈ ವರ್ಷವೇ ಇಷ್ಟೊಂದು ಕನಿಷ್ಟ ಮಟ್ಟಕ್ಕೆ ನದಿ ಇಳಿದಿತ್ತು. ಜಲಚರಗಳ ಮಾರಣಹೋಮವಾಗಿತ್ತು. ಆದ್ರೆ ಕೊಡಗಿನ ಹಲವೆಡೆ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದ ಪಶ್ಚಿಮ ಘಟ್ಟದ ಹಳ್ಳಕೊಳ್ಳಗಳು ನದಿ ತೊರೆಗಳಲ್ಲಿ ನೀರು ಹರಿದು ಅದು ಕಾವೇರಿ ಒಡಲು ಸೇರುತ್ತಿದೆ. ಪರಿಣಾಮ ಕಾವೇರಿಯು ನಿಧಾನವಾಗಿ ಮೈದುಂಬಿಕೊಳ್ಳುತ್ತಿದೆ ಎನ್ನುತ್ತಾರೆ ಚಂದ್ರಮೋಹನ್, ಕಾವೇರಿ ನದಿ ಬಚಾವೋ ಆಂದೋಲನ ಸಂಚಾಲಕ.

ಇದನ್ನೂ ಓದಿ: ಕೊಡಗಿನಲ್ಲಿ ಉತ್ತಮ‌ ಮಳೆ – ಮತ್ತೆ ಜೀವ ಪಡೆದುಕೊಂಡ ಕಾವೇರಿ ನದಿ, ನೀರಿನ ಬವಣೆ ದೂರ

ಇನ್ನು ಕಾವೇರಿ ಮೈ ದುಂಬಿಕೊಂಡಿರುವುದು ಕಾವೇರಿ ಕೊಳ್ಳದ ಜನರಲ್ಲಿ ಹರ್ಷ ಮೂಡಿಸಿದೆ. ವಿಶೇಷವಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳು ಕುಡಿಯುವ ನೀರಿಗಾಗಿ ಇನ್ನಿಲ್ಲದ ಬವಣೆ ಪಡುವಂತಾಗಿತ್ತು. ಆದ್ರೆ ಇದೀಗ ಕಾವೇರಿಯಲ್ಲಿ ನೀರು ಹರಿಯುತ್ತಿರುವುದು ಸದ್ಯ ನೀರಿನ ಬವಣೆ ದೂರವಾಗುವಂತೆ ಮಾಡಿದೆ. ಇದು ಸ್ಥಳೀಯ ಜನರಲ್ಲಿ ಹರ್ಷ ಮೂಡಿಸಿದೆ ಎನ್ನುತ್ತಾರೆ ವನಿತಾ ಸಿಎಂ, ಕುಶಾಲನಗರ ನಿವಾಸಿ.

ಈ ಬಾರಿ ಅವಧಿಗೆ ಮೊದಲೇ ಜಿಲ್ಲೆಗೆ ಮುಂಗಾರು ಎಂಟ್ರಿ ಕೊಟ್ಟಿದೆ. ಜೂನ್ ಒಂದರಿಂದ ಮುಂಗಾರು ಅಧಿಕೃತವಾಗಿ ಅಬ್ಬರಿಸಲಾರಂಭಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಮಳೆಯೇ ಇಲ್ಲದೆ ಅಂತರ್ಜಲ ಬರಿದಾಗಿದೆ. ಎಲ್ಲೆಡೆ ನೀರಿನ ಹಾಹಾಕಾರ ತಲೆದೋರಿತ್ತು. ಆದ್ರೆ ಈ ವರ್ಷ ಉತ್ತಮ ಮಳೆಯ ನಿರೀಕ್ಷೆ ಇದ್ದು, ಕೊಡಗು ಜಿಲ್ಲೆ ಎಂದಿನ ಮಳೆಗಾಲದ ವೈಭವಕ್ಕೆ ಮರಳುವ ಸಂಭವವಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On - 11:29 am, Mon, 20 May 24

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು